ತೋನಸನಹಳ್ಳಿ : ಕೋಟ್ಟೂರೇಶ್ವರ ಶರಣರ ಶಾಲಾ ವಾರ್ಷಿಕೋತ್ಸವ|
ತೋನಸನಹಳ್ಳಿ : ಕೋಟ್ಟೂರೇಶ್ವರ ಶರಣರ ಶಾಲಾ ವಾರ್ಷಿಕೋತ್ಸವ|
ಶಾಲಾ ವಾರ್ಷಿಕೋತ್ಸವವು ಮಕ್ಕಳ ಪ್ರತಿಭೆ ಅರಳಿಸುವ ವೇದಿಕೆಯಾಗಿದೆ :.. ಜಯಶ್ರೀ ಮತ್ತಿಮಡು.
ನಾಗರಾಜ್ ದಂಡಾವತಿ ವರದಿ ಶಹಾಬಾದ : - ಶಾಲಾ ವಾರ್ಷಿಕೋತ್ಸವವು ಮಕ್ಕಳ ಪ್ರತಿಭೆ ಅರಳಿಸುವ ವೇದಿಕೆಯಾಗಿದ್ದು, ಶಿಸ್ತು, ಸಂಸ್ಕಾರ, ಸ್ವದೇಶಿ ಸಂಸ್ಕೃತಿ, ಭಾಷಾಭಿಮಾನ ಮತ್ತು ಸಮಾಜ ಪರಿವರ್ತನೆ ಶಾಲೆಯ ಮುಖ್ಯ ಗುರಿಯಾಗಿದೆ ಎಂದು ಸಮಾಜ ಸೇವಕಿ ಶ್ರೀಮತಿ ಜಯಶ್ರೀ ಬಸವರಾಜ ಮತ್ತಿಮಡು ಅವರು ಹೇಳಿದರು.
ಅವರು ತಾಲ್ಲೂಕಿನ ತೋನಸನಹಳ್ಳಿಯ ಶ್ರೀ ಶರಣ ಗ್ರಾಮೀಣಾಬಿವೃದ್ದಿ ಶಿಕ್ಷಣ ಸಂಸ್ಥೆಯ ಕೋತಲಪ್ಪ ಮುತ್ಯಾ ಪ್ರೌಡ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉಧ್ಘಾಟಿಸಿ ಮಾತನಾಡಿದರು.
ಪ್ರಸಕ್ತ ಕಾಲಮಾನದಲ್ಲಿ ಹಲವಾರು ವಿದ್ಯಾರ್ಥಿಗಳು ಕೇವಲ ಮೊಬೈಲ್, ಟಿವಿ ಯನ್ನು ವೀಕ್ಷಣೆ ಮಾಡಲು ಸಮಯವನ್ನು ವ್ಯರ್ಥ ಮಾಡುತ್ತಾರೆ, ಮತ್ತೆ ಕೆಲವರು ಯಾರೊಂದಿಗೂ ಬೆರೆಯದೆ ಒಬ್ಬಂಟಿಯಾಗಿರಲು ಬಯಸುತ್ತಾರೆ ಆದರೆ ಓದು ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಡಿಸಿಕೊಳ್ಳಬೇಕು ಎಂದರು.
ಘನ ಅಧ್ಯಕ್ಷತೆ ವಹಿಸಿದ ಸಂಗಮೇಶ್ವರ ಸಂಸ್ಥಾನ ಮಠದ ಪೂಜ್ಯರಾದ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಜೀವನದ ಆದರ್ಶಗಳು ಹಾಗೂ ಸಂಸ್ಕಾರಗಳನ್ನು ಬೆಳೆಸಿ, ಭವಿಷ್ಯದಲ್ಲಿ ಮಹತ್ತರ ಸಾಧನೆಗಳತ್ತ ಮುನ್ನಡೆಯುವಂತೆ ಪ್ರೇರೇಪಿಸಿ ಎಂದು ಆಶೀರ್ವಚನ ನೀಡಿದರು.
ವಾರ್ಷಿಕೋತ್ಸವದ ನೇತೃತ್ವವನ್ನು ಪೂಜ್ಯಶ್ರೀ ಕೊಟ್ಟೂರೇಶ್ವರ ಶ್ರೀಗಳು ವಹಿಸಿಕೊಂಡು ಮಾತನಾಡಿದರು.
ವೇದಿಕೆ ಮೇಲೆ ನದಿ ಸಿನ್ನೂರಿನ ಗುರುರಾಜೇಂದ್ರ ಶಿವಯೋಗಿಗಳು, ಕಾಂಗ್ರೇಸ ಮುಖಂಡ ಬಸವರಾಜ ಬೂದಿಹಾಳ, ಉದ್ದಿಮೆದಾರ ಮಹಾದೇವ ಬಂದಳ್ಳಿ, ಸಾಬಣ್ಣ ಜಾಲಗಾರ, ಭಾಗಿರಥಿ ಗುನ್ನಾಪುರ, ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳ, ನಗರ ಪೊಲೀಸ ಠಾಣೆಯ ಪಿಎಸಐ ಶಾಮರಾಯ, ಬಸವರಾಜ್ ಮದ್ದರಕಿ ಇದ್ದರು.
11 ದಿನಗಳ ಕಾಲ ಶಿವ ಪುರಾಣ ಪ್ರವಚನಕ್ಕೆ ಶಿವಾನಂದ್ ಶಾಸ್ತ್ರಿಗಳು ಮಂಗಲ ಹಾಡಿದರು.
2024-25ನೇ ಸಾಲಿನ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ವಿಧ್ಯಾರ್ಥಿಗಳನ್ನ ಸ್ಮರಣ ಕಾಣಿಕೆ ನೀಡಿ, ಸನ್ಮಾನಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಸಮಾರಂಭದಲ್ಲಿ ಕಾಶಣ್ಣ ಚನ್ನೂರ, ದೇವೆಂದ್ರಪ್ಪ ಯಲಗೋಡ, ಭೀಮಯ್ಯ ಗುತ್ತೆದಾರ, ಸಿದ್ದು ಸಜ್ಜನ, ಬೇಳಪ್ಪ ಖಣದಾಳ, ಸಿದ್ದಣಗೌಡ ಬಮ್ಮಶೆಟ್ಟಿ, ಪ್ರಕಾಶ ರೆಡ್ಡಿ, ಸಾಬಣ್ಣ ನಾಟೀಕರ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ಮತ್ತು ಸಾವಿರಾರು ಜನ ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಧನರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಸವರಾಜ ಮದ್ರಕಿ ಸ್ವಾಗತಿಸಿ, ನಿರೂಪಿಸಿದರು,
