ಅಮಿತ್ ಶಾ ಹೇಳಿಕೆ ಖಂಡಿಸಿ ಆಳಂದಿನಲ್ಲಿ ದಲಿತ ಸಮನ್ವಯ ಸಮಿತಿಯಿಂದ ಬಂದ್ ಯಶಸ್ವಿ

ಅಮಿತ್ ಶಾ ಹೇಳಿಕೆ ಖಂಡಿಸಿ ಆಳಂದಿನಲ್ಲಿ ದಲಿತ ಸಮನ್ವಯ ಸಮಿತಿಯಿಂದ ಬಂದ್ ಯಶಸ್ವಿ

ಅಮಿತ್ ಶಾ ಹೇಳಿಕೆ ಖಂಡಿಸಿ ಆಳಂದಿನಲ್ಲಿ ದಲಿತ ಸಮನ್ವಯ ಸಮಿತಿಯಿಂದ ಬಂದ್ ಯಶಸ್ವಿ

ಆಳಂದ ಪಟ್ಟಣದಲ್ಲಿ ದಲಿತ ಸಮನ್ವಯ ಸಮಿತಿಯ ಆಶ್ರಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿವಾದಾಸ್ಪದ ಹೇಳಿಕೆಯನ್ನು ಖಂಡಿಸಿ ಬಂದ್ ಹಾಗೂ ಪ್ರತಿಭಟನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರತಿಭಟನೆಯು:ಸಮಿತಿಯ ಅಧ್ಯಕ್ಷ ದಯಾನಂದ ಸೇರಿಕಾರ್ ಅವರ ನೇತೃತ್ವದಲ್ಲಿ ಈ ಬಂದ್ ಆಚರಿಸಲಾಯಿತು. ಬಾಬು ಅರುಣೋದಯ, ಬಸವಲಿಂಗಪ್ಪ ಗಾಯಕ್ವಾಡ್, ಆನಂದ ಗಾಯಕ್ವಾಡ್, ದಿಲೀಪ್ ಕ್ಷೀರ ಸಾಗರ ಮತ್ತು ಇತರ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಧ್ವನಿಯನ್ನು ಪ್ರಜಾಪ್ರಭುತ್ವದ ಪರವಾಗಿ ಪ್ರಬಲಗೊಳಿಸಿದರು.

ಈ ಪ್ರತಿಭಟನೆಯು ದಲಿತ ಸಮುದಾಯದ ಮೇಲೆ ಪ್ರಭಾವ ಬೀರುವಂತಹ ಹೇಳಿಕೆಗಳನ್ನು ಖಂಡಿಸಿ ಮತ್ತು ಸಮಾನತೆಯ ಪರವಾಗಿ ಜಾಗೃತಿ ಮೂಡಿಸುವ ದಿಸೆಯಲ್ಲಿ ನಡೆಸಲಾಯಿತು.

ಆಳಂದ ಪಟ್ಟಣದ ವ್ಯಾಪ್ತಿಯಲ್ಲಿ ಬಂದ್ ಯಶಸ್ವಿಯಾಗಿ ನಡೆದಿದ್ದು, ದಲಿತ ಸಮುದಾಯದ ಸಂಕಲ್ಪ ಮತ್ತು ಏಕತೆಯನ್ನು ಸ್ಪಷ್ಟಪಡಿಸಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡರು ಸಂವಿಧಾನದ ಮೇಲಿನ ಚರ್ಚೆಯ ವಿಷಯದಲ್ಲಿ ಗೃಹ ಸಚಿವ ಅಮಿತ್ ಶಾ ಸಂವಿಧಾನ ಮೇಲಿನ ಚರ್ಚೆಯ ವಿಷಯದಲ್ಲಿ ಮಾತನಾಡುತ್ತಾ ಸಂಸತ್ತಿನಲ್ಲಿಯೇ ಭಾರತ ಭಾಗ್ಯ ವಿಧಾತ ಆಧುನಿಕ ಭಾರತದ ಪಿತಾಮಹ ವಿಜ್ಞಾನಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಾ ಈ ಮೂಲಕ ಭಾರತದ ಬಹು ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಆಕ್ರೋಶ ಹೊರ ಹಾಕಿದರು ಜಾತೀಯತೆ ಒಂದು ಮನರೋಗಿಯಾಗಿ ಜಾತಿಯ ಶ್ರೇಷ್ಠತೆಯನ್ನು ತಲೆಗೇರಿಸಿಕೊಂಡು ಮಾನವೀಯತೆ ಮರೆತು ಜಾತಿಯತೆಯನ್ನು ಪ್ರಚೋದಿಸಿ ಪ ಜಾತಿವಾದಿಯಾಗಿ ವರ್ತಿಸಿದ್ದನು ಜಾತಿವಾದಿಯೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆಯನ್ನು ಖಂಡಿಸುತ್ತವೆ 

 ಭಾರತದ ಪ್ರಧಾನ ಮಂತ್ರಿಗಳು ಅಮಿತ್ ಶಾ ರನ್ನು ಗ್ರಹ ಖಾತೆಯಿಂದ ರಾಜೀನಾಮೆ ಪಡೆದು ಅವರ ಲೋಕಸಭಾ ಸದಸ್ಯತ್ವವನ್ನು ವಜಾಗೊಳಿ ಏಕು ಎಂದು ಆಗ್ರಹಿಸಿದ

ಬಂದ ಕರೆಯಿಂದಾಗಿ ಸಾರಿಗೆ ಸಂಸ್ಥೆಯ ಬಸ್ ಹಾಗೂ ಖಾಸಗಿವಾನಗಳ ಸಂಪರ್ಕ ತೆಗೆದುಕೊಂಡಿತ್ತು ಸಾರ್ವಜನಿಕ ಜನ ಜೀವನದ ಮೇಲೆ ದುಷ್ಪರಿಣಾಮ ಬೀರಿ ಅಂಗಡಿ ವ್ಯಾಪಾರಗಳು ಮುಚ್ಚಲ್ಪಟ್ಟಿದ್ದವು ಪ್ರತ್ಯೇಕವಾಗಿ ಸಿದ್ದಾರ್ಥ್ ನಿಲ್ದಾಣ ಪ್ರತಿಭಟನೆ ಗುಂಪುಗಳು ಕೈಗೊಂಡು ಕೇಂದ್ರ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ