ಯಶೋಧಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಗುಣಮಟ್ಟದ ನಿಖರ ಕ್ಯಾನ್ಸರ್ ಚಿಕಿತ್ಸೆ

ಯಶೋಧಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಗುಣಮಟ್ಟದ ನಿಖರ ಕ್ಯಾನ್ಸರ್ ಚಿಕಿತ್ಸೆ

ಯಶೋಧಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಗುಣಮಟ್ಟದ ನಿಖರ ಕ್ಯಾನ್ಸರ್ ಚಿಕಿತ್ಸೆ

ಕಲಬುರಗಿ : ಯಶೋದಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ನಿಖರ ಪತ್ತೆಗಾಗಿ ಹೈಪರ್ ಸೈಟ್ ಅಡ್ವಾನ್ಸ್ ಇಮೇಜಿಂಗ್ ಸಿಸ್ಟಮ್ ಹಾಗೂ ಎಂಆರ್ ಗೈಡೆಡ್ ಅಡಾಪ್ಟಿವ್ ರೇಡಿಯೋಥೆರಪಿ ಮುಂತಾದ ಮುಂದಿನ ತಲೆಮಾರಿನ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದ್ದು, ಈ ತಂತ್ರಜ್ಞಾನಗಳ ಮೂಲಕ ಗಡ್ಡೆಗಳನ್ನು ಹೆಚ್ಚು ಸ್ಪಷ್ಟವಾಗಿ ನೋಡಲು, ದೇಹದ ರಚನೆ ಬದಲಾದಾಗ ಚಿಕಿತ್ಸೆಹೊಂದಿಸಲು ಹಾಗೂ ಎಸ್ ಬಿ ಆರ್ ಟಿ ಮತ್ತು ಎಸ್ ಆರ್ ಎಸ್ ಮುಂತಾದ ಅತಿ ನಿಖರ ಚಿಕಿತ್ಸೆಗಳನ್ನು ಹೆಚ್ಚಿನ ಸುರಕ್ಷತೆಯೊಂದಿಗೆ ನೀಡಲು ಸಾಧ್ಯವಾಗುತ್ತಿದೆ

ಎಂದು ಯಶೋಧಾ ಆಸ್ಪತ್ರೆ ಪ್ರಖ್ಯಾತ ರೇಡಿಯೇಶನ್ ಅಂಕಾಲಜಿಸ್ಟ್ ಡಾ. ಶಿವಪ್ರಸಾದ್ ಅವರು ಹೇಳಿದರು.

ಅವರು ಗುರುವಾರ ನಗರದ ಗೋಲ್ಡ್ ಹಬ್ ಎರಡನೆಯ ಮಹಡಿಯಲ್ಲಿರುವ ಸಭಾಗಂಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆ ಎಂದರೆ ಕೇವಲ ರೇಡಿಯೇಶನ್ ನೀಡುವುದು ಮಾತ್ರವಲ್ಲ ಅದನ್ನು ಅತ್ಯಂತ ನಿಖರತೆಯಿಂದ ನೀಡುವುದು ಮುಖ್ಯವಾಗಿದೆ ಎಂದರು.

ಕಲಬುರಗಿ ಸೇರಿದಂತೆ ಅನೇಕ ಸಣ್ಣ ನಗರಗಳಲ್ಲಿ ರೇಡಿಯೋಥೆರಪಿ ಸೌಲಭ್ಯಗಳು ಸಾಮಾನ್ಯವಾಗಿ 3ಡಿ-ಸಿಆರ್ ಟಿ ಮತ್ತು ಸಾಮಾನ್ಯ ಐಎಂಆರ್ ಟಿಮುಂತಾದ ಪರಂಪರ ತಂತ್ರಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಇವು ಪರಿಣಾಮಕಾರಿ ಚಿಕಿತ್ಸೆಗಳಾದರೂ, ಇಂದಿನ ಆಧುನಿಕತಂತ್ರಜ್ಞಾನನೀಡುವ ರಿಯಲ್-ಟೈಮ್ ಇಮೇಜಿಂಗ್, ಅಡಾಪ್ಟಿವ್ ಸಾಮರ್ಥ್ಯ ಹಾಗೂ ಅತಿ ಉನ್ನತ ನಿಖರತೆಯನ್ನು ನೀಡುವುದಿಲ್ಲ.

ಪ್ಯಾಂಕ್ರಿಯಾಸ್, ಪ್ರೋಸ್ಟೇಟ್, ಲಿವರ್, ಬ್ರೇನ್ ಅಥವಾ ಸೆಂಟ್ರಲ್ ಲಂಗ್‌ಟ್ಯೂಮರ್‌ಗಳಂತಹ ಪ್ರಮುಖ ಅಂಗಾಂಗಗಳ ಹತ್ತಿರ ಇರುವ ಜಟಿಲ ಕ್ಯಾನ್ಸರ್ ಪ್ರಕರಣಗಳಲ್ಲಿ ಮಿಲಿಮೀಟರ್ ಮಟ್ಟದ ನಿಖರತೆ ಅತ್ಯಂತ ಮುಖ್ಯವಾಗಿದೆ. ಇದು ಗಡ್ಡೆ ನಿಯಂತ್ರಣಕ್ಕೂ ಹಾಗೂ ಪಾರ್ಶ್ವ ಪರಿಣಾಮಗಳನ್ನು ಕಡಿಮೆ ಮಾಡುವುದಕ್ಕೂ ನೇರವಾಗಿ ಸಹಾಯ ಮಾಡುತ್ತದೆ.

ಅತ್ಯಾಧುನಿಕ ಇಮೇಜಿಂಗ್-ಸಮೈಕ್ಯ ರೇಡಿಯೋಥೆರಪಿ ಕೇಂದ್ರವನ್ನು ಆಯ್ಕೆ ಮಾಡುವುದು ಎಂದರೆ eಟಿ 3 ವ ? ಗುರಿತಪಡಿಸುವಿಕೆ,ಆರೋಗ್ಯಕರ ಕಣಜಗಳಿಗೆ ಕಡಿಮೆ ಹಾನಿ, ಸಾಧ್ಯವಾದಷ್ಟು ಕಡಿಮೆ ಚಿಕಿತ್ಸೆ ಅವಧಿ ಚಿಕಿತ್ಸೆಯ ನಿಖರತೆಯ ಮೇಲೆ ಹೆಚ್ಚಿನ ವಿಶ್ವಾಸ ಎಂದರು.ನಮ್ಮ ಉದ್ದೇಶ ರೋಗಿಗಳಿಗೆ ಅತ್ಯುತ್ತಮ ಮಟ್ಟದ ನಿಖರ ಕ್ಯಾನ್ಸರ್ ಚಿಕಿತ್ಸೆ ಲಭ್ಯವಾಗುವಂತೆ ಮಾಡುವುದಾಗಿದೆ. ಇದರಿಂದ ಚಿಕಿತ್ಸೆಫಲಿತಾಂಶಗಳು ಉತ್ತಮವಾಗಿದ್ದು, ರೋಗಿಗಳ ಜೀವನಮಟ್ಟವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದರು.

ಕಲಬುರಗಿಗೆ ಭೇಟಿ: ಪ್ರತಿ ತಿಂಗಳು ಮೂರನೇಯ ಶನಿವಾರ ಕಲಬುರಗಿ ನಗರದ ಯಶೋಧಾ ಕ್ಲಿನಿಕ್‌ಗೆ (ವೈಷ್ಣವಿ ಸ್ಕ್ಯಾನಿಂಗ್ ಸೆಂಟರ್,ಎರಡನೆಯ ಮಹಡಿ, ಕೋರ್ಟ ರಸ್ತೆ)ಭೇಟಿ ನೀಡುತ್ತೇನೆ.ಅಲ್ಲಿ ಬೆಳಿಗ್ಗೆ 11.30 80 5.30 ರವರೆಗೆ ಲಭ್ಯವಿರುತ್ತೇನೆ ಎಂದು ಡಾ. ಶಿವಪ್ರಸಾದ್ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆ ಅಧಿಕಾರಿ ಸತೀಶ, ಕೇಶವ ಕುಲಕರ್ಣಿ ಉಪಸ್ಥಿತರಿದ್ದರು.