ವಾಡಿಯಲ್ಲಿ ಶ್ರಾವಣ ಶುಕ್ರವಾರದ ಸಡಗರ
ವಾಡಿಯಲ್ಲಿ ಶ್ರಾವಣ ಶುಕ್ರವಾರದ ಸಡಗರ
ವಾಡಿ: ಪಟ್ಟಣದ ಮಲ್ಲಿಕಾರ್ಜುನ ಬಡಾವಣೆಯ ಕಾಶೆಟ್ಟಿ ಮನೆಯಲ್ಲಿ
ಕೊನೆಯ ಶ್ರಾವಣ ಶುಕ್ರವಾರದ ಅಂಗವಾಗಿ ಪ್ರೇಮಾವತಿ ಕಾಶೆಟ್ಟಿ, ಸಂಗೀತಾ ಯಾರಿ ಹಾಗೂ ಸುನೀತಾ ಪಾಟೀಲ ಮಹಾಲಕ್ಷ್ಮೀ ಪೂಜೆ ಕೈಗೊಂಡರು.
ಶುಕ್ರವಾರ ಅದರಲ್ಲೂ ಕೊನೆಯ ಶ್ರಾವಣ ಶುಕ್ರವಾರ ಲಕ್ಷ್ಮಿಯನ್ನು ಆರಾಧನೆ ಮಾಡಿದರೆ ಸಂಪತ್ತು ವೃದ್ಧಿಸುವುದು ಎಂಬ ನಂಬಿಕೆ.
ಮನೆಯಲ್ಲಿನ ಮುತ್ತೈದೆಯರು ಲಕ್ಷ್ಮಿ ಪೂಜೆ ಮಾಡಿದರೆ ಸಕಲ ಇಷ್ಟಾರ್ಥಗಳು ನೆರವೇರುತ್ತವೆ. ವ್ಯಾಪಾರದಲ್ಲಿ ಪ್ರಗತಿ ಸಾಧಿಸಿ ಆರ್ಥಿಕ ಸಂಕಷ್ಟದ ನಿವಾರಣೆ ಜೊತೆಗೆ ವರ್ಷ ಪೂರ್ತಿ ಸಂಪತ್ತು ಮನೆ ತುಂಬುತ್ತದೆ ಎನ್ನುವ ಕಾರಣಕ್ಕಾಗಿ ಶ್ರಾವಣ ಶುಕ್ರವಾರ ಹೆಯಮಹತ್ವ ಹೊಂದಿದೆ.