ರಾಜ್ಯಾಧ್ಯಕ್ಷರ ಸ್ಥಾನದ ಅಭ್ಯರ್ಥಿ ಬಿ ಪಿ ಕೃಷ್ಣೇಗೌಡರು, ಖಜಾಂಚಿ ಅಭ್ಯರ್ಥಿ ವಿ ವಿ ಶಿವರುದ್ರಯ್ಯನವರು ಕಲಬುರಗಿಯಲ್ಲಿ ಪ್ರಚಾರ
ರಾಜ್ಯಾಧ್ಯಕ್ಷರ ಸ್ಥಾನದ ಅಭ್ಯರ್ಥಿ ಬಿ ಪಿ ಕೃಷ್ಣೇಗೌಡರು, ಖಜಾಂಚಿ ಅಭ್ಯರ್ಥಿ ವಿ ವಿ ಶಿವರುದ್ರಯ್ಯನವರು ಕಲಬುರಗಿಯಲ್ಲಿ ಪ್ರಚಾರ
ಕಲಬುರಗಿ: ನಗರದ ತಿಮ್ಮಾಪುರ ವೃತ್ತದಲ್ಲಿ ಇರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಪ್ರಜಾಸತ್ತಾತ್ಮಕ ವೇದಿಕೆ ರಾಜ್ಯಾಧ್ಯಕ್ಷರ ಹಾಗೂ ಖಜಾಂಚಿ ಚುನಾವಣೆ 2024-2029 ಯ ಪ್ರಚಾರಕ್ಕೆ ಆಗಮಿಸಿದ ರಾಜ್ಯಾಧ್ಯಕ್ಷರ ಸ್ಥಾನದ ಅಭ್ಯರ್ಥಿ ಬಿ ಪಿ ಕೃಷ್ಣೇಗೌಡರು, ಖಜಾಂಚಿ ಅಭ್ಯರ್ಥಿ ವಿ ವಿ ಶಿವರುದ್ರಯ್ಯನವರು ಇದೆ ತಿಂಗಳ 27-12-2024 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಮತ್ತು ರಾಜ್ಯ ಖಜಾಂಚಿ ಸ್ಥಾನಕ್ಕೆ ಚುನಾವಣೆಯ ಮತ ಯಾಚನೆಗೆ ನಗರಕ್ಕೆ ಆಗಮಿಸಿ ಮತದಾರರನ್ನು ಉದ್ದೇಶಿಸಿ ಅಭ್ಯರ್ಥಿ ಬಿ ಪಿ ಕೃಷ್ಣೇಗೌಡರು ಮಾತನಾಡಿದರು.
ಚುನಾವಣೆಯಲ್ಲಿ ನಮಗೆ ಗೆಲ್ಲಿಸಿ ಕಲಬುರಗಿ ನಗರದ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಹಾಗೂ ಎನ್ ಪಿ ಎಸ್ ರದ್ದು ಪಡಿಸಿ ಒಪಿಎಸ್ ಜಾರಿಗೆ ತರುವಂತೆ ಹೋರಾಟ ಮತ್ತು 371 ಜೆ ಕಲಂ ನ ಲೋಪದೋಷಗಳನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಡಲು ಪ್ರಯತ್ನ ಹಾಗೂ ಕಲಬುರಗಿ ನಗರದಲ್ಲಿ ಭವ್ಯವಾದ ನೌಕರರ ಭವನ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಪ್ರಮುಖರಾದ ಎನ್ ಪಿ ಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ತೇಜ್, ತೀಮಯ್ಯ ಪುರಲೆ, ಜಗದೀಶಗೌಡ ಪಾಟೀಲ, ನಾರಾಯಣಸ್ವಾಮಿ, ಮಲ್ಲೇಶ ಕುರಿಗಾರ ಬಸವರಾಜ ಸಂಗಪ್ಪ, ಚೇತನ್, ಮಂಜುನಾಥ,ಲೋಕೆಶ, ಚೇತನ್,ಪ್ರೇಮಿಳಾ ಕಾಮನಹಳ್ಳಿ ,ಯಶ್ವಂತಿ ನರಸಪ್ಪ, ಪರಮೇಶ್ವರ ಓಕಳಿ, ಚಂದ್ರಕಾಂತ ತಳವಾರ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬಳುಂಡಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಹೂಗಾರ ಜಿಲ್ಲಾ ಖಜಾಂಚಿ ಶ್ರೀ ಮಂತ ಪಟ್ಟೇದಾರ, ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಯ ಜವಳಿ ತಾಲೂಕಿನ ಅಧ್ಯಕ್ಷರಾದ ಸತೀಶ್ ಷಣ್ಮುಖ, ಅರವಿಂದ ಪಸಾರ ಮಿಟ್ಟುಸಾಬ್ ಮುಲ್ಲಾ
ದೇವೇಂದ್ರ ಹೋಳ್ಕರ್, ಶಿವಪುತ್ರ ಕರಣಿಕ, ಶಿವಕುಮಾರ ಡಂಬಳ, ಸಂಜು ಬಗಲಿ ಅನೀಲ ಗುತ್ತೇದಾರ, ದ್ಯಾವಪ್ಪಗೌಡ ಪಾಟೀಲ, ಪ್ರಮುಖರಾದ ಚಂದ್ರಕಾAತ ಏರಿ, ಎಂ ಬಿ ಪಾಟೀಲ, ನೀಜಲಿಂಗಪ್ಪ ಕೊಳ್ಳಿ, ರಾಜೇಶ್ ನೀಲಳ್ಳಿ, ಸುರೇಶ ವಗ್ಗೆ, ಈಶ್ವರ ಗೌಡ ಪಾಟೀಲ್, ಸಂತೋಷ ಸಲಗರ, ಪೀರಪ್ಪ ಸಾಗನೂರ, ಸಂತೋಷ ಗುಂಗು, ಅಶೋಕ ಸೊನ್ನ, ನವನಾಥ ಶಿಂದೆ, ರಾಚಣ್ಣ ಬಗೊಂಡ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.