ತಾಲೂಕ ಆಡಳಿತ ವತಿಯಿಂದ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿತು
ತಾಲೂಕ ಆಡಳಿತ ವತಿಯಿಂದ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿತು
ಸವಿತಾ ಮಹರ್ಷಿಗಳ ಇತಿಹಾಸ 2 ಸಾವಿರ ವರ್ಷಗಳ ಪುರಾತನವಾಗಿರುವುದು ಉಲ್ಲೇಖ : ಶಿಕ್ಷಕಿ ನಾಗರತ್ನ
ಚಿಂಚೋಳಿ : ಸವಿತಾ ಸಮಾಜದ ಮೂಲ ಪುರುಷ ಸವಿತಾ ಮಹರ್ಷಿ ಆಗಿದ್ದು, ಮಹರ್ಷಿ ಅವರು ಶಿವನ ಬಲಗಣ್ಣಿ ನಿಂದ ಜನ್ಮ ತಾಳಿದವರು.ಸವಿತಾ ಮಹರ್ಷಿಗಳ ಇತಿಹಾಸ 2 ಸಾವಿರ ವರ್ಷಗಳ ಪುರಾತನವಾದದ್ದು ಎಂದು ಉಲ್ಲೇಖಸಲಾಗಿದೆ. ವೇದಗಳಕಾಲದಲ್ಲಿ ಸಂಸ್ಕಾರ ನೀಡಿತ್ತಾ ಬಂದಿರುವ ವಾಲ್ಮೀಕಿ, ನಾರದ, ಮಾರ್ಕಂಡಯ್ಯ, ವಿಶ್ವ ಮಿತ್ರ, ವಶಿಷ್ಠ ಅವರ ಸಾಲಿನಲ್ಲಿ ಸವಿತಾ ಮಹರ್ಷಿ ಒಬ್ಬರಾಗಿದ್ದರು ಎಂದು ನಾಗಇದ್ಲಾಯಿ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕಿ ನಾಗರತ್ನ. ಎಂ. ಚಿಮ್ಮನಚೋಡ್ ಅವರು ಹೇಳಿದರು.
ಆಡಳಿತ ಪ್ರಜಾ ಸೌಧದ ಸಂಭಾಗಣದಲ್ಲಿ ತಾಲೂಕ ಆಡಳಿತ ವತಿಯಿಂದ ಜರುಗಿದ ಸವಿತಾ ಮಹರ್ಷಿ ಅವರ ಜಯಂತ್ಯೋತ್ಸವ ಕಾರ್ಯಕ್ರಮದ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಸೂರ್ಯನ ಮತ್ತು ನಾರಾಯಣ ಉಪಾಸಕರಿಗೆ ಸವಿತಾ ಜನಾಂಗವೆಂದು ಕರೆಯಲಾಗುತ್ತದೆ. ಇವರು ಸಂಗೀತ, ಗಾಯನ, ಧನ್ವಂತರಿ ಮತ್ತು ಆಯಷ್ಯ ಕರ್ಮ ಕಾಯಕದ ಪ್ರತೀಕವಾಗಿದರು. ಸವಿತಾ ಮಹರ್ಷಿಗಳು ಗುರುಕುಲದಲ್ಲಿ ಶಸ್ತ್ರ ಚಿಕಿತ್ಸೆ ವಿದ್ಯೆ ಹೇಳಿಕೊಡುತ್ತಿದ್ದರು. ಇದರ ಜೊತೆಗೆ ರಿಕ ಕುಲ ವೃತ್ತಿ ಮಾಡುತ್ತಿದರು. ಇಂತಹ ಮಹಾಪುರುಷ ನ ಸಮಾಜದಲ್ಲಿ ಹುಟ್ಟಿರುವುದೇ ಸಮಾಜ ಬಂಧುಗಳ ಪುಣ್ಯ. ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯ ಮತ್ತು ಶೈಕ್ಷಣಿಕೆವಾಗಿ ಹಿಂದುಳಿದಿದ್ದರು ಸಮಾಜ ತನದೇ ಆದ ಪರಂಪರೆ ಹೊಂದಿದೆ. ಆದರೆ ಎಲ್ಲರಲೂ ಸಮಾನತೆ ಇದೆ. ಆದರೆ ನೋಡುವ ದೃಷ್ಠಿಕೋನ ಬೇರೆಯಾಗಿದ್ದು, ಡಾ. ಬಿ. ಆರ್. ಅಂಬೇಡ್ಕರ್ ಅವರು ಉಲ್ಲೇಖಸಿರುವಂತೆ ಶಿಕ್ಷಣ ಹುಲಿಯ ಹಾಲಿದ್ದಂತೆ ಇದನ್ನು ಸವಿದವರು ಘರ್ಜಿಸಲೇಬೇಕು. ಹೀಗಾಗಿ ಸಮಾಜ ಬಂಧುಗಳು ಶಿಕ್ಷಣವಂತರಾದರೆ ಸಂಘಟನೆ ಬಲಬರಲಿದೆ. ಸಂಘಟನೆಗೆ ಬಲಬಂದರೆ ಹೋರಾಟಕ್ಕೆ ಬಲಬರುತ್ತದೆ. ಈ ಹಿನ್ನಲೆಯಲ್ಲಿ ಮಾಡುವ ಕಾಯಕದಲ್ಲಿ ಪ್ರಾಮಾಣಿಕತೆ ಮತ್ತು ಶ್ರದೆ, ಭಕ್ತಿ ಇಟ್ಟುಕೊಂಡು ಸಮಾಜ ಬಂಧುಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಪಂಚ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ಬಸವರಾಜ ಮಲಿ ಮಾತನಾಡಿ, ಸವಿತಾ ಮಹರ್ಷಿಯವರು ಎಲ್ಲಾ ಜಾತಿ ಜನಾಂಗಗಳಿಗೆ ಮಾರ್ದರ್ಶಿಗಳಾಗಿದ್ದವರು. ಕಾಯಕದಲ್ಲಿ ಕೈಲಾಸ ಕಂಡವರು. ಎಲ್ಲರೂ ಅವರ ಮಾರ್ಗದರ್ಶನಗಳು ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ, ಸವಿತಾ ಸಮಾಜದ ಬಂಧುಗಳು ಶಾಂತ ಸ್ವಭಾವದವರಾಗಿದ್ದು, ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಇದಕ್ಕೂ ಮುಂಚಿತವಾಗಿ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಪ್ರಜಾಸೌಧವರೆಗೆ ಡೋಳು ವಾದ್ಯಗಳೊಂದಿಗೆ ಸವಿತಾ ಮಹರ್ಷಿಗಳ ಭಾವಚಿತ್ರ ಮೇರೆವಣಿಗೆ ಜರುಗಿತು.
ಈ ಸಂದರ್ಭದಲ್ಲಿ ಗ್ರೇಡ್ - 2 ತಹಸೀಲ್ದಾರ್ ವೆಂಕಟೇಶ ದುಗ್ಗನ್, ಪುರಸಭೆ ಮುಖ್ಯ ಅಧಿಕಾರಿ ಕಾಶಿನಾಥ ಧನಿ, ಪಿಡಿಓ ರಾಮಕೃಷ್ಣ ಕೊರಡಂಪಳ್ಳಿ, ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ಸುಧಾಕರ ಕೊಳ್ಳೂರ, ಅಧ್ಯಕ್ಷ ಆನಂದ ಚೌದರಿ, ರೇವಣಸಿದ್ಧ ಮೋಘ, ಪಾಂಡುರಂಗ ಚೌದರಿ, ಜಗದೀಶ್ವರ ದುದ್ಯಾಲ್, ಸಂಗಮೇಶ ನಿಂಗದಳ್ಳಿ, ನಾಗೇಶ ಚಿಂತಪಳ್ಳಿಕರ್, ಸಂಗಮೇಶ ಚಿಮ್ಮನಚೋಡ, ಸಿದ್ದು ಹೊಳಗೇರಿ, ಸುಧಾಕರ ಕೊಳ್ಳೂರ್, ಜಗನ್ನಾಥ ಹಳ್ಳಿ, ವೆಂಕಟೇಶ ಕಲಬುರಗಿ ಸೇರಿ ಸಮಾಜದ ಬಂಧುಗಳು, ಮಹಿಳೆಯರು ಉಸ್ಥಿತರಿದ್ದರು.
•ಜಯಂತಿ ಕಾರ್ಯಕ್ರಮಕ್ಕೆ ಅಧಿಕಾರಿಗಳ ಗೈರು:
ಸರಕಾರದ ಆದೇಶದಂತೆ ತಾಲೂಕ ಆಡಳಿತ ವತಿಯಿಂದ ಸವಿತಾ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮ ನಡೆಸಿತು. ಆದರೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮತ್ತು ಗ್ರೇಡ್ - 2ತಹಸೀಲ್ದಾರ್, ಪುರಸಭೆ ಅಧಿಕಾರಿಗಳು ಬಿಟ್ಟು ತಾಲೂಕ ಮಟ್ಟದ ಬೇರೆ ಇಲಾಖೆಯ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣಿತ್ತು.
• ಜಯಂತಿ ಕಾರ್ಯಕ್ರಮದ ಕಡೆಗೆ ಮುಖ ಮಾಡಿ ನೋಡದ ಶಾಸಕ ಡಾ. ಅವಿನಾಶ ಜಾಧವ್ :
ತಾಲೂಕ ಆಡಳಿತ ಪ್ರಜಾಸೌಧದಲ್ಲಿ ನಡೆಯುತ್ತಿದ ಸವಿತಾ ಮಹರ್ಷಿ ಅವರ ಜಯಂತಿಗೆ ಮಹತ್ವ ನೀಡಿ ಆಗಮಿಸದೇ ಪಟ್ಟಣದ ಬಿಜೆಪಿ ಕಾರ್ಯಕರ್ತರೊಬ್ಬರ ಖಾಸಗಿ ಅಂಗಡಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮಹತ್ವ ನೀಡಿ, ಭಾಗವಹಿಸಿ, ಪ್ರಯಾಣಿಸಿದರು.
