ರಾಷ್ಟ್ರೀಯ ಅಹಿಂದ ಸಂಘಟನೆಯ ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷರಾಗಿ ಶಿವಶಂಕರ್ ಗುಂಡುಗುರ್ತೀ ನೇಮಕ. ಹಣಮಂತ ದಂಡಗುಲ್ಕರ್ ಬಿಳವಾರ ಹರ್ಷ.

ರಾಷ್ಟ್ರೀಯ ಅಹಿಂದ ಸಂಘಟನೆಯ ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷರಾಗಿ ಶಿವಶಂಕರ್ ಗುಂಡುಗುರ್ತೀ ನೇಮಕ. ಹಣಮಂತ ದಂಡಗುಲ್ಕರ್ ಬಿಳವಾರ ಹರ್ಷ.
ಕಲ್ಬುರ್ಗಿ ಸುದ್ದಿ
ರಾಷ್ಟ್ರೀಯ ಅಹಿಂದ್ ಒಕ್ಕೂಟದ ಸುಮತಿಯ ಮೇರೆಗೆ ಹಾಗು ರಾಜ್ಯಾಧ್ಯಕ್ಷರಾಧ ಶ್ರೀ ಮುತ್ತಣ್ಣ ಶಿವಳ್ಳಿ ರಾಷ್ಟ್ರೀಯ ಅಹಿಂದ್ ಒಕ್ಕೂಟ ಬೆಂಗಳೂರು ಇವರ ಆದೇಶದ ಮೇರೆಗೆ ಮತ್ತು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ. ಬೀರಲಿಂಗ ಪೂಜಾರಿ ಮತ್ತು ಶ್ರೀ ಗುರನಗೌಡ ಎಸ್ ಪಾಟೀಲ್ ಶ್ರೀ ಬಿ ಶಿವಣ್ಣ ಮೈಸೂರ್ ಅವರ ನೇತೃತ್ವದಲ್ಲಿ ಕಲ್ಬುರ್ಗಿ ನಗರದ ಜಿಲ್ಲಾಧ್ಯಕ್ಷರನ್ನಾಗಿ ಶಿವಶಂಕರ್ ಗುಂಡಗುರ್ತಿ ಬಳಬಟ್ಟಿ ಅವರನ್ನು ನೇಮಕ ಮಾಡಿದ್ದು ತುಂಬಾ ಹರ್ಷವಾಗಿದೆ ಎಂದು ಹಣಮಂತ್ ದಂಡಗುಲ್ಕರ್ ಬಿಳವಾರ ಅವರು ಶುಭ ಕೋರಿದ್ದಾರೆ ಅಷ್ಟೇ ಅಲ್ಲದೆ ಹಿಂದುಳಿದ ಸಮುದಾಯಗಳನ್ನು ರಾಜಕೀಯವಾಗಿ ಹಾಗು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಬೆಳೆಯಲು ರಾಷ್ಟ್ರೀಯ ಅಹಿಂದ ಒಕ್ಕೂಟವು ವೈಯಕ್ತಿಕವಾಗಿ ಬೆಳೆಯಲು ವೇದಿಕೆ ಕಲ್ಪಿಸುವುದರ ಮೂಲಕ ರಾಜ್ಯಮಟ್ಟದಲ್ಲಿ ಹೆಸರುವಾಸಿಯಾದ ಸಂಘಟನೆಯಾಗಿದೆ ಎಂದು ಹಣಮಂತ್ ದಂಡಗುಲ್ಕರ್ , ಬಿಳವಾರ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ ಸರಳ ಸಜ್ಜನಿಕೆಗೆ ಪ್ರಾಮಾಣಿಕತೆಗೆ ಹೆಸರಾದ ಸಾಮಾಜಿಕ ಹೋರಾಟಗಾರ ಶಿವಶಂಕರ್ ಗುಂಡುಗುರ್ತಿ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದು ಇ ನಮ್ಮ ಬಾಗದ ಹಿಂದುಳಿದ ಸಮುದಾಯಕ್ಕೆ ಬಲಬಂದಂತಾಗಿದೆ ಎಂದು ಹಣಮಂತ್ ದಂಡಗುಲ್ಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ವರದಿ ಜೆಟ್ಟಪ್ಪ ಎಸ್ ಪೂಜಾರಿ