ಅನುಮಾನ , ಅವಮಾನದ ಮೆಟ್ಟಿಲುಗಳು ಆತ್ಮವಿಶ್ವಾಸದಿಂದ ಎದುರಿಸಿದಾಗ ಸನ್ಮಾನ ನಮ್ಮದಾಗುತ್ತದೆ : ಬಳ್ಳುಂಡಗಿ
ಅನುಮಾನ , ಅವಮಾನದ ಮೆಟ್ಟಿಲುಗಳು ಆತ್ಮವಿಶ್ವಾಸದಿಂದ ಎದುರಿಸಿದಾಗ ಸನ್ಮಾನ ನಮ್ಮದಾಗುತ್ತದೆ : ಬಳ್ಳುಂಡಗಿ
ಅನುಮಾನ , ಅವಮಾನದ ಮೆಟ್ಟಿಲುಗಳು ಆತ್ಮವಿಶ್ವಾಸದಿಂದ ಎದುರಿಸಿದಾಗ ಸನ್ಮಾನ ನಮ್ಮದಾಗುತ್ತದೆ ಎಂದು ಕಲಬುರಗಿ ಜಿಲ್ಲಾ ಸರಕಾರಿ ನೌಕರರ ನೂತನ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬಳ್ಳುಂಡಗಿ ಹೇಳಿದರು.
ಕಲಬುರಗಿ ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 241ನೇ ಸೋಮವಾರದ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಸಮಯ ಬಂದಾಗ ಮಾತನಾಡುವವರಿಗಿಂತ, ಸಮಯ ಕೊಟ್ಟು ಮಾತನಾಡುವವರನ್ನು ನಂಬಿ, ಏಕೆಂದರೆ ಅವರು ಎಂತಹ ಸಮಯದಲ್ಲೂ ನಿಮ್ಮಿಂದ ದೂರ ಹೋಗುವುದಿಲ್ಲ. ಪೂಜ್ಯರು ಭಕ್ತರಿಗಾಗಿ ಸಮಯ
ಕೊಟ್ಟು ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಮಾಡುವ ಮೂಲಕ ಮನಸ್ಸಿನ ಮಲಿನತೆಯನ್ನು ಶುಚಿಗೊಳಿಸಿ ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹೇಳಿದರು. ಕಲಬುರಗಿ ಜಿಲ್ಲಾ ಸರಕಾರಿ ನೌಕರರ ಪ್ರಧಾನ ಕಾರ್ಯದರ್ಶಿಯಾದ ಮಹೇಶ ಹೂಗಾರ ಮಾತನಾಡುತ್ತ ಸೋಲನ್ನು ನಿರಾಳವಾಗಿ ಸ್ವೀಕರಿಸ ಬಲ್ಲವರಿಗೆ ಮಾತ್ರ ಯಶಸ್ಸನ್ನು ಬೆನ್ನಟ್ಟುವ ತಾಕತ್ತು ಇರುತ್ತದೆ. ವ್ಯಕ್ತಿಯ ವ್ಯಕ್ತಿತ್ವ ಗಡಿಯಾರದಲ್ಲಿರುವ ಸಂಖ್ಯೆ ಆಗಿರಬೇಕೆ ವಿನಹ ಕಾಲಕ್ಕೆ ತಕ್ಕಂತೆ ಬದಲಾಗುವ ಮುಳ್ಳಾಗಬಾರದು. ಒಳ್ಳೆಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಸಮಾಜದ ಆಸ್ತಿಯಾಗುತ್ತಾನೆ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಿಗೂ, ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿಗಳಿಗೂ ಹಾಗೂ ಜಿಲ್ಲಾ ಖಜಾಂಚಿಗಳಾದ ಶ್ರೀಮಂತ ಪಟ್ಟೆದಾರ, ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಯ ಜವಳಿ ಅವರಿಗೂ ವಿಶೇಷವಾಗಿ ಗೌರವಿಸಲಾಯಿತು. ಶ್ರೀ ಮಠದ ಪೀಠಾಧಿಪತಿಗಳಾದ ಪೂಜ್ಯ ಗುರುಪಾದಲಿಂಗ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸರಕಾರಿ ನೌಕರರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಂ ಬಿ ಪಾಟೀಲ, ಪ್ರೇಮಾನಂದ ಚಿಂಚೊಳಿಕರ , ನ್ಯಾಯವಾದಿ ಹಣಮಂತರಾಯ ಅಟ್ಟೂರ, ಅಂಬಾರಾಯ ಕೋಣೆ, ಮಾಣಿಕ ಮಿರ್ಕಲ್, ರೇವಣಸಿದ್ದಯ್ಯ ಶಾಸ್ತ್ರಿ, ಶರಣು ವರನಾಳ, ಶಾಂತು ಕಲಬುರಗಿ, ಆನಂದ ಪಾಟೀಲ, ಚಿದಾನಂದ ಪಾಟೀಲ,ನಾಗರಾಜ ಪಾಟೀಲ, ಬಲವಂತರಾಯ ಕಣ್ಣೂರ, ಶಿವರಾಜ ಭಾಲಕೇಡ, ಮಲ್ಲಯ್ಯ ಗುತ್ತೇದಾರ, ಶಿವಕುಮಾರ ಸಾವಳಗಿ,ಗುರುರಾಜ ಹಸರಗುಂಡಗಿ, ಸಿದ್ದಣ್ಣ ವಾಡಿ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.