ಶಾಲಾ ಮಕ್ಕಳಿಂದ ಶರಣರ ವೇಷ ಭೂಷಣ ಸ್ಪರ್ಧೆಗಳು
ಶಾಲಾ ಮಕ್ಕಳಿಂದ ಶರಣರ ವೇಷ ಭೂಷಣ ಸ್ಪರ್ಧೆಗಳು
ಕಮಲನಗರ: ತಾಲೂಕಿನ ಡಾ|| ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ, ಶ್ರೀ ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆ ಹಾಗೂ ಗುರುಕಾರುಣ್ಯ ಪಬ್ಲಿಕ್ ಸ್ಕೂಲ್‌ನಲ್ಲಿ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು 135 ನೇ ಜಯಂತ್ಯುತ್ಸವ ನಿಮಿತ್ಯ ಮಕ್ಕಳಿಂದ ಅನೇಕ ಶರಣರ ವೇಷಭೂಷಣ ಅನೇಕ ಮಕ್ಕಳು ವೇಷಧಾರಿ ಅಲ್ಲಮಪ್ರಭು, ಬಸವಣ್ಣವ, ಅಕ್ಕಮಹಾದೇವಿ, ಸತ್ಯಕ್ಕ, ರಾಣಿ ಚನ್ನಮ್ಮ, ಡಾ|| ಚನ್ನಬಸವ ಪಟ್ಟದ್ದೇವರು, ಛದ್ಮವೇಷ ಧರಿಸಿದರು ಮತ್ತು ಅವರ ಕುರಿತು ಸ್ಪರ್ದೆಗಳು ಜರುಗಿದವು.
ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಶ್ರೀ ಮಡಿವಾಳಪ್ಪಾ ಮಹಾಜನ ಮತ್ತು ಉಮಾಕಾಂತ ಸುಲಾಕೆ, ಶಾಲೆಯ ಆಡಳಿತಾಧಿಕಾರಿಗಳು ಶ್ರೀ ಯುತ ಚನ್ನಬಸವ ಘಾಳೆ ಪ್ರಾಂಶುಪಾಲರಾದ ಶ್ರೀಧರ ರಡ್ಡಿ, ಭರತ ನಂದನವರೆ, ರಾಜಕುಮಾರ ರಾಂಪೂರೆ, ಪೂಜಾ ಬಿರಾದಾರ, ದೀಪಾ ಅಂಬಿಗ, ರಾಜೇಶ್ವರಿ ಬಿರಾದಾರ, ಪಲ್ಲವಿ ನಾಯ್ಕ, ಶಿವಕುಮಾರ ಎಕಲಾರೆ, ಶಾಲೆಯ ಸಿಬ್ಬಂದ್ಧಿ ವರ್ಗದವರು ಉಪಸ್ಥಿತರಿದರು.