ಸ್ವಚ್ಛತಾ ಕಾರ್ಯ ವೀಕ್ಷಣೆ ಮಾಡಿದ ಕೆ.ಗುರುಲಿಂಗಪ್ಪ ಪೌರಾಯುಕ್ತ :..

ಸ್ವಚ್ಛತಾ ಕಾರ್ಯ ವೀಕ್ಷಣೆ ಮಾಡಿದ ಕೆ.ಗುರುಲಿಂಗಪ್ಪ ಪೌರಾಯುಕ್ತ  :..

ಸ್ವಚ್ಛತಾ ಕಾರ್ಯ ವೀಕ್ಷಣೆ ಮಾಡಿದ ಕೆ.ಗುರುಲಿಂಗಪ್ಪ ಪೌರಾಯುಕ್ತ :..

ಶಹಾಬಾದ : - ನಗರದಲ್ಲಿ ಸ್ಥಾಪನೆ ಗೊಳ್ಳುತ್ತಿರುವ ಕೋತ್ತಲಾಪುರ ಎಲ್ಲಮ್ಮ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಮತ್ತು ಜಾತ್ರಾ ಮಹೋತ್ಸವಕ್ಕೆ ರಸ್ತೆ ಮತ್ತು ಆವರಣದ ಸ್ವಚ್ಛತಾ ಕಾರ್ಯದ ಬಗ್ಗೆ ನಗರ ಸಭೆ ಪೌರಾಯುಕ್ತ ಡಾ. ಕೆ.ಗುರುಲಿಂಗಪ್ಪ ರವರು ವಿಕ್ಷಣೆ ಮಾಡಿದರು.

ವಾರ್ಡ ನಂ 10 ರಲ್ಲಿ ದೇವಸ್ಥಾನದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಮತ್ತು ಜಾತ್ರೆ ಹಿನ್ನೆಲೆಯಲ್ಲಿ ನಗರ ಸಭೆ ಪೌರಾಯುಕ್ತ ಡಾ. ಕೆ.ಗುರುಲಿಂಗಪ್ಪ ರವರು ಸ್ವಚ್ಛತಾ ಕಾರ್ಯ ವಿಕ್ಷಣೆ ಮಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಒಳ್ಳೆಯ ವ್ಯವಸ್ಥೆ ಮಾಡುವಂತೆ ಹೇಳಿದರು.

ಜಾತ್ರೆಯ ನಡೆಯುವ ಸಂದರ್ಭದಲ್ಲಿ ನಸುಕಿನ ಜಾವ ಸ್ವಚ್ಛತೆ ಕಾರ್ಯ ಕೈಗೊಳ್ಳ ಬೇಕೆಂದು, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಹಾಗೂ ಜಾತ್ರೆಗೆ ಸಂಬಂಧಿಸಿದಂತೆ ಮತ್ತಿತರರ ವಿಷಯಗಳನ್ನು ಚರ್ಚಿಸಿದರು.

ನಗರದಲ್ಲಿ ಮೊದಲ ಬಾರಿ ಎಲ್ಲಮ್ಮ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಮತ್ತು ಜಾತ್ರಾ ಮಹೋತ್ಸವ ಕ್ಕೆ ಸಾವಿರಾರು ಭಕ್ತಾಧಿಗಳು ಬರುವ ಹಿನ್ನೆಲೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಜಾತ್ರೆ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ರಸ್ತೆಗಳ, ವಾಹನಗಳ ನಿಲುಗಡೆ ಸ್ವಚ್ಛತೆ ಹಾಗೂ ಇ. ಶೌಚಾಲಯಗಳ ನಿರ್ಮಾಣದ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿದರು ಹಾಗೆ ಕೆಳ ಹಂತದ ಅಧಿಕಾರಿಗಳಿಗೆ ಸ್ಥಳದ ಸ್ವಚ್ಛತೆ ಜೊತೆ ಬ್ಲೀಚಿಂಗ್ ಪೌಡರ ಹಾಕುವಂತೆ ಆದೇಶ ನೀಡಿದರು.

ಈ ಸಂದರ್ಭದಲ್ಲಿ ಎಇಇ ರಾಮಚಂದ್ರ, ನೈರ್ಮಲ್ಯ ನಿರೀಕ್ಷಕ ಮೈನೋದ್ದಿನ, ನಗರ ಸಭೆ ಮಾಜಿ ಸದಸ್ಯ ರಾಜು ಮೇಸ್ತ್ರಿ, ಶರಣು ಪಗಲಾಪುರ ಹಾಗೂ ಸಿದ್ದು ಪಾಟೀಲ ಇದ್ದರು.

ಶಹಾಬಾದ ಸುದ್ದಿ : ನಾಗರಾಜ್ ದಂಡಾವತಿ