ಅಕ್ರಮ ಸಂಚಾರಿ ಪೋಲೀಸ್ ಚೌಕಿ ತೆರವಿಗೆ ಆಗ್ರಹ

ಅಕ್ರಮ ಸಂಚಾರಿ ಪೋಲೀಸ್ ಚೌಕಿ ತೆರವಿಗೆ ಆಗ್ರಹ
ಕಲಬುರಗಿ: ಮಹಾನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸ್ಥಾಪಿಸಲಾಗಿರುವ ಅಕ್ರಮ ಸಂಚಾರಿ ಪೊಲೀಸ ಠಾಣೆಯ ಚೌಕಿಗಳನ್ನು ತೆರವುಗೊಳಿಸುವಂತೆ ಜೈ ಕನ್ನಡಿಗರ ಸೇನೆ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ನಗರದ ಜಗತ್ ವೃತ್ತ, ಸರ್ದಾರ ಪಟೇಲವೃತ್ತ, ಜೇವರ್ಗಿ ರಸ್ತೆ,ಕೇಂದ್ರ ಬಸ್ ನಿಲ್ದಾಣ, ಹುಮನಾಬಾದ ವೃತ್ತ, ಖರ್ಗೆ ರಸ್ತೆ ಸೇರಿದಂತೆ ಹಲವು ಪ್ರಮುಖ ವೃತ್ತಗಳಲ್ಲಿ ಯಾವುದೇ ಪರವಾನಿಗೆ ಪಡೆ-ಯದೇ ಹಾಗೂ ಅವೈಜ್ಞಾನಿಕವಾಗಿ ಸಂಚಾರಿ ಪೊಲೀಸರ ಚೌಕಿಯನ್ನು ಸ್ಥಾಪಿಸಲಾಗಿದೆ ಕೂಡಲೇ ಇವುಗಳನ್ನು ತೆರವು ಗೊಳಿಸಬೇಕು ಎಂದು ಪ್ರತಿಭಟನೆಯ ಮೂಲಕ ಸಂಘಟನೆ ಆಗ್ರಹಿಸಿದೆ.
ಈ ಚೌಕಿಗಳನ್ನು ಪೊಲೀಸ ಇಲಾಖೆ ಮತ್ತು ಮಹಾನಗರ ಪಾಲಿಕೆಯ ವತಿಯಿಂದ ಸ್ಥಾಪನೆ ಮಾಡಿರುವುದಿಲ್ಲ, ಕೆಲ ಖಾಸಗಿ ಕಂಪನಿಗಳು ತಮ್ಮ ಜಾಹಿರಾತು ಪ್ರಚಾರ ಗಿಟ್ಟಿಸಿಕೊಳ್ಳಲು ಈ ಸಂಚಾರಿ ಪೊಲೀಸ ಚೌಕಿಗಳನ್ನು ನೀಡಿದ್ದಾರೆ. ತಮ್ಮ ಸ್ವಾರ್ಥಗಕ್ಕೆ ಇದನ್ನು ನೀಡಿದ್ದಾರೆ ಇದರಿಂದ ಪಾಲಿಕೆಗೆ ಮತ್ತು ಸರ್ಕಾರಕ್ಕೆ ಯಾವುದೇ ತೆರಿಗೆಯ ಲಾಭ ಸಿಗುವುದಿಲ್ಲ. ಇವುಗಳನ್ನು ತೆರವು ಗೊಳಿಸಿ ವೈಜ್ಞಾನಿಕವಾಗಿ ಖಾಯಂ ಚೌಕಿಗಳನ್ನು ಪೊಲೀಸ ಇಲಾಖೆ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು ಪಾಲಿಕೆಯ ಆಯುಕ್ತರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ರಾಮಾ ಪೂಜಾರಿ, ಶಿವು ಮಡಕಿ, ಮಲ್ಲು ಆಲಗೂಡ, ಹುಸೇನ, ಸಂಜು ಮಾಳಗೆ, ಹಣಮಂತ,ಬಸವರಾಜ ನಾಗನಹಳ್ಳಿ, ಮಲ್ಲಯ್ಯಸೇರಿದಂತೆ ಹಲವರಿದ್ದರು.