ಸ್ಥಗಿತಗೊಂಡ ಮಲ್ಲಬಾದ್ ಏತ್ ನೀರಾವರಿ ಯೋಜನೆ ಪುನಃ ಆರಂಭಿಸುವಂತೆ ಆಗ್ರಹಿಸಿ ಪ್ರತಿಭಟನೆ 25 ಜನ ಹೋರಾಟಗಾರರ ಬಂಧನ...

ಸ್ಥಗಿತಗೊಂಡ ಮಲ್ಲಬಾದ್ ಏತ್ ನೀರಾವರಿ ಯೋಜನೆ ಪುನಃ ಆರಂಭಿಸುವಂತೆ ಆಗ್ರಹಿಸಿ ಪ್ರತಿಭಟನೆ 25 ಜನ ಹೋರಾಟಗಾರರ ಬಂಧನ...

ಸ್ಥಗಿತಗೊಂಡ ಮಲ್ಲಬಾದ್ ಏತ್ ನೀರಾವರಿ ಯೋಜನೆ ಪುನಃ ಆರಂಭಿಸುವಂತೆ ಆಗ್ರಹಿಸಿ ಪ್ರತಿಭಟನೆ 25 ಜನ ಹೋರಾಟಗಾರರ ಬಂಧನ...

ಯಡ್ರಾಮಿ ತಾಲೂಕಿನ ಮಲ್ಲಾಬಾದ್ ಏತ ನೀರಾವರಿ ಯೋಜನೆ 30 ವರ್ಷಗಳಿಂದ ನೆನಗೂದಿಗೆ ಬಿದ್ದ ಪರಿಣಾಮ ನೂರಾರು ರೈತರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಕನ್ನಡಪರ ಸಂಘಟನೆ ಹೋರಾಟಗಾರರು ಮತ್ತು ರೈತ ಸಂಘದ ಹೋರಾಟಗಾರರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ರಾಷ್ಟ್ರೀಯ ರಾಜ್ಯ ಹೆದ್ದಾರಿ ತಡೆದು ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆ ತಡೆ ಚಳುವಳಿ ನಡೆಸಿದರು ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಹೋರಾಟಗಾರರ ಮನವೊಲಿಸುವ ಪ್ರಯತ್ನ ಮಾಡಿದರು ಇದಕ್ಕೂ ಬಗ್ಗದ ಹೋರಾಟಗಾರರು ಜೆವರ್ಗಿ ತಾಲೂಕಿನ ಶಾಸಕರ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಈ ಸಂದರ್ಭದಲ್ಲಿ ತಾಲೂಕಿನ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಮಹಾಂತಗೌಡ ನಂದಿಹಳ್ಳಿ ಸಿಪಿಐ ಮುಖಂಡ ಮಹೇಶ್ ಕುಮಾರ್ ರಾಠೋಡ್ ಹಾಗೂ ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಶ್ರೀಮತಿ ಶೊಭಾ ಬಾಣಿ ಇಬ್ರಾಹಿಂ ಪಟೇಲ್ ಯಳವಾರ್ ಹಾಗು ರೈತಪರ ಹೋರಾಟಗಾರ ಮಲ್ಲನಗೌಡ ಪಾಟೀಲ್ ಕೆಲ್ಲೂರು ಇನ್ನಿತರ ಹೋರಾಟಗಾರರನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋದರು ಇದಾದ ನಂತರ ತಾಲೂಕಿನ ಶಾಸಕರಾದ ಡಾ ಅಜಯ ಸಿಂಗ್ ರವರು 15 ದಿನಗಳ ಒಳಗೆ ಟೆಂಡರ್ ಕರೆಯುವ ಭರವಸೆ ನೀಡಿದ್ದಾರೆ ಎಂದು ರೈತ ಸಂಘದ ಹೋರಾಟಗಾರರಾದ ಮಹಾಂತಗೌಡ ನಂದಿಹಳ್ಳಿ ಅವರು ಪತ್ರಿಕಾ ಮಾಧ್ಯಮದವರಿಗೆ ತಿಳಿಸಿದ್ದಾರೆ ಒಂದು ವೇಳೆ ತಾಲೂಕಿನ ಶಾಸಕರು ನಿರ್ಲಕ್ಷ ವಹಿಸಿದರೆ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರಮಾಣದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಹಾಂತಗೌಡ ನಂದಿಹಳ್ಳಿ ಅವರು ಈ ಸಂದರ್ಭದಲ್ಲಿ ತಿಳಿಸಿದರು