ದಲಿತ ಸಂಘಟನೆಗಳ ಒಕ್ಕೂಟ ನಿರ್ಣಯ 24ರಂದು ಕಲಬುರಗಿ ಬಂದ್ ಗೆ ಕರೆ

ದಲಿತ ಸಂಘಟನೆಗಳ ಒಕ್ಕೂಟ ನಿರ್ಣಯ 24ರಂದು ಕಲಬುರಗಿ ಬಂದ್ ಗೆ ಕರೆ

ದಲಿತ ಸಂಘಟನೆಗಳ ಒಕ್ಕೂಟ ನಿರ್ಣಯ 24ರಂದು ಕಲಬುರಗಿ ಬಂದ್ ಗೆ ಕರೆ

ಕಲಬುರಗಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ನೀಡಿರುವ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟವು ಡಿಸೆಂಬರ್ 24ರಂದು ಕಲಬುರಗಿ ಬಂದ್‌ಗೆ ಕರೆ ನೀಡಿವೆ.

ಈ ಸಂಬಂಧ ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಗುರುವಾರ ಸಭೆ ನಡೆಸಿದ ಸಂಘಟನೆಗಳ ಮುಖಂಡರು, ಹಿಂದುಳಿದ ಹಾಗೂ ಇತರೆ ಸಮುದಾಯಗಳ ಜತೆಗೂಡಿ ಕಲಬುರಗಿ ಬಂದ್ ನಡೆಸಲು ನಿರ್ಣಯ ಕೈಗೊಂಡರು.

ಸಭೆಯಲ್ಲಿ ಮಾತನಾಡಿದ ಹಿರಿಯ ಮುಖಂಡ ವಿಠಲ ದೊಡ್ಡಮನಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕೊಡದೇ ಇದ್ದರೆ ಅಮಿತ್ ಶಾ ಗೃಹ ಮಂತ್ರಿಯೂ ಆಗುತ್ತಿರಲಿಲ್ಲ. ಆದರೆ ಇಂದು ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ. ಗೃಹ ಮಂತ್ರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿ.24ರಂದು ಕಲಬುರಗಿ ಬಂದ್ ಗೆ ಕರೆ ನೀಡಲಾಗಿದ್ದು, ಅಂದು ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಮತ್ತೊಬ್ಬ ಮುಖಂಡ ಸೂರ್ಯಕಾಂತ ನಿಂಬಾಳ್ಕರ್, ಗೃಹ ಸಚಿವ ಅಮಿತ್ ಶಾ ಎದುರಾಳಿ ಪಕ್ಷವನ್ನು ಎದುರಿಸುವ ಸಲುವಾಗಿ ಅಂಬೇಡ್ಕರ್ ಅವರನ್ನು ಬಳಸಿಕೊಂಡಿದ್ದಾನೆ. ಮತ್ತೊಂದು ಪಕ್ಷವನ್ನು ಮಣಿಸಲು ಬಾಬಾ ಸಾಹೇಬರನ್ನು ಬಳಸಿಕೊಂಡರೆ ಸಹಿಸಲು ಅದನ್ನು ಸಾಧ್ಯವಿಲ್ಲ. ವಿವಾದ ಕಿಡಿ ಅಕ್ಷಮ್ಯ ಅಪರಾಧ. ಆತನ ಮೊಂಡತನದ ಹೇಳಿಕೆಯನ್ನು ಪಕ್ಷಾತೀತವಾಗಿ ಖಂಡಿಸಬೇಕು. ಎಲ್ಲ ಸಮುದಾಯಗಳ ಜತೆಗೂಡಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ಡಿಎಸ್‌ಆರ್ ಸಂಘಟನೆ ಜಿಲ್ಲಾಧ್ಯಕ್ಷ ಶ್ರವಣಕುಮಾರ ಮುಸಲಗಿ ಮಾತನಾಡಿ, ಹಗುರವಾಗಿ ಮಾತನಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಅಂಬೇಡ್ಕರ್ ನಮಗೆ ಶಕ್ತಿ, ಸ್ವಾಭಿಮಾನದ ವಿಷಯ. ಅಮಿತಾ ಶಾ ತನ್ನ ಹೇಳಿಕೆಗೆ ಕ್ಷಮೆ ಯಾಚನೆಯನ್ನು ಬಿಟ್ಟು ಮತ್ತೊಮ್ಮೆ ಸಮರ್ಥನೆ ಮಾಡಿಕೊಳ್ಳಲು ಹೊರಟಿದ್ದಾನೆ. ಈ ಹೋರಾಟ ತಾರ್ತಿಕ ಅಂತ್ಯ ಕಾಣಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ನಾಯಕಿ ರೇಣುಕಾ ಸಿಂಗೆ ಮಾತನಾಡಿ, ಅಂಬೇಡ್ಕರ್ ಅವರ ಕುರಿತು ಅಮಿತಾ ಶಾ ಅವರ ಹಗುರ ಮಾತು ಇದು ಬಹಳ ನೋವಿನ ವಿಷಯ. ದೇಶದ್ರೋಹಿ ಅಮಿತ್ ಶಾ ಬಾಬಾ ಸಾಹೇಬರಿಗೆ ನಾಲಿಗೆ ಹರಿ ಬಿಟ್ಟು ಮಾತಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಅವರ ತಲೆಯಿಂದ ಮನುಸ್ಪರ್ತಿ ಹೊರ ಹೋಗಿಲ್ಲ. ಬಾಬಾ ಸಾಹೇಬರ ಬಗ್ಗೆ ಯಾವ ಪಕ್ಷದವರು ಹಗುರುವಾಗಿ ಮಾತಾಡಿದರು ಸಹಿಸಲು ಸಾಧ್ಯವಿಲ್ಲ. ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸಿ ಪ್ರತಿಭಟನೆ ಮಾಡೊಣ ಎಂದರು.

ಹಣಮಂತ ಬೋಧನಕರ್ ಮಾತನಾಡಿ, ಅಮಿತ್ ಶಾ ಮೊದಲ ಮಾತಲ್ಲ. ಆರ್‌ಎಸ್‌ಎಸ್‌ನ ಮಾತು. ನಿರಂತರವಾಗಿ ಅವರು ಯಾವಾಗಲೂ ಕುತಂತ್ರ ಮಾಡುತ್ತಿದ್ದಾರೆ. ಪ್ರತಿಮೆಗೆ ಅವಮಾನವಾದಾಗ ಮಾತ್ರ ನಾವು ಎಚ್ಚರವಾಗುತ್ತೇವೆ. ಈ ಭಾಗದಲ್ಲಿ ಬಹಳ ಪ್ರಖರ ಪ್ರತಿಭಟನೆ ನಡೆಸಿ ಸಂದೇಶ ರವಾನಿಸಬೇಕು. ಅಂಬೇಡ್ಕರ್ ವಾದಿಗಳು ಜೀವಂತ ಇದ್ದೇವೆ ಎಂಬುದನ್ನು ತೋರಿಸಬೇಕಿದೆ. ನಮಗೆ ನೋವು ಆದರೆ ಸಹಿಸಿಕೊಂಡವು ಆದರೆ ಬಾಬಾ ಸಾಹೇಬರ ಹೆಸರಿಗೆ ಧಕ್ಕೆ ಆದರೆ ನಾವು ಸಹಿಸಲ್ಲ ಕಿಡಿಕಾರಿದರು.

ನಗರಪಾಲಿಕೆ ಸದಸ್ಯ ಸಚಿನ್ ಶಿರವಾಳಕರ್, ಮಾಜಿ ಮೇಯರ್ ವಿಶಾಲ ದರ್ಗಿ, ಸೋಮಶೇಖರ್ ಮೇಲಿನಿಮನಿ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ನಾಗೇಂದ್ರ ಜವಳಿ, ದಲಿತ ಪ್ಯಾಂಥರ್ ಸಂಘಟನೆ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ, ಜಿ.ಪಂ.ಮಾಜಿ ಅಧ್ಯಕ್ಷ ಭೀಮರಾವ ತೇಗಲತಿಪ್ಪಿ, ಸಾಹಿತಿ ಹಣಮಂತರಾವ ದೊಡ್ಡಮನಿ, ಮುಖಂಡರಾದ ಪ್ರಕಾಶ ಮೂಲಭಾರತಿ, ಸುನೀಲ್ ಮಾನಪಡೆ, ನಂದಪ್ಪ, ಸಂಜೀವ ಟಿ.ಮಾಲೆ, ರೇಣುಕಾ ಸರಡಗಿ, ಶಾಹಿರಾಬಾನು, ಎಸ್.ಎಸ್.ತವಡೆ, ಮರಾಠ ಸಮಾಜದ ಮುಖಂಡ ನಾಗ ಭುಜಂಗೆ, ದಿನೇಶ ದೊಡ್ಡಮನಿ, ಸಂತೋಷ ಮೇಲ್ಮನಿ ಮತ್ತಿತರರು ಹಾಜರಿದ್ದರು.