ಪೂಜ್ಯ ಶ್ರೀ ಗಂಗಾ ಮಾತಾ ಅವರಿಂದ ಕೋಟಿ ದ್ವಿಚಕ್ರ ವಾಹನ ಶೋರೂಂ ಉದ್ಘಾಟನೆ

ಪೂಜ್ಯ ಶ್ರೀ ಗಂಗಾ ಮಾತಾ ಅವರಿಂದ ಕೋಟಿ ದ್ವಿಚಕ್ರ ವಾಹನ ಶೋರೂಂ ಉದ್ಘಾಟನೆ 

ಕಲಬುರಗಿ : ವಾಹನಗಳು ಮಾನವನ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದು, ಇಂಧನವು ಕರಗಿ ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ವಿದ್ಯುತ್ ಚಾಲಿತ ವಾಹನಗಳ ಅತ್ಯಂತ ಅಗತ್ಯವಿರುವುದರಿಂದ ಈ ದ್ವಿಚಕ್ರ ವಾಹನಗಳ ಮಾರಾಟ ಯಶಸ್ವಿಯಾಗಿ ನಡೆಯಲಿ ಎಂದು ಕೂಡಲಸಂಗಮ ಬಸವ ಧರ್ಮಪೀಠದ ಅಧ್ಯಕ್ಷರಾದ ಜಗದ್ಗುರು ಪೂಜ್ಯಶ್ರೀ ಗಂಗಾ ಮಾತಾ ರವರು ಶೋರೂಂ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಇದು ಚಾಲಿತ ವಾಹನಗಳ ಬಳಕೆಯಿಂದ ಪರಿಸರ ಸಂರಕ್ಷಣೆಯು ಬಹು ಮುಖ್ಯವಾಗಿದ್ದು, ವಿದ್ಯುತ್ ಚಾಲಿತ ವಾಹನಗಳು ಹೆಚ್ಚೆಚ್ಚು ಬಳಕೆಗೆ ಬರಲಿ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶೋರೂಮನ್ನು ಮಾಲೀಕರಾದ ರಾಜಕುಮಾರ್ ಕೋಟೆ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪ್ಯೂರ್ ಇಪ್ಲೂಟೊ ಕಂಪನಿಯ ನೂತನ ಶೋರೂಮ್ ತೆರೆಯಲಾಗಿದ್ದು, ಈ ದಿನವೇ ಐದು ದ್ವಿಚಕ್ರವಾನಗಳು ಮಾರಾಟವಾಗಿವೆ ಎಂದು ನುಡಿದರು.

ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುವ ಗುರಿ ಹೊಂದಲಾಗಿದ್ದು ಹೆಚ್ಚಿನ ಜನರು ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಖರೀದಿಸಿ ಪರಿಸರ ಸಮತೋಲನ ಕಾಯ್ದುಕೊಳ್ಳಬೇಕೆಂದು ರಾಜಕುಮಾರ್ ಕೋಟಿ ಹೇಳಿದರು. 

ಈ ಸಂದರ್ಭದಲ್ಲಿ ಶಹಬಜಾರ ಚೌದಾಪುರಿ ಹಿರೇಮಠದ ಷ ,ಬ್ರ ಶ್ರೀ ಡಾ ರಾಜಶೇಖರ ಶಿವಾಚಾರ್ಯ ದಿವ್ಯ ಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ, ಬಸವರಾಜ ಪಾಟೀಲ್ ಕಮಲಾಪುರ್, ಶಿವಶೆಟ್ಟಿ ಪಾಟೀಲ್ ರಾಜನಾಳ್, ಹರ್ಷವರ್ಧನ್ ಗೂಗಳೆ, ಶರಣಗೌಡ ಪಾಟೀಲ್ ಪಾಳಾ,ಪ್ರೊ ಯಶವಂತರಾಯ ಅಷ್ಠಗಿ, ಸಿದ್ದು ಪಾಟೀಲ್ ಮಳಗಿ, ದತ್ತಾತ್ರೇಯ ಪಡ್ನವೀಸ್, ಆರ್ ಜಿ ಶೆಟಗಾರ, ಶಿವಕುಮಾರ್ ಪಲ್ಲೆದ, ಡಾ ವೀರಭದ್ರ ಕಲ್ಯಾಣಿ, ಅಂಬಾರಾಯ ಕೋಣೆ, ಶಿವಾಜಿ ಸೂರ್ಯವಂಶಿ, ರೇವಣಸಿದ್ದಪ್ಪ ಭೂಸನೂರ್, ಶಿವಕುಮಾರ್ ಪಸಾರ್, ಈರಣ್ಣ ಗೊಳೇದ, ಶಿವಕುಮಾರ್ ಉಪ್ಪಿನ್ ಜಗನ್ನಾಥ್ ಹರಸೂರ್, ಜಗನ್ನಾಥ್ ಮಾಲಿ ಪಾಟೀಲ್, ಮಲ್ಲಿಕಾರ್ಜುನ್ ಡಂಬಳ, ಶರಣು ರಟ್ಕಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.