ಮಾಪಣ್ಣ ಹದನೂರು ಅವರ ಭಾವಪೂರ್ಣ ಶ್ರದ್ಧಾಂಜಲಿ
ಮಾಪಣ್ಣ ಹದನೂರು ಅವರ ಭಾವಪೂರ್ಣ ಶ್ರದ್ಧಾಂಜಲಿ
ಕಲಬುರಗಿ: ನಗರದ ಬಾಬು ಜಗಜೀವನ್ ರಾವ್ ಪುತ್ತಳಿ ಬಳಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟ ವತಿಯಿಂದ ಮಾದಿಗ ಸಮಾಜದ ಹಿರಿಯರು ಮಾದಿಗ ದಂಡೂರು ಹೋರಾಟ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಾಪಣ್ಣ ಹದನೂರು ಅವರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಮಾಜದ ಮುಖಂಡರಾದ ಲಿಂಗರಾಜ ತಾರಫೈಲ್ ಅವರು ಮಾತನಾಡಿ ಮಾಪಣ್ಣ ಹದನೂರು ರವರು ಸಮಾಜಕ್ಕೆ ಏನಾದರೂ ಅನ್ಯಾಯವಾದಾಗ ಸಮಾಜದ ಏಳಿಗೆಗಾಗಿ ಹಗಲು ರಾತ್ರಿ ಎನ್ನದೆ ಸಮಾಜಕ್ಕಾಗಿ ಹೋರಾಟ ಮಾಡಿರತಕ್ಕಂತ ವ್ಯಕ್ತಿ ಇವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಅವರ ಆಶಯದಂತೆ ಸಮಾಜವು ಬರುವಂತ ದಿನಗಳಲ್ಲಿ ಸಮಾಜ ಒಗ್ಗಟ್ಟದೊಂದಿಗೆ ಸಮಾಜದ ಹೇಳಿಕೆಗಾಗಿ ಬದುಕೋಣ ಹಾಗೂ ಅವರ ಕುಟುಂಬ ವರ್ಗದವರಿಗೆ ಆ ದೇವರು ದುಃಖ ಸಹಿಸುವ ನೀಡಲಿ ಮತ್ತು ಅವರ ಅಂತಿಮ ದರ್ಶನವು ಬಾಪು ನಗರದ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಅವರ ಅಂತ್ಯಕ್ರಿಯೆವು ಅವರ ಸ್ವಂತ ಜಮೀನಾದ ನಂದೂರ್ ಹೊಲದಲ್ಲಿ ನೆರವೇರಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಮಲ್ಲಿಕಾರ್ಜುನ ಜೀನಕೇರಿ, ಸುಭಾಷ್ ಚಂದ್ರ ರತ್ನಡಗಿ, ರಾಜು ಕಟ್ಟಿಮನಿ, ಬಂಡೇಶ ರತ್ನಡಗಿ, ಮಲ್ಲು, ಮಲ್ಲಪ್ಪ ಚಿಗನೂರ್ ದೊಡ್ಮನಿ, ರವಿಚಂದ್ರ ಕ್ರಾಂತಿಕರ್, ಮಂಜುನಾಥ್ ನಾಲವಾರಕರ್, ರುಕ್ಕಪ್ಪ ಕಾಂಬಳೆ, ದಿಗಂಬರ್ ತ್ರಿಮೂರ್ತಿ, ಸೂರಜ್ ಬೆಳಗುಂದಿ, ಜಯರಾಜ್, ರವಿ ಸಿಂಗೆ, ವಿಜಯಕುಮಾರ ಅಡಿಕೆ, ಸಚಿನ್ ಕಟ್ಟಿಮನಿ, ಪ್ರಕಾಶ್ ಗುಲಾಬಡಿ, ಮಲ್ಲಿಕಾರ್ಜುನ್ ಸರಡಗಿ ಸೇರಿದಂತೆ ಮಾದಿಗ ಸಮಾಜದ ಮುಖಂಡರು ಇದ್ದರು.