ಅಮೀತಕುಮಾರ ಕುಲಕರ್ಣಿ ಅವರಿಗೆ ತೊಗರಿ ಬೆಳೆಗೆ ಪರಿಹಾರಕ್ಕೆ ಮನವಿ ಪತ್ರ
ಅಮೀತಕುಮಾರ ಕುಲಕರ್ಣಿ ಅವರಿಗೆ ತೊಗರಿ ಬೆಳೆಗೆ ಪರಿಹಾರಕ್ಕೆ ಮನವಿ ಪತ್ರ
ಕಮಲನಗರ: ತಾಲೂಕಿನ ತೊಗರಿ ಬೆಳೆಯು ಕಾಂಡಮಚ್ಚೆರೋಗ,ನೆಟೆ ರೋಗ, ತೇವಾಂಶ ಕೊರತೆ ಸೇರಿ ವಿವಿಧ ರೀತಿಯ ವಿಚಿತ್ರ ರೋಗಗಳಿಂದ ಹಾಳಾದ ತೊಗರಿ ಬೆಳೆಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ನಿಡೋದಾ ಗ್ರಾಪಂ ಸದಸ್ಯ ನಾಗರಾಜ ಬಿರಾದಾರ ಕಮಲನಗರ ತಹಸೀಲ್ದಾರ ಅಮಿತ ಕುಮಾರ್ ಕುಲಕರ್ಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇತ್ತೀಚಿಗೆ ಬಂದ ಚಂಡಮಾರುತದಿಂದ ತಾಲೂಕಿನ ಹಲವು ಗ್ರಾಮದಲ್ಲಿ ಅನೇಕ ರೈತರ ಹೊದಲ್ಲಿ ಬಿತ್ತನೆ ಮಾಡಿರುವ ತೊಗರಿ ಬೆಳೆಗೆ ಇಂತಹ ರೋಗಗಳು ಅಪ್ಪಳಿಸಿ ತೊಗರಿಗೆ ಹತ್ತಿದ ಹೊಗಳು ಚೆಟ್ಟಿ ಸಂಪೂರ್ಣವಾಗಿ ಉದುರಿ ಹಾಳಾಗಿದೆ.ತೊಗರಿ ಬೆಳೆ ಒಣಗಲಾರಂಭಿಸಿದೆ.
ರೈತರು ೧ ಎಕರೆಗೆ ಸುಮಾರು ೧೦ ಕ್ವಿಂಟಾಲ್ ತೊಗರಿ ಬೆಳೆ ಬೆಳೆಯುವ ನಿರೀಕ್ಷೆ ಇಟ್ಟಿದ್ದರು. ಆದರೆ ಈ ಬಾರಿಯೂ ಚಂಡಮಾರುತದಿಂದ ನಿರಾಶೆಯಾಗಿ ಬಿಟ್ಟಿದೆ. ಇದರಿಂದ ತಾಲೂಕಿನ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.ಬೆಳೆ ಹಾನಿಯಿಂದ ತುಂಬಾ ನಷ್ಟವಾಗಿದೆ. ಹೀಗಾಗಿ ನಷ್ಟ ಅನುಭವಿಸುತ್ತಿರುವ ರೈತರಿಗೆ ತೊಗರಿ ಬೆಳೆಯನ್ನು ಪರಿಶಿಲಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.