ಮಾತಾ ಮಾಣಿಕೇಶ್ವರಿ ದೇವಸ್ಥಾನ ಮತ್ತು ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ಮಾತಾ ಮಾಣಿಕೇಶ್ವರಿ ದೇವಸ್ಥಾನ ಮತ್ತು ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ಮಾತಾ ಮಾಣಿಕೇಶ್ವರಿ ದೇವಸ್ಥಾನ ಮತ್ತು ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ಕಲಬುರಗಿ ನಗರದ ಬ್ರಹ್ಮಪೂರ ಬಡಾವಣೆಯಲ್ಲಿರುವ ಚೌಡೇಶ್ವರ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಾತಾ ಮಾಣಿಕೇಶ್ವರಿ ದೇವಸ್ಥಾನ ಮತ್ತು ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.

ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರ ನೇತೃತ್ವದಲ್ಲಿ ಶ್ರೀ ಮಾತಾ ಮಾಣಿಕೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ಮಾತಾ ಮಾಣಿಕೇಶ್ವರಿ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ಸಚಿವ ಈಶ್ವರ ಖಂಡ್ರೆ ಸೇರಿದಂತೆ ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. 

ಬಳಿಕ ಮಾತನಾಡಿದ ಸಚಿವ ಈಶ್ವರ ಖಂಡ್ರೆ ಅವರು, ಕೋಲಿ ಕಬ್ಬಲಿಗ ಸಮಾಜ ನಂಬಿದವರ ಕೈ ಹಿಡಿಯುವ ನಂಬಿಗಸ್ಥ ಸಮಾಜವಾಗಿದೆ. 

ಮಾತೆ ಮಾಣಿಕೇಶ್ವರಿ ಜನ್ಮ ತಾಳಿದ ಈ ಸಮಾಜದಲ್ಲಿ ಜನಿಸಿದ ಸರ್ವರೂ ಪುಣ್ಯವಂತರು ಎಂದು ಅಭಿಪ್ರಾಯಪಟ್ಟರು. 

ಬಳಿಕ ಮಾತನಾಡಿದ ಸಚಿವ ಶರಣಪ್ರಕಾಶ್ ಪಾಟೀಲ್ ಅವರು, ಮಾತಾ ಮಾಣಿಕೇಶ್ವರಿ ಅಮ್ಮನವರ ನಡೆದಾಡುವ ದೇವತೆ ಇದ್ದಹಾಗೆ, ಸಮಾಜಕ್ಕಾಗಿ ಭಕ್ತರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಸಾದ್ವಿ ಎಂದು ಹೇಳಿದರು.

ನಂತರ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಮಾತನಾಡಿ, ಮಾತೆ ಮಾಣಿಕೇಶ್ವರಿ ನಮ್ಮ ಸಮಾಜದ ಬಹುದೊಡ್ಡ ಶಕ್ತಿ ಆಗಿದ್ದಾರೆ ಎಂದರು. 

ಸಮಾರಂಭದ ದಿವ್ಯ ಸಾನಿಧ್ಯವನ್ನು ಯಾನಗುಂದಿಯ ಶಿವಯ್ಯ ಸ್ವಾಮಿಜಿ ವಹಿಸಿಕೊಂಡಿದ್ರು. ಜಗದ್ಗುರು ಡಾ.ಸಾರಂಗದೇಶಿ ಕೇಂದ್ರ ಮಹಾಸ್ವಾಮಿಗಳು, ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಡಾ.ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಕೊತಲಪ್ಪ ಮಹಾಸ್ವಾಮಿಗಳು, ನಂದೀಶ್ವರಿ ಅಮ್ಮ, ಸಚಿವ ಶರಣಬಸಪ್ಪ ದರ್ಶನಪೂರ್, ಶಾಸಕ ಬಿ ಆರ್ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಖನೀಜ್ ಫಾತಿಮಾ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಎಮ್ ಎಲ್ ಸಿ ಶಶೀಲ್ ನಮೋಶಿ, ಬಿಜಿ ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಶರಣಕುಮಾರ ಮೋದಿ, ಸಂದೇಶ ಕಮಕನೂರ್, ಕಮಲಾಕರ್, ಫರಾಜ್ ಸೇರಿದಂತೆ ಕೋಲಿ ಕಬ್ಬಲಿಗ ಸಮಾಜದ ಅನೇಕ ಮುಖಂಡರು ಹಾಗೂ ದೇವಸ್ಥಾನ ಸಮಿತಿ ಮುಖಂಡರು ಸಮಾರಂಭದಲ್ಲಿ ಭಾಗವಹಿಸಿದ್ದರು.