ಮಾಜಿ ಮುಖ್ಯಮಂತ್ರಿ ನಿಧನಕ್ಕೆ ಗೌರವ ಸಲ್ಲಿಸದ ಶಾಸಕರ ಕಾರ್ಯಾಲಯ ರಾಜ್ಯಪಾಲರ ಆದೇಶ ಪಾಲನೆ ಮಾಡದೆ ಆದೇಶ ಉಲ್ಲಂಘನೆ
ಮಾಜಿ ಮುಖ್ಯಮಂತ್ರಿ ನಿಧನಕ್ಕೆ ಗೌರವ ಸಲ್ಲಿಸದ ಶಾಸಕರ ಕಾರ್ಯಾಲಯ
ರಾಜ್ಯಪಾಲರ ಆದೇಶ ಪಾಲನೆ ಮಾಡದೆ ಆದೇಶ ಉಲ್ಲಂಘನೆ
ಚಿಂಚೋಳಿ : ಮಾಜಿ ಮುಖ್ಯಮಂತ್ರಿ ಹಾಗೂ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನಲೆ ಕರ್ನಾಟಕ ರಾಜ್ಯ ಸರಕಾರ ರಾಜ್ಯದಲ್ಲಿನ ಸರಕಾರದ ಅಧೀನದಲ್ಲಿ ಒಳಪಡುವ ಎಲ್ಲಾ ಕಾರ್ಯಾಲಯಗಳ ಮೇಲೆ ಮತ್ತು ಶಾಲಾ-ಕಾಲೇಜುಗಳ ಕಟ್ಟಡಗಳ ಮೇಲೆ ಅರ್ಧ ಭಾಗಕ್ಕೆ ರಾಷ್ಟ್ರೀಯ ಧ್ವಜ ಇಳಿಸಿ ಮೂರು ದಿನಗಳ ಕಾಲ ಶೋಕಾಚರಣೆ ಆಚರಿಸಬೇಕೆಂದು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಸರಕಾರದ ಉಪ ಕಾರ್ಯದರ್ಶಿ ಹಾಗೂ ಸಿ.ಆ.ಸು.ಇ (ರಾಜ್ಯ ಶಿಷ್ಟಾಚಾರ) ಅಧಿಕಾರಿ ಎಲಿಪ ಆಂಡ್ರೂಸ್ ಅವರಿಂದ ಡಿ.10 ರಂದು ಸರಕಾರಿ ಆದೇಶ ಹೊರಡಿಸಲಾಗಿತು.
ಆದರೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಮಿಸಲು ವಿಧಾನಸಭಾ ಕ್ಷೇತ್ರದ ಶಾಸಕ ಕಾರ್ಯಾಲಯದ ಮೇಲೆ ರಾಷ್ಟ್ರೀಯ ಧ್ವಜ ಅರ್ಧಕ್ಕೆ ಹಾರಿಸದೆ ರಾಜ್ಯ ಸರಕಾರದ ಆದೇಶ ಉಲ್ಲಂಘಿಸಿದೆ. ರಾಜ್ಯ ಮತ್ತು ಕೇಂದ್ರದ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ತೃಪ್ತಿಕರವಾದ ಸಾರ್ವಜನಿಕ ಸೇವೆ ಸಲ್ಲಿಸಿರುವ ಎಸ್.ಎಂ.ಕೃಷ್ಣ ಅವರ ಅಗಲಿಕೆಗೆ ಅರ್ಥ ಪೂರ್ಣ ಗೌರವಪೂರ್ವಕ ನಮನ ಸಲ್ಲಿಸಲು ರಾಜ್ಯ ಸರಕಾರ ಇಡೀ ರಾಜ್ಯಕ್ಕೆ ಒಂದು ದಿನದ ಸರಕಾರಿ ರಜೆ ಘೋಷಿಸಿ, ಡಿ.12 ರವರೆಗೆ ಮೂರು ದಿನ ಶೋಕಾಚಾರಣೆ ಆಚರಿಸಲು ಸರಕಾರಿ ಆದೇಶವನ್ನು ಹೊರಡಿಸಲಾಗಿತ್ತು. ಆದರೆ ಇದಕ್ಕೆ ಸೋಪು ಹಾಕದೆ, ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ನಮಗೆ ಯಾವುದೇ ಸಂಬಂಧವೇ ಇಲ್ಲದಂತೆ ಶಾಸಕರು ಮತ್ತು ಕಾರ್ಯಾಲಯದ ಮೇಲ್ವಿಚಾಕರು, ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಸರಕಾರದ ಉಪ ಕಾರ್ಯದರ್ಶಿ ಹಾಗೂ ಸಿ.ಆ.ಸು.ಇ ರಾಜ್ಯ ಶಿಷ್ಟಾಚಾರ ಅಧಿಕಾರಿ ಎಲಿಪ ಆಂಡ್ರೂಸ್ ಅವರು ಹೊರಡಿಸಿದ ಆದೇಶ ಪಾಲನೆ ಮಾಡದೇ ಮೌನವಹಿಸಿ, ತೀರಸ್ಕರಿಸಲಾಗಿದೆ. ಇದಕ್ಕೆ ಎಸ್.ಎಂ.ಕೃಷ್ಣ ಅವರ ಅಭಿಮಾನಿ ಬಳಗ ಮತ್ತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಉಲ್ಲಂಘನೆಗೆ ಸಂಬಂಧಪಟ್ಟವರು ಇದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮವಹಿಸಿಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.