ಖಜೂರಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಕಲಾವತಿ ಖೂನೆ ಅವಿರೋಧ ಆಯ್ಕೆ

ಖಜೂರಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಕಲಾವತಿ ಖೂನೆ  ಅವಿರೋಧ ಆಯ್ಕೆ

ಖಜೂರಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಕಲಾವತಿ ಖೂನೆ ಅವಿರೋಧ ಆಯ್ಕೆ 

ಆಳಂದ: ಖಜೂರಿ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಖಜೂರಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಕಲಾವತಿ ಶ್ರೀಕಾಂತ ಖೂನೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಖಜೂರಿ ಗ್ರಾಮ ಪಂಚಾಯತಿಯ 13 ಜನ ಸದಸ್ಯರಿದ್ದಾರೆ .ಅಧ್ಯಕ್ಷೆ ಸುನಿತಾ ಮಗರೆ ಅವರ ವಿರುದ್ದ ಕಲ್ಬುರ್ಗಿ ಸಹಾಯಕ ಆಯುಕ್ತರ ಬಳಿ ಅವಿಶ್ವಾಸಕ್ಕೆ ಪ್ರಸ್ತಾವನೆ ಸಲ್ಲಿಸಿದರು.

ಸೋಮವಾರ ನಡೆದ ಚುನಾವಣೆಯಲ್ಲಿ ಒಟ್ಟು 17 ಗ್ರಾಮ ಪಂಚಾಯತ್ ಸದಸ್ಯರಲ್ಲಿ 13 ಜನರು ಹಾಜರಿದ್ದು, ಇದರಲ್ಲಿ ಕಲಾವತಿ ಶ್ರೀಕಾಂತ್ ಖೂನೆ ಅಧ್ಯಕ್ಷ ಸ್ಥಾನಕ್ಕಾಗಿ ಒಬ್ಬರೇ ನಾಮ ಪತ್ರ ಸಲ್ಲಿಸುವುದರಿಂದ, ನಿಗದಿತ ಅವಧಿ ಒಳಗೆ ಬೇರೆ ಯಾರೂ ನಾಮ ಪತ್ರ ಸಲ್ಲಿಸಿಲ್ಲದ ಕಾರಣ ಚುನಾವಣಾಧಿಕಾರಿ ಹಾಗೂ ತಹಸೀ ಲ್ದಾರ್ ಅಣ್ಣಾರಾವ ಪಾಟೀಲ್ ಅವರ ಇವರ ಆಯ್ಕೆಯನ್ನು ಅವಿರೋಧ ಎಂದು ಪ್ರಕಟಿಸಿದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರೀತಿ ರೆಡ್ಡಿ ಹಾಗೂ ಉಪ ತಹಸೀ ಲ್ದಾರ್ ಗುರುಲಿಂಗಯ್ಯ ಸ್ವಾಮಿ ಚುನಾವಣೆ ಪ್ರಕ್ರೀಯೆಯಲ್ಲಿ ಜತೆಯಲ್ಲಿ ಇದ್ದರು.

ಗ್ರಾಮ ಪಂಚಾಯತ ಉಪಾಧ್ಯಕ್ಷ ತಿಪ್ಪಣ್ಣಪ್ಪ ಬಂಡೆ ಮತ್ತು ಸದಸ್ಯರಾದ ವಿಜಯ ಕುಮಾರ ಢಗೆ ಮಂಜುನಾಥ ಬಂಗರಗೆ, ಕಲ್ಯಾಣಿ ಖೂನೆ, ಸುನೀತಾ ಪೂಜಾರಿ, ವಸಂತ ಭದ್ರೆ, ಗುರುಬಸಪ್ಪ ಹುಲ್ಲೆ ಹಾಗೂ ಪ್ರಮುಖರಾದ ಭೀಮರಾವ ಢಗೆ, ಶ್ರೀಕಾಂತ ಖೂನೆ, ರಾಜಶೇಖರ ಹರಿಹರ, ವೈಜುನಾಥ ತಡಕಲ ಉಪಸ್ಥಿತರಿದ್ದರು.