ಗಂಗಾ ಅಕ್ವಾ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ ನ ನಾಲ್ಕನೇ ವಾರ್ಷಿಕೋತ್ಸವ

ಕಮಲನಗರ ತಾಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ಬಸವ ಗಂಗಾ ಅಕ್ವಾ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ ನ ನಾಲ್ಕನೇ ವಾರ್ಷಿಕೋತ್ಸವ ಹಾಗೂ ೧೮೯ನೇ ಬಸವ ಜ್ಯೋತಿ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿದೆ.
ಶರಣ ಶ್ರೀ ನಾಗಯ್ಯ ಸ್ವಾಮಿಯವರ 54ನೇಯ ಹುಟ್ಟು ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಜರುಗಲಿದೆ.
ಇದೆ ತಿಂಗಳು 27 -11 - 2024 ರಂದು ಸಾಯಂಕಾಲ 5:00 ಗಂಟೆಗೆ ಮುಧೋಳ (ಬಿ) ಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲ್ಲಾಗಿದು ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಸದ್ಗುರು ಬಸವ ಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣ ತೀರ್ಥವಾಡಿ ಬಸವಕಲ್ಯಾಣ ಇವರು ದಿವ್ಯ ಸಾನಿಧ್ಯ ವಹಿಸುವರು ಹಾಗೂ ಶರಣ ಶ್ರೀ ಶಿವಾನಂದ ಹೈಬತಪೂರೆ ನ್ಯಾಯವಾದಿಗಳು ಬಸವಕಥಾ ಪ್ರವಚನಕಾರರು ಮಹಾರಾಷ್ಟ್ರ ಇವರು ಉದ್ಘಾಟಕರಾಗಿ ಭಾಗವಹಿಸುವರು ಮತ್ತು ವಿಶೇಷವಾಗಿ ಖ್ಯಾತ ಸಂಗೀತಗಾರರಾದ ಶರಣ ಶ್ರೀ ಶಿವಕುಮಾರ ಪಾಂಚಾಳ ಹಾಗೂ ಸಂಗಡಿಗರು ಸುಮಧುರ ಕಂಠದಿಂದ ವಚನಗಾಯನ ಉಣಬಡಿಸಲ್ಲಿದ್ದಾರೆ.
ಅದೇ ರೀತಿಯಾಗಿ ಅನೇಕ ಬಸವಾಭಿಮಾನಿಗಳು. ಬಸವ ಚಿಂತಕರು. ಕೃಷಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಧುರೀಣರು.ವೀರಯೋಧರು. ಜನಪದ ಕಲಾವಿದರು. ವಿವಿಧ ಸಂಘ ಸಂಸ್ಥೆಗಳ ಗಣ್ಯರಿಗೆ ವಿಶೇಷ ಸನ್ಮಾನ ನಡೆಯಲಿದೆ, ಆದಕಾರಣ ಸಮಸ್ತ ಬೀದರ ಜಿಲ್ಲೆಯ ವಿಶೇಷವಾಗಿ ಕಮಲನಗರ ಹಾಗೂ ಔರಾದ (ಬಾ) ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ಮಹಾಜನತೆ ಹಾಗೂ ಶರಣ ತಂದೆ ತಾಯಿಗಳು ಶರಣ ಸಹೋದರ ಸಹೋದರಿಯರು ಹಾಗೂ ಎಲ್ಲಾ ಶಾಲೆಯ ಮುದ್ದು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಎಂದು ನಾಗಯ್ಯ ಎಸ್ ಸ್ವಾಮಿ ಅಧ್ಯಕ್ಷರು ರಾಷ್ಟ್ರೀಯ ಬಸವದಳ ಘಟಕ ಕಮಲನಗರ್ ತಾಲೂಕ. ಮತ್ತು ಗುರುಬಸವೇಶ್ವರ ಅನುಭವ ಮಂಟಪ ಮುಧೋಳ (ಬಿ) ಹಾಗೂ ಬಸವಗಂಗಾ ಅಕ್ವಾ ಪ್ಯಾಕೇಜ್ ಡ್ರಿಂಕಿಂಗ್ ವಾಟರ ನ ಮಾಲಿಕರು ಸ್ವಾಗತ ಕೋರಿರುತ್ತಾರೆ.
ಸರಿಯಾಗಿ ಸಾಯಂಕಾಲ 5:00 ಗಂಟೆಗೆ ಮುಧೋಳ (ಬಿ ) ತೋರಣ ಔರಾದ(ಬಾ)ಮುಖ್ಯ ರಸ್ತೆಯಲ್ಲಿ ರುವ ಗುರು ಬಸವೇಶ್ವರ ಅನುಭವ ಮಂಟಪದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.