ಸಂವಿಧಾನ ಶಿಲ್ಪಿಗೆ ಅಪಮಾನ ಸಚಿವ ಸ್ಥಾನ ವಜಾಕ್ಕೆ ಅಂಗರಾಜ ತಾರಫೈಲ್ ಆಗ್ರಹ

ಸಂವಿಧಾನ ಶಿಲ್ಪಿಗೆ ಅಪಮಾನ ಸಚಿವ ಸ್ಥಾನ ವಜಾಕ್ಕೆ ಅಂಗರಾಜ ತಾರಫೈಲ್ ಆಗ್ರಹ
ಕಲಬುರಗಿ: ಮಹಾ ಮನವತಾವಾದಿ ಡಾ. ಬಾಬಾಸಾಹೇಬ ಅಂಬೇಡ್ಕರವರನ್ನು ರಾಜ್ಯ ಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಅಪಮಾನವಾಗುವಂತೆ ಕೇಂದ್ರ ಗೃಹ ಸಚೀವ ಅಮಿತಾಶಾರವರು ಈ ದೇಶದಲ್ಲಿ ಪ್ರಸ್ತುತವಾಗಿ ಒಂದು ಹೊಸ ಪ್ಯಾಶನ್ ಶುರುವಾಗಿದೆ. ಅಂಬೇಡ್ಕರ..., ಅಂಬೇಡ್ಕರ..., ಅಂಬೇಡ್ಕರ..., ಈ ಹೆಸರಿನ ಬದಲು ದೇವರ ಹೆಸರು ಹೇಳಿದರೆ ಏಳೇಳು ಜನ್ಮಕ್ಕೆ ಆಗುವಷ್ಟು ಪುಣ್ಯ ದೊರೆಯುತ್ತಿತ್ತು ಅಂತ ಹೇಳಿ ಅಪಮಾನ ಮಾಡಿರುವ ಗೃಹ ಸಚೀವ ಅಮಿತ ಶಾ ಕೂಡಲೇ ದೇಶದ ಜನತೆಗೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಡಿ.ಎಮ್.ಎಸ್.ಎಸ್. ಸಂಘಟನೆಯ ರಾಜ್ಯಾಧ್ಯಕ್ಷರಾದ ಲಿಂಗರಾಜ ತಾರಫೈಲ್ ಆಗ್ರಹಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಕುರಿತು ಹಗುರವಾಗಿ ಮಾತನಾಡಿದ ಅಮಿತಾಶಾ ಕೂಡಲೇ ತಮ್ಮ ಮಾತು ವಾಪಸ್ಸ ಪಡೆಯಬೇಕು. ಡಾ. ಅಂಬೇಡ್ಕರ್ ಸಿದ್ಧಾಂತವನ್ನು, ಸಂವಿಧಾನವನ್ನು ವಿರೋಧಿಸುವಂತಹ ಮತ್ತು ಈ ದೇಶದ ಸಂವಿಧಾನ ಒಪ್ಪದಿರುವ ಮನುಷ ಇಂತಹ ಮಾತುಗಳನ್ನು ಆಡಲು ಮಾತ್ರ ಸಾಧ್ಯ. ಮಹಾನಾಯಕನಿಗೆ ಅಪಮಾನದ ಮಾತುಗಳು ಆಡುವುದೆಂದರೆ ಭಾರತಕ್ಕೆ ಅಪಮಾನ ಮಾಡಿದಂತೆ. ರಾಷ್ಟ್ರವನ್ನು ಗೌರವಿಸುವ ಸಂವಿಧಾನವನ್ನು ಒಪ್ಪಿಕೊಂಡಿರುವ ಯಾವುದೇ ವ್ಯಕ್ತಿ ಈ ರೀತಿ ಮಾತನಾಡಲು ಸಾಧ್ಯವಿಲ್ಲ. ಅಮಿತಾಶಾರವರ ಹೇಳಿಕೆಗೆ ದಿಕ್ಕಾರವಿರಲಿ. ಪ್ರಧಾನಿಗಳು ಕೂಡಲೇ ಸಚಿವ ಸ್ಥಾನವನ್ನು ವಜಾಗೊಳಿಸಬೇಕೆಂದು ರಾಜ್ಯ ಪ್ರಧಾಯ ಕಾರ್ಯದರ್ಶಿಯಾದ ಬಸವರಾಜ ಜವಳಿ, ದಿಗಂಬರ ತ್ರಿಮೂರ್ತಿ, ಮಲ್ಲಿಕಾರ್ಜುನ ದಿನ್ನಿ, ಮಾರುತಿ ಮುಗಟಿ, ರವಿ ಬೆಳಮಗಿ, ಮಲ್ಲಿಕಾರ್ಜುನ ಬೊಮ್ಮನಹಳ್ಳಿ, ದೇವಿಂದ್ರ ಅಳ್ಳಿ, ಶಾಂತಕುಮಾರ ತಾರಫೈಲ್, ಪರಶುರಾಮ ಅಳಲಕರ್, ರಾಜೇಂದ್ರ ಕಟ್ಟಿಮನಿ, ಅರ್ಜುನ ವಾಲಿ, ಶ್ರೀಮಂತ ಭಂಡಾರಿ ಅನೇಕರು ಕ್ಷಮೇ ಕೇಳಬೇಕೆಂದು ಪತ್ರಿಕೆ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.