ಶ್ರೀ ಚಂದ್ರಶೇಖರ್ ಮ್ಯಾಳಗಿ ಅವರ 55ನೇ ಜನ್ಮದಿನೋತ್ಸವ ಅದ್ದೂರಿ ಆಚರಣೆ

ಶ್ರೀ ಚಂದ್ರಶೇಖರ್ ಮ್ಯಾಳಗಿ ಅವರ 55ನೇ ಜನ್ಮದಿನೋತ್ಸವ ಅದ್ದೂರಿ ಆಚರಣೆ

  ಶ್ರೀ ಚಂದ್ರಶೇಖರ್ ಮ್ಯಾಳಗಿ ಅವರ 55ನೇ ಜನ್ಮದಿನೋತ್ಸವ ಅದ್ದೂರಿ ಆಚರಣೆ

ಕಲಬುರಗಿ, ಆಗಸ್ಟ್ 20:ಸಪ್ತ ನೇಕಾರ ಸೇವಾ ಸಂಘದ ಕಚೇರಿಯಲ್ಲಿ ಇಂದು ಜಿಲ್ಲಾ ಕುರುವಿನಶೆಟ್ಟಿ ಹಾಗೂ ನೇಕಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ಮ್ಯಾಳಗಿ ಅವರ 55ನೇ ಜನ್ಮದಿನೋತ್ಸವವನ್ನು , ಸಂಭ್ರಮದೊಂದಿಗೆ ಆಚರಿಸಲಾಯಿತು. ವಿಶೇಷವಾಗಿ ಡಿ. ದೇವರಾಜ ಅರಸರ 110ನೇ ಜನುಮ ದಿನದಲ್ಲಿಯೇ ಈ ಕಾರ್ಯಕ್ರಮ ನಡೆದಿದ್ದು, ಸಂಘದ ಸದಸ್ಯರಿಗೆ ದ್ವಗುಣ ಖುಷಿ ನೀಡಿತು.

ಕಾರ್ಯಕ್ರಮವನ್ನು ಆಯೋಜಿಸಿದ್ದ ಹೋರಾಟಗಾರ ಜೋಳದ ಲಕ್ಷ್ಮೀಕಾಂತ ಅವರು “ಡಿ ದೇವರಾಜ ಅರಸರ ದನಿಯಂತೆ ನೇಕಾರರ ಹಿತಕ್ಕಾಗಿ ಶ್ರಮಿಸುತ್ತಿರುವ ನಮ್ಮ ನೇಕಾರರ CM ಅವರ ಜನ್ಮದಿನವನ್ನು ಆಚರಿಸಲು ಬಹಳ ಸಂತೋಷವಾಗಿದೆ” ಎಂದು ಸ್ವಾಗತ ಭಾಷಣ ಮಾಡಿದರು.

ಸಮುದಾಯದ ಹಿರಿಯರಾದ ವೀರಸಂಗಪ್ಪ ಬುಳ್ಳಾ ಅವರು ಜನ್ಮದಿನಾರ್ಘ್ಯವಾಗಿ ಶಾಲು ಹೊದಿಸಿ ಗೌರವಿಸಿದರು. ನಿವೃತ್ತ ನಾಗಣ್ಣ ಜಂಜಾ ಮಾತನಾಡಿ “ಕಲಬುರಗಿಯ ನೇಕಾರರು ಸಾಮಾಜಿಕವಾಗಿ ಏಳಾಟ ಮಾಡುವಂತೆ ಚಂದ್ರಶೇಖರ್ ಮ್ಯಾಳಗಿ ನೈತಿಕ ಶಕ್ತಿಯಾಗಿ ಸಾಥ್ ನೀಡುತ್ತಿದ್ದಾರೆ” ಎಂದರು.

ನ್ಯಾಯವಾದಿ ಜೆ. ವಿನೋದಕುಮಾರ ತಮ್ಮ ಶುಭಾಶಯ ಸೂಚಿಸಿ, “ಸಪ್ತ ನೇಕಾರರನ್ನು ಒಂದೇ ಹೂವಿನಲ್ಲಿ ಜೋಡಿಸಿದ ಕಳಕಳಿಯ ನಾಯಕರು ಇವರು” ಎಂದು ಪ್ರಶಂಸಿಸಿದರು.

ಅಧ್ಯಕ್ಷೀಯ ಭಾಷಣ ಹೊರಹಾಕಿದ ಹೈಕೋರ್ಟ ವಕೀಲ ಹಾಗೂ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ, “ಕಳೆದ ನಾಲ್ಕುವರ್ಷಗಳಿಂದ ಮ್ಯಾಳಗಿ ಅವರು ಸಮುದಾಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ದೇವರಾಜ ಅರಸರಂತೆ ನಮಗೆ ಆಧಾರ ಶಕ್ತಿಯಾಗಿ ನಿಂತಿದ್ದಾರೆ” ಎಂದು ನುಡಿದರು.

ಶ್ರೀನಿವಾಸ್ ಬಲಪುರ ವಂದನಾರ್ಥವಾಗಿ ಮಾತನಾಡಿದರು. ನಂತರ ಪದ್ಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ನಾಗರಾಜ ಕುಸಮ್ ವಿಶೇಷ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರಾಜಶೇಖರ್ ಸಬಸಗಿ, ಮಂಜುನಾಥ್ ಬಾಜಿ, ಮಲ್ಲಿಕಾರ್ಜುನ ಕುಂಟೋಜಿ, ನ್ಯಾಯವಾದಿ ಸಂತೋಷ ಜಮಖಂಡಿ, ರಾಜು ಕೊಷ್ಠಿ ಹಾಗೂ ಹಲವಾರು ಸಂಘದ ಸದಸ್ಯರು ಉಪಸ್ಥಿತರಿದ್ದರು.

-