ವಾಡಿ | ಶ್ರೀ ಜಗದಂಭಾ,ಶ್ರೀ ಸೇವಾಲಾಲ ಮಹಾರಾಜರ ಮಂದಿರ ಲೋಕಾರ್ಪಣೆ
ವಾಡಿ | ಶ್ರೀ ಜಗದಂಭಾ,ಶ್ರೀ ಸೇವಾಲಾಲ ಮಹಾರಾಜರ ಮಂದಿರ ಲೋಕಾರ್ಪಣೆ
ವಾಡಿ: ಪಟ್ಟಣದ ರೆಸ್ಟ್ ಕ್ಯಾಂಪ್ ತಾಂಡ ದಲ್ಲಿ ಶ್ರೀ ಜಗದಂಭಾ ಮತ್ತು ಶ್ರೀ ಸೇವಾಲಾಲ ಮಹಾರಾಜರ ಹಾಗೂ ರಾಮಜೀ ಮಹಾರಾಜರ ದೇವಸ್ಥಾನ ಲೋಕಾರ್ಪಣೆ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ ಗೊ ಮಾತೆಗೆ ಪ್ರಸಾದ್ ನೀಡುವುದರ ಮೂಲಕ ಉದ್ಘಾಟಿಸಲಾಯಿತು.
ಈ ವೇಳೆ ಕಾರ್ಯಕ್ರಮದ ಸಾನಿಧ್ಯ ವಹಿಸಿದ,ಹಲಕರ್ಟಿ *ಸಿದ್ದ ಸಂಸ್ಥಾನ ಮಠದ ಶ್ರೀ ರಾಜಶೇಖರ ಶಿವಾಚಾರ್ಯರು* ಮಾತನಾಡಿ
ಹಿಂದೂ ಸಂಸ್ಕೃತಿಯ ಆಚಾರ, ವಿಚಾರ ವಿಶ್ವಮಾನ್ಯವಾಗಿ ಉಳಿಸಿ ಬೆಳೆಸುವಲ್ಲಿ ಬಂಜಾರ ಸಮಾಜದ ಪ್ರಮುಖ ಪಾತ್ರವಿದೆ ಎಂದರು.
ಶ್ರೀ ಸೇವಲಾಲ ಮಹಾರಾಜರ ಬದುಕು,ಅವರಿಗೆ ಇದ್ದ ದೈವಿ ಶಕ್ತಿ ಅವರ ಗೋ ಭಕ್ತಿ ಇಂದು ನಮಗೆಲ್ಲಾ ಪ್ರೇರಣೆ,
ಆದರೆ ಇಂದಿನ ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿದೆ ಅದರ ಬದಲು ಧಾರ್ಮಿಕ ಮನೋಭಾವನೆಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಧರ್ಮ ಪಾಲನೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಭಾರತೀಯ ಸಂಸ್ಕೃತಿಯನ್ನು ಮೆಗೂಡಿಸಿಕೊಂಡು ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದರೆ ಬಾಳು ಹಸನವಾಗುತ್ತದೆ ಎಂದರು.
ಇಂದು ಹಿಂದೂ ಸಂಸ್ಕೃತಿ, ಸಂಸ್ಕಾರ, ಹಿಂದೂ ಧರ್ಮಗ್ರಂಥಗಳಲ್ಲಿನ ಸಾರವನ್ನು ನಾವೆಲ್ಲರೂ ಮತ್ತೊಮ್ಮೆ ಮನನ ಮಾಡುವುದು ತುರ್ತು ಅಗತ್ಯವಿದೆ. ಧರ್ಮದಲ್ಲಿನ ಸಾರವನ್ನು ಯುವ ಅರಿಯಬೇಕಾಗಿದೆ,ಇದಲ್ಲದೇ ಇದ್ದರೆ ಅನ್ಯ ಧರ್ಮಿಯರು ನಮ್ಮ ಸಮಾಜದ ಮೇಲೆ ಅಕ್ರಮಣ ಮಾಡಲು ಮುಂದಾಗುವರು, ದುಶ್ಚಟ ಹಾಗೂ ದ್ವೇಷಮುಕ್ತ ಸಮಾಜ ನಿರ್ಮಾಣಕ್ಕಾಗಿ ಹಿಂದೂ ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸವಾಗಬೇಕಿದೆ ಎಂದು ಹೇಳಿದರು.
*ಗೊಬ್ಬರ ಸಂತ ಸೇವಲಾಲ ಆಶ್ರಮದ ಬಲರಾಮ ಮಹಾರಾಜರು* ಮಾತನಾಡಿ ಸೇವಲಾಲ ಮಹಾರಾಜರು ಸಾರಿದ ಸಮಾಜದ ಒಗ್ಗಟ್ಟಿನ ಮತ್ತು ಆತ್ಮಸಾಕ್ಷಾತಕಾರದ ಸಾರವನ್ನು ಅಳವಡಿಸಿಕೊಂಡು ನಮ್ಮ ಧರ್ಮದ ಅಭಿಮಾನ ಮೆರೆಯಬೇಕಾಗಿದೆ ಎಂದರು.
ಹಿಂದೆ ಸುಮಾರು 33 ಸಾವಿರ ದೇವಸ್ಥಾನ ಗಳನ್ನು ಐದು ಶತಮಾನಗಳ ಕಾಲ ಮುಸ್ಲಿಂ ದೊರೆಗಳ ನಡೆಸಿದ ಆಳ್ವಿಕೆಯಲ್ಲಿ ಕಳೆದುಕೊಂಡಿದ್ದೇವೆ. ಸದ್ಯ ನಾವು ದೇವಸ್ಥಾನಗಳ ಮರುನಿರ್ಮಾಣದ ಜೊತೆಗೆ ಹಿಂದೂ ಧರ್ಮದ ಸರ್ವೇಜನ ಸುಖಿನೂ ಭವಂತು ಧೇಯ ನಮ್ಮದಾಗಲಿ ಎಂದರು.
ಪೌರಾದೇವಿ ಸಂತ ಸೇವಲಾಲ ಆಶ್ರಮದ ಸಂತೋಷ ಮಹಾರಾಜರು,ಮುಗುಳನಗಾಂವದ ಶ್ರೀ ಜೇಮಸಿಂಗ್ ಮಹಾರಾಜರು, ಲಾಡ ಚಿಂಚೋಳಿ ಸೇವಾಲಲ ಆಶ್ರಮದ ಶ್ರೀ ಸುನಿಲ್ ಮಹಾರಾಜರು,ಕಮಲಾಪುರ ಸೇವಾಲಾಲ್ ಆಶ್ರಮದ ಅನಿಲ ಮಹಾರಾಜರು, ಪೂಜ್ಯ ದೇವಿ ಮಾತಾಜಿ ವಾಡಿ,ದೇವಪುರ ತಂಡದ ಪೂಜ್ಯಶ್ರೀ ಶರವತಿ ಮಾತಾಜಿ, ವಾಡಿ ಪಟ್ಟಣದ ಶ್ರೀ ಠಾಕೂರ್ ಮಹಾರಾಜರು,ವಾಡಿ ಪಟ್ಟಣದ ಶ್ರೀಮತಿ ಕಾಂತಮ್ಮ ಮಾತಾ, ಶಾಹಬಾದ ಪ್ರತಾಪ್ ಸಿಂಗ್ ಮಹಾರಾಜರುದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಅಧ್ಯಕ್ಷರಾದ ರಮೇಶ ಕಾರಬಾರಿ,ವಾಡಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ,
ಮುಖಂಡರಾದ ಬಸವರಾಜ ಪಂಚಾಳ,ವಿಠಲ ವಾಲ್ಮೀಕ ನಾಯಕ, ಪೋಮಾ ರಾಠೊಡ, ಅಂಬರೀಶ ರಾಠೊಡ,
ಗೋಪಾಲ ರಾಠೊಡ ಚಿತ್ತಾಪುರ, ಭೀಮಶಾ ಜೀರೊಳ್ಳಿ, ಶಿವಶಂಕರ ಕಾಶೆಟ್ಟಿ,ಸುನಿಲ ಗುತ್ತೆದಾರ,ಕಾಶಿನಾಥ ಶೆಟಗಾರ,ಮಲ್ಲಿಕಾರ್ಜುನ ಸಾತಖೇಡ,
ದೇವಸ್ಥಾನ ಸಮಿತಿಯ ಸದಸ್ಯರಾದ ರವಿ ನಾಯಕ, ಹರಿ ನಾಯಕ, ನರಸಿಂಗ ನಾಯಕ, ಏಕನಾಥ ಕಾರಬಾರಿ, ಕರಣ ಮಹರಾಜ, ವೀರಸಿಂಗ ರಾಠೊಡ, ತುಕಾರಾಮ ರಾತೋಡ ಸೇರಿದಂತೆ ಇತರರು ಇದ್ದರು.
ಬಂದಂತಹ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.