ಮನ್ನೂರ್ ಆಸ್ಪತ್ರೆಯಲ್ಲಿ ಅಡ್ವಾನ್ಸ್ ಡ ಕಿಡ್ನಿ ಕ್ಯಾನ್ಸರ್ ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮನ್ನೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ಅಮೋಘ ಸಾಧನೆ
ಮನ್ನೂರ್ ಆಸ್ಪತ್ರೆಯಲ್ಲಿ ಅಡ್ವಾನ್ಸ್ ಡ ಕಿಡ್ನಿ ಕ್ಯಾನ್ಸರ್ ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
ಮನ್ನೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ಅಮೋಘ ಸಾಧನೆ
ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಪ್ರತಿಷ್ಠಿತ ಮನ್ನೂರ ಆಸ್ಪತ್ರೆಯ ವೈದ್ಯರ ತಂಡವು ಕಿಡ್ನಿಯಿಂದ ಹೃದಯಕ್ಕೆ ಹೋಗುವ ಮುಖ್ಯ ರಕ್ತನಾಳದ ಕಿಡ್ನಿ ಕ್ಯಾನ್ಸರ್ ಗೆ ಅಪರೂಪದ ಮತ್ತು ಸವಾಲಿನ ಪ್ರಕರಣದಲ್ಲಿ ಅಡ್ವಾನ್ಸ್ ಡ ಕಿಡ್ನಿ ಕ್ಯಾನ್ಸರ್ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದೆ.
ಕಲಬುರಗಿ ನಗರದ ಬಾರಹಿಲ್ಸ್ ಬಳಿ ಇರುವ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಅಹ್ಮದ ಮನ್ನೂರ ಮಾತನಾಡಿ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಅಲ್ಲಾಬಕ್ಷ 65ವಯಸ್ಸು ಈ ರೋಗಿ ಕಳೆದ 1 ತಿಂಗಳಿನಿಂದ ಮೂತ್ರದಲ್ಲಿ ರಕ್ತ ಹೊಗುತ್ತಿರುವುದು ಹಾಗೂ ಹಾಗೂ ಹೊಟ್ಟೆ ನೋವು ಕಾಣಿಸುತ್ತಿತ್ತು, ಮೂರನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಇವರು ಕಲಬುರಗಿ ಭಾಗದ ವಿವಿಧ ಆಸ್ಪತ್ರೆಗೆ ಚಿಕಿತ್ಸೆಗೆ ಭೇಟಿ ನೀಡಿದಾಗ ಬಹುತೇಕ ಆಸ್ಪತ್ರೆಯವರು ಈ ಶಸ್ತ್ರ ಚಿಕಿತ್ಸೆ ಇಲ್ಲಿ ಆಗುವುದಿಲ್ಲಾ ಹೈದರಾಬಾದ್, ಬೆಂಗಳೂರು, ಸೋಲಾಪೂರಕ್ಕೆ ಶಿಫಾರಸು ಮಾಡುತ್ತಿದ್ದರು ,ನಂತರ ಈ ರೋಗಿಯ. ಕುಟುಂಬಸ್ಥರು ಮನ್ನೂರ ಆಸ್ಪತ್ರೆಗೆ ಭೇಟಿನೀಡಿ ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ತಜ್ಞ ಅರುಣಕುಮಾರ ಬರಾಡ ಅವರಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿದಾಗ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆ ಒಂದೆಡೆಯಾದರೆ, ಶ್ವಾಸಕೋಶದ ಕ್ಷಯದಿಂದ ಬಳಲುತ್ತಿದ್ದ, ಜೊತೆಗೆ ಕಿಡ್ನಿಯಿಂದ ಹೃದಯಕ್ಕೆ ಹೋಗುವ ಮುಖ್ಯ ರಕ್ತನಾಳಕ್ಕೆ ಕ್ಯಾನ್ಸ್ರ್ ಗಡ್ಡೆ ಹರಡಿರುವುದು ಕಂಡುಬಂತು, ಅಡ್ವಾನ್ಸ ಕಿಡ್ನಿ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಅಪರೂಪದ ಹಾಗೂ ಸವಾಲಿನ ಶಸ್ತ್ರ ಚಿಕಿತ್ಸೆ ಇದಾಗಿತ್ತು ಎಂದು ತಿಳಿಸಿದ್ದರು.
ಮನ್ನೂರ ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ತಜ್ಞ ಅರುಣಕುಮಾರ ಬರಾಡ ಮಾತನಾಡಿ ಈ ಶಸ್ತ್ರ ಚಿಕಿತ್ಸೆ ವೇಳೆ ಹೃದಯಕ್ಕೆ ಹೋಗುವ ಮುಖ್ಯ ರಕ್ತನಾಳ ಇರುವುದರಿಂದ 1 ಸೆಕೆಂಡ್ ನಲ್ಲಿಕೂಡ ಏರು ಪೇರು ಆದರೆ ಆ ರೋಗಿಯು (ತ್ರೋಂಬೊ ಎಂಬೋಲಿಜಮ್ )ಹೃಧಯಘಾತದಿಂದ ನಿಧನ ಕೂಡ ಹೊಂದುವ 95 %. ಸಂಭವ ಕೂಡ ಇತ್ತು , ಹೃದಯಕ್ಕೆ ಹೋಗುವ ರಕ್ತನಾಳದಿಂದ ಕಿಡ್ನಿಗೆ ,ಹಾಗೂ ಹೃದಯಕ್ಕೆ ಹೋಗುವ ಮುಖ್ಯ ರಕ್ತನಾಳದಲ್ಲಿರುವ ಗಡ್ಡೆ ತೆಗೆದು ಹಾಕಲಾಯಿತ್ತು, ಕಿಡ್ನಿ ಕ್ಯಾನ್ಸರ್ ಗೆ ಶಸ್ತ್ರಚಿಕಿತ್ಸೆ ಕೈಗೊಳ್ಳುವ ವೇಳೆ ಹೃದಯಕ್ಕೆ ನಿರಂತರ ರಕ್ತ ಪರಿಚಲನೆಯ ಹೊಣೆಗಾರಿಕೆ ನಿಭಾಯಿಸಬೇಕಿತ್ತು. ಮೇಲಾಗಿ ರಕ್ತದೊತ್ತಡದ ಮೇಲೆ ತೀವ್ರ ನಿಗಾ ಇಡುತ್ತಲೇ ಸತತ ಎಂಟು ತಾಸುಗಳ ಶಸ್ತ್ರಚಿಕಿತ್ಸೆ ಕೈಗೊಂಡು ಯಶಸ್ಸು ಸಾಧಿಸಲಾಗಿದೆ , ಶಸ್ತ್ರ ಚಿಕಿತ್ಸೆ ಬಳಿಕ ಆಸ್ಪತ್ರೆಯಲ್ಲಿ ನೀಡಲಾದ ಚಿಕಿತ್ಸೆಯಿಂದಾಗಿ ರೋಗಿಯು ನಾಲ್ಕೆ ದೀನದಲ್ಲಿ ಗುಣಮುಖ ಹೊಂದಿದ್ದು ಅಚ್ಚರಿಯ ಸಂಗತಿಯಾಗಿದೆ ಎಂದು ತಿಳಿಸಿದ್ದರು.
ಪ್ರಸ್ತುತ ಬಹುತೇಕ ರೋಗಿಗಳು ಕ್ಯಾನ್ಸರ್ ರೋಗಿಗಳು 60 ವರ್ಷದ ಸಮಿಪದ ವಯಸ್ಕರು ಕ್ಯಾನ್ಸರ್ ರೋಗ ಲಕ್ಷಣ ಇರುವ ಸಮಯದಲ್ಲಿ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದ್ದರೆ ನಮ್ಮದು ವಯಸ್ಸಾಗಿದೆ ನಮ್ಮಗೆ ಶಸ್ತ್ರ ಚಿಕಿತ್ಸೆ ಮಾಡಿದರು ನಮ್ಮ ದೇಹಕ್ಕೆ ಸ್ಪಂದಿಸುವುದಿಲ್ಲಾ ಎಂದು ಮಾತ್ರೆಯ ಮೇಲೆ ಚಿಕಿತ್ಸೆ ಪಡೆದುಕೊಳ್ಳುತ್ತಾ ನಿರ್ಲಕ್ಷ್ಯ ಮಾಡುತ್ತಾರೆ ಆದರೆ ಈ ರೋಗಿಯ ಕುಟುಂಬ 65 ವಯಸ್ಸಾಗಿದ್ದು ಈ ರೋಗಿಯ ಕುಟುಂಬಕ್ಕೆ ವೈದ್ಯರ ತಂಡ ಸ್ವ ವಿಸ್ತಾರವಾಗಿ ತಿಳಿಸಿದಾಗ ಶಸ್ತ್ರ ಚಿಕಿತ್ಸೆಗೆ ಓಪ್ಪಿಗೆ ಸೂಚಿಸಿದ್ದಾರೆ , ಒಂದು ವೇಳೆ ಶಸ್ತ್ರ ಚಿಕಿತ್ಸೆ ಮಾಡಸದೆ ಹೋದರೆ ಹೃದಯಕ್ಕೆ ಹೋಗುವ ಮುಖ್ಯ ರಕ್ತನಾಳ ಇರುವುದರಿಂದ 2 ಅಥವ 3 ತಿಂಗಳಲ್ಲಿ ನಿಧನ ಹೊಂದುವ ಸಂಭವ ಕೂಡ ಇತ್ತು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖ್ಯ ಅರಿವಳಿಕೆ ತಜ್ಞರಾದ ಡಾ.ಮುಝಮ್ಮಿಲ್ ಅಹಮದ್ ಹಾಗೂ ಅರಿವಳಿಕೆ ತಜ್ಞ ಡಾ. ಸತೀಶ್ ಶರಣಪ್ಪ, ಡಾ. ರಿಜ್ವಾನ, ಮಹ್ಮದ ಇಸ್ಮಾಯಿಲ್, ವಿಕ್ಕಿ ಪವಾರ, ಮುಬಿನ ಅಹ್ಮದ,ಶೋಭಾ ಮಠಪತಿ, ಜಾಫರ್ ಮೋಮಿನ್, ಅಮೀನ ಜೀಬರನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
(ಸುದಿರ್ಘ ಹೊಟ್ಟೆ ನೊವು ಇರುವ ರೊಗಿಗಳು ಆಸಿಡಿಟಿ ಎಂದು ನಿರ್ಲಕ್ಷ ಮಾಡಿದೆ ತಜ್ಣ ವೈದ್ಯರಿಂಗೆ ಸಂರ್ಪಕಿಸಬೇಕು ಹಾಗೂ ಬಾಯಿಯಿಂದ ಹಾಗೂ ಮುಗಿನಿಂದ, ಮೂತ್ರದ ಮೂಲಕ , ಮಲದ ಮೂಲಕ ರಕ್ತ ಬರುತ್ತಿದ್ದರೆ ನಿರ್ಲಕ್ಷ ಮಾಡದೆ ನಿಮ್ಮ ಸಮಿಪದ ವೈದ್ಯರಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು.
- ಡಾ.ಅರುಣಕುಮಾರ್ ಬರಾಡ್,ಕ್ಯಾನ್ಸರ್ ತಜ್ಞರು )
(ಮನ್ನೂರ್ ಆಸ್ಪತ್ರೆಯ ತಜ್ಞ ವೈದ್ಯರು ಎಂಥದ್ದೇ ಸವಾಲು ಎದುರಾದರೂ ಸರಿ; ಅದನ್ನು ಸ್ವೀಕರಿಸುವ ಮೂಲಕ ರೋಗಿಗಳ ಅಮೂಲ್ಯ ಪ್ರಾಣ ಕಾಪಾಡುತ್ತಾರೆ ಎಂಬುದಕ್ಕೆ ಈ ಪ್ರಕರಣವೊಂದು ಪ್ರಖರ ಸಾಕ್ಷಿ. ಯಾರೆ ಆದರೂ ನಿಮ್ಮಗೆ ರೋಗದ ಲಕ್ಷಣ ಕಂಡು ಬಂದರೆ ನಿರ್ಲಕ್ಷ ಮಾಡದೆ ಸಮೀಪದ ವೈದ್ಯರಿಗೆ ಭೇಟಿ ನೀಡಿ ತಪಾಸಣೆ ಮಾಡಿಕೊಳ್ಳಬೇಕು.)
ಡಾ.ಫಾರೂಕ್ ಮಣೂರ್,ವ್ಯವಸ್ಥಾಪಕ ನಿರ್ದೇಶಕರುಮಣೂರ್ ಆಸ್ಪತ್ರೆ