ಪ್ರಶಸ್ತಿಗಳು - ಮಾನ -ದಂಡ.
ಪ್ರಶಸ್ತಿಗಳು - ಮಾನ -ದಂಡ.
ಇಂದಿನ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಗಮನಿಸಿದರೆ ಪ್ರಶಸ್ತಿಗಳು ನೀಡುವವರು ತೆಗೆದುಕೊಳ್ಳುವವರು ಯಾವ ಮಾನದಂಡಕ್ಕೂ ಒಳಗಾಗಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಇಂದು ಸಮಾಜದಲ್ಲಿ ನಡೆಯುತ್ತಿರುವ ಇಂದಿನ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಗಮನಿಸಿದಾಗ ಯಾವುದೇ ಮಾನದಂಡವಿಲ್ಲದೆ ನೀಡುತ್ತಿರುವ ಪ್ರಶಸ್ತಿಗಳು ಎಂದು ಜನಜನಿತವಾಗಿವೆ ಸಮಾಜದಲ್ಲಿ ಸ್ಥಾಪಿತಗೊಂಡಿರುವ ಅನೇಕ ಪ್ರತಿಷ್ಠಿತ ಸಂಘ ಸಂಸ್ಥೆಗಳು ಮಠ ಮಂದಿರಗಳು ಸರ್ಕಾರ ಅರೇಸರ್ಕಾರಿ ಸಂಸ್ಥೆಗಳು ಇಂದು ನೀಡುತ್ತಿರುವ ಪ್ರಶಸ್ತಿಗಳು ನೋಡಿದರೆ ಅವುಗಳಿಗೆ ಯಾವುದೇ ಮಾನದಂಡವಿಲ್ಲ ಮಾನದಂಡವಿಲ್ಲದ ಮಾನಗೇಡಿ ಪ್ರಶಸ್ತಿಗಳು ಎನ್ನುವಂತಾಗಿದೆ ಇಂಥ ಪ್ರಶಸ್ತಿಗಳನ್ನು ಪಡೆಯುವುದರಿಂದ ಯಾರೂ ದೊಡ್ಡವರಾಗುವದಿಲ್ಲ ಮತ್ತು ಈ ಪ್ರಶಸ್ತಿಗಳನ್ನು ನೀಡುವುದರಿಂದ ಯಾವ ಸಂಸ್ಥೆಗಳು ಶ್ರೇಷ್ಠವೆಂದು ಕರೆಯಿಸಿಕೊಳ್ಳಲು ಸಾಧ್ಯವಿಲ್ಲ ಇದೊಂದು ರೀತಿಯಲ್ಲಿ ಬೇಕಾದವರನ್ನು ತಮ್ಮವರನ್ನು ಒಲಿಸಿ ಓ ಲೈಸಿಕೊಳ್ಳಲು ಅವರಿಗೆ ಖುಷಿ ಪಡಿಸಲು ಮಾಡುವ ಅಚ್ಚುಕಟ್ಟಾದ ಒಂದು ವ್ಯವಸ್ಥೆಯಾಗಿದೆ ಮತ್ತು ಕೆಲವರು ಇದನ್ನು ವ್ಯವಹಾರ ಅಥವಾ ದಂಧೆಯನ್ನಾಗಿಸಿಕೊಂಡಿದ್ದಾರೆ ಸದ್ದು ಗದ್ದಲವಿಲ್ಲದೆ ಕದ್ದು ಅವರಿಂದ ಹಣ ಪಡೆದು ಅದೇ ಹಣದಿಂದ ಎಲ್ಲ ಖರ್ಚು ವೆಚ್ಚಗಳನ್ನು ಮಾಡಿ ಸಭೆ ಸಮಾರಂಭವನ್ನು ಏರ್ಪಡಿಸಿ ಅವರ ಸಂಬಂಧಿಕರನ್ನು ಬೇಕಾದವರನ್ನು ಕರೆಯಿಸಿ ಸಭೆ ಸೇರಿಸಿ ಪ್ರಶಸ್ತಿ ಪ್ರದಾ ನ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಒಂದಿಷ್ಟು ಶಾಲುಗಳು ಪ್ರಶಸ್ತಿ ಪತ್ರ ಸ್ಮರಣೆಕೆ ಅಥವಾ ನೆನಪಿನ ಕಾಣಿಕೆಗಳು ಹಾಗೂ ಒಂದು ಊಟ ಮತ್ತು ಒಂದು ಸಭಾಂಗಣವನ್ನು ಬಾಡಿಗೆಗೆ ತೆಗೆದುಕೊಂಡು ಅಚ್ಚುಕಟ್ಟಾಗಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿ ಕೆಲವು ಅತಿಥಿಗಳಿಗೆ ಮತ್ತು ಮಠದ ಸ್ವಾಮಿಗಳಿಗೆ ಕರೆಯಿಸಿ ಪತ್ರಕರ್ತರಿಗೆ ಬಿಟ್ಟಿ ಊಟ ಹಾಕಿ ಅವರಿಂದ ಎಗ್ಗಳವಾಗಿ ಅಗ್ಗದ ಪ್ರಚಾರವನ್ನು ಪಡೆದು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಇದು ಸಮಾಜದಲ್ಲಿ ನಿರಂತರವಾಗಿ ಇತ್ತೀಚಿನ ದಿನಗಳಲ್ಲಿ ನಡೆದುಕೊಂಡು ಬರುತ್ತಿದೆ ಇನ್ನು ಕೆಲವರು ತಮ್ಮದೇ ಆದ ಗುಂಪು ಕಟ್ಟಿಕೊಂಡು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿ ತಮಗೆ ಬೇಕಾದವರಿಗೆ ಅಭಿನಂದನ ಗ್ರಂಥವನ್ನು ಅರ್ಪಿಸಿ ಎಲ್ಲರಿಗೂ ಊಟ ಹಾಕಿಸಿ ಅತ್ಯುತ್ತಮವಾದ ಕಾರ್ಯಕ್ರಮವನ್ನು ಮಾಡಿ ಕೆಲವು ಬಿಟ್ಟಿ ಸ್ವಾಮಿಗಳನ್ನು ಕರೆಯಿಸಿ ಅವರಿಗೆ ಯಥೇಚ್ಛವಾಗಿ ಕಾಣಿಕೆ ಗೌರವಗಳನ್ನು ನೀಡುವುದರ ಮೂಲಕ ತಮ್ಮ ಘನತೆ ಗೌರವ ಹೆಚ್ಚಾಗುತ್ತದೆ ಎಂದು ಭಾವಿಸಿಕೊಂಡಿದ್ದಾರೆ ಇಂದು ಯಾರೇ ಆಗಲಿ ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ ಎಂದರೆ ಎಷ್ಟು ಹಣ ಖರ್ಚು ಮಾಡಿದಿರಿ ಎಷ್ಟು ಕೊಟ್ಟಿರಿ ಎಂದು ಕೇಳುವಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ರಾಜ್ಯಮಟ್ಟದ ಸರ್ಕಾರದ ಪ್ರಶಸ್ತಿಗಳು ಬಂದರೆ ಯಾವ ಶಾಸಕರು ಸಚಿವರು ಪ್ರಭಾವ ಬೀರಿದರು ಎನ್ನುವಂತಾಗಿದೆ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿದರೆ ಎಷ್ಟು ಹಣ ಭ ರಿಸಿದಿರಿ ಎಂದು ಕೇಳುವಂತಾಗಿದೆ ಸಮಾಜ ಎಷ್ಟು ಕೆಳಮಟ್ಟಕ್ಕೆ ಹಾಗೂ ಕೀಳು ಮಟ್ಟಕ್ಕೆ ಇಳಿದು ಹೋಗಿದೆ ಎಂದರೆ ಅದನ್ನು ತಿದ್ದಿ ತೀಡಿ ಸುಧಾರಿಸುವುದು ಸಾಧ್ಯವೇ ಇಲ್ಲ ಎನ್ನುವಂತಾಗಿದೆ ಇದೆಲ್ಲವನ್ನು ತಿಳಿದುಕೊಂಡು ನಾವು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ ನಮ್ಮ ಸುತ್ತಮುತ್ತಲು ನಡೆಯುವ ತಪ್ಪುಗಳನ್ನು ನೋಡಿ ತಿದ್ದ ದಿದ್ದರೆ ಮತ್ತು ಸತ್ಯ ನುಡಿಯದಿದ್ದರೆ ಅದನ್ನೇ ಜನ ಸತ್ಯವೆಂದು ಭಾವಿಸುವ ಸಾಧ್ಯತೆಗಳು ಉಂಟು ಇವತ್ತಿನ ಪ್ರಶಸ್ತಿಗಳು ಎಷ್ಟು ಕೆಳಮಟ್ಟಕ್ಕೆ ಹೋಗಿವೆ ಎಂದರೆ ತಮ್ಮ ಸತ್ತ ತಂದೆ ತಾಯಿ ಹೆಂಡತಿ ಮಕ್ಕಳು ಮೊಮ್ಮಕ್ಕಳು ಲಿಂಗೈಕ್ಯ ಗುರುಗಳ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕೆಟ್ಟ ಪರಂಪರೆ ಆರಂಭವಾಗಿದೆ ಕೌಟುಂಬಿಕವಾಗಿ ಸೀಮಿತವಾಗಿದ್ದ ಈ ಕಾರ್ಯಕ್ರಮಗಳು ಸಾರ್ವತ್ರಿಕ ಗೊಳಿಸುವುದರ ಮೂಲಕ ಲೋಕೋತ್ತರ ಕಾರ್ಯಕ್ರಮಗಳನ್ನಾಗಿ ಬಿಂಬಿಸುವ ಪ್ರಯತ್ನ ನಡೆದಿದೆ ಇಂಥ ಕೆಟ್ಟ ವಾತಾವರಣ ನಿರ್ಮಾಣವಾಗುತ್ತಿದೆ ಇದು ಆರೋಗ್ಯಕರವಾದ ಬೆಳವಣಿಗೆಯಲ್ಲ ಪ್ರಶಸ್ತಿಗಳು ಅವ್ವ ಅಪ್ಪ ಅಮ್ಮ ಅಕ್ಕ ತಂಗಿ ಮಾವ ಅಳಿಯ ಮಗ ಹೆತ್ತವರ ಸ್ಮರಣೆಯಲ್ಲಿ ಪ್ರಶಸ್ತಿಗಳು ನೀಡುವುದು ಪಡೆಯುವುದು ಅತ್ಯಂತ ನಾಚಿಕೆಯಾಗಿದೆ ಈ ಕೆಲಸ ಈಗ ನಿರಾತಂಕವಾಗಿ ನಡೆದಿದೆ ಹೀಗೆ ನಡೆಯುತ್ತಿರುವುದನ್ನು ನೋಡಿ ನಾವು ಎಂಥ ಕೊಳಕು ಸಮಾಜದಲ್ಲಿ ಬದುಕಿದ್ದೇವೆ ಎಂದು ನೋವಾಗುತ್ತದೆ ಪ್ರಶಸ್ತಿಗಳು ರಾಷ್ಟ್ರ ರಾಜ್ಯ ನಾಯಕರ ಹೆಸರಿನಲ್ಲಿ ಸ್ಥಾಪಿತಗೊಳ್ಳಬೇಕು ಶ್ರೇಷ್ಠ ಸಾಹಿತಿ ಕಲಾವಿದರ ತ್ಯಾಗಿ ಯೋಗಿ ಸಮಾಜ ಸುಧಾರಕ ಪ್ರಬೋಧಕ ಸಾಮಾಜಿಕ ಪರಿವರ್ತನೆ ಹರಿಕಾರರ ಶರಣ ಸಂತ ಮಹಾತ್ಮರ ಹೆಸರಿನಲ್ಲಿ ಪ್ರಶಸ್ತಿಗಳು ಸ್ಥಾಪನೆಯಾಗಬೇಕು ಅಂತಹ ಪ್ರಶಸ್ತಿಗಳನ್ನು ನೀಡಬೇಕು ಮತ್ತು ಪಡೆಯಬೇಕು ಅಂದರೆ ಸಾಮಾಜಿಕ ಘನತೆ ಗೌರವ ಹೆಚ್ಚಾಗುತ್ತದೆ ಅದನ್ನು ಬಿಟ್ಟು ನಾಯಿ ಕೊಡೆಗಳಂತ ನಕಲಿ ಸಂಸ್ಥೆಗಳು ಹುಟ್ಟಿಕೊಂಡು ಬೇಕಾಬಿಟ್ಟಿ ಪ್ರಶಸ್ತಿಗಳನ್ನು ನೀಡುವ ಪ್ರಕ್ರಿಯೆ ಒಂದು ವ್ಯವಹಾರವಾಗಿದೆ ಕೆಲವೊಂದು ಸಂಘ ಸಂಸ್ಥೆಗಳು ಹಣ ಪಡೆದು ಪ್ರಶಸ್ತಿ ನೀಡುವ ಕಾಯಕವನ್ನು ಮಾಡಿಕೊಂಡಿವೆ ಇವುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಥಾಪಿತಗೊಂಡಿವೆ. ಇನ್ನು ನಗರ ಪ್ರದೇಶದಲ್ಲಿ ಬಹಳಷ್ಟು ಸಂಘ-ಸಂಸ್ಥೆಗಳು ಹುಟ್ಟಿಕೊಂಡಿವೆ ಕನ್ನಡಪರ ಜನಪರ ಸಂಘಟನೆಗಳು ಹುಟ್ಟಿಕೊಂಡು ಪ್ರಶಸ್ತಿಯನ್ನು ನೀಡುವುದರ ಮೂಲಕ ಹಣ ವಸೂಲಿ ಮಾಡುತ್ತಿವೆ ಈ ಪ್ರಶಸ್ತಿಗಳು ಧಾರಾಳವಾಗಿ ಮಾರಾಟವಾಗುತ್ತಿವೆ ಈ ಸಮಾಜದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಳ್ಳುವವರು ನೀಡುವವರು ಒಂದು ರೀತಿಯ ಮಾನದಂಡಗಳನ್ನು ರೂಪಿಸಿಕೊಳ್ಳಬೇಕು ಯಾವುದೇ ಮಾನದಂಡವಿಲ್ಲದೆ ನೀಡುವ ಪ್ರಶಸ್ತಿಗೆ ಅರ್ಥವಿಲ್ಲ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿನಮ್ರ ಸಾಧಕನಿಗೆ ಗುರುತಿಸಿ ಗೌರವಿಸಿದರೆ ಆಗುವ ತೃಪ್ತಿಯೇ ಬೇರೆ ಆದರೆ ಮನಸ್ಸಿಗೆ ಬಂದವರಿಗೆ ಬೇಕಾದವರಿಗೆ ಪ್ರಶಸ್ತಿಗಳನ್ನು ನೀಡಿ ಅವುಗಳ ಮೌಲ್ಯ ಹಾಳು ಮಾಡಿದರೆ ನೋಡಿದರೂ ಅಥವಾ ವೀಕ್ಷಕರು ಎಂಥ ನನ್ನ ಕಳ್ಳ ನನ್ನ ಮಗನಿಗೆ ಪ್ರಶಸ್ತಿ ಕೊಟ್ಟರಲ್ಲ ಎಂದು ನಿಟ್ಟುಸಿರು ಬಿಡುವಂತಾಗಿದೆ ಇದು ಸರಿಯಾದ ಬೆಳವಣಿಗೆ ಅಲ್ಲ ಪ್ರಶಸ್ತಿಗಳಿಗೆ ಮಾನದಂಡ ವಿಧಿಸಬೇಕೆಂದು ಈಗ ನೀಡುವ ಪ್ರಶಸ್ತಿಗಳಿಗೆ ಮಾನದಂಡವಿಲ್ಲವೆಂದು ಉಚ್ಚ ನ್ಯಾಯಾಲಯದಲ್ಲಿ ದಾವೇ ಸಲ್ಲಿಸಿದರೂ ಮಾನ್ಯ ನ್ಯಾಯಾಲಯ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾನಗಂಡ ರೂಪಿಸಿಕೊಳ್ಳುವಂತೆ ಸೂಚಿಸಿದರೂ ಇದುವರೆಗೆ ಯಾವುದೇ ಮಾನದಂಡಗಳನ್ನು ರೂಪಿಸಿಕೊಂಡಿರುವುದಿಲ್ಲ ಈ ಮಾನದಂಡವಿಲ್ಲದೆ ಎ ಗ್ಗಳವಾಗಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ದಿನದಂದು ಪ್ರಶಸ್ತಿ ಪ್ರಧಾನ ಸಮಾರಂಭ ಮುಖ್ಯಮಂತ್ರಿಗಳು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಮಂತ್ರಿಗಳು ಸೇರಿ ಅಧಿಕಾರಿಗಳು ಅಂದಿಗೆ ಈ ಸಮಾರಂಭ ನಡೆದು ಹೋಗುತ್ತಿದೆ ಇದು ರಾಜ್ಯಕ್ಕೂ ಕೆಟ್ಟ ಹೆಸರು ತರುವ ಡಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಇಂತಹ ಅಸಹ್ಯಕರವಾದ ಬೆಳವಣಿಗೆಯನ್ನು ನೋಡಿಕೊಂಡು ಬುದ್ಧಿವಂತರು ಜ್ಞಾನಿಗಳು ಸುಮ್ಮನಿದ್ದರೆ ದಡ್ಡರು ತಾವು ಮಾಡುವ ಕೆಲಸ ಸರಿ ಎಂದು ಅದನ್ನೇ ಮಾಡುತ್ತಾ ಮುಂದುವರಿಯುತ್ತಾರೆ ಒಂದು ಕಾಲಕ್ಕೆ ಸರ್ಕಾರಿ ಕೆಲಸ ದೊರೆತರೆ ಎಷ್ಟು ಲಂಚ ಕೊಟ್ಟೆ ಎಂದು ಕೇಳುತ್ತಿದ್ದರು ಒಂದು ಹುಡುಗಿ ಮದುವೆಯಾದರೆ ವರದಕ್ಷಿಣೆ ಎಷ್ಟು ನೀಡಿದೆ ಎಂದು ಕೇಳುತ್ತಿದ್ದರು ಲಂಚ ಮತ್ತು ವರದಕ್ಷಿಣೆ ಇಲ್ಲದೆ ಕೆಲಸ ಹಾಗೂ ಮದುವೆ ಆಗುವದಿಲ್ಲವೆಂಬ ನಿರ್ಧಾರಕ್ಕೆ ಜನ ಬಂದು ಹೋಗಿದ್ದಾರೆ ಹಾಗೆ ಈಗಲೂ ಕೂಡ ಯಾರಿಗಾದರೂ ಪ್ರಶಸ್ತಿ ಪ್ರತಿಷ್ಠೆ ಪದವಿಗಳು ಡಾಕ್ಟರೇಟಗಳು ಬಂದರೆ ಎಷ್ಟು ಹಣ ಖರ್ಚು ಮಾಡಿದಿರಿ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಇಂಥ ಪ್ರಶಸ್ತಿಗಳು ಪಡೆಯುವುದರಿಂದ ನಾವು ದೊಡ್ಡವರಾಗುವ ದಾದರೆ ಅವುಗಳನ್ನು ಖರೀದಿಸಬಹುದು ಆದರೆ ಆತ್ಮ ತೃಪ್ತಿ ಸಿಗಲಾರದು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿದ ಕೆಲಸಕ್ಕೆ ಪ್ರತಿಯಾಗಿ ಒಂದು ಹೂವುಗುಚ್ಚ ಸಿಕ್ಕರೂ ಸಾಕು ಅದು ಪದ್ಮಭೂಷಣ ಪ್ರಶಸ್ತಿಗಿಂತಲೂ ಶ್ರೇಷ್ಠ ವಾಗುತ್ತದೆ ಅತ್ತು ಕರೆದು ಆಮಂತ್ರಣ ಹಾಕಿಸಿಕೊಂಡು ಪ್ರಶಸ್ತಿ ಪಡೆದರೆ ಪ್ರಭಾವ ಮಾಡಿ ಅದನ್ನು ತೆಗೆದುಕೊಂಡರೆ ಯಾವುದೇ ಆತ್ಮ ತೃಪ್ತಿ ಸಿಗಲಾರದು ಮಾನಗೇಡಿಗಳು ಮಾನವಿಲ್ಲದವರಿಗೆ ಮಾನ ಗೌರವ ಸನ್ಮಾನ ಮಾಡುವುದರ ಮೂಲಕ ಮಾನದಂಡವಿಲ್ಲದ ಪ್ರಶಸ್ತಿ ನೀಡಿ ಗೌರವಿಸುವ ಪ್ರಕ್ರಿಯೆ ಈಗಲಾದರೂ ನಿಲ್ಲಿಸಬೇಕು ಎಂಬುದು ನನ್ನ ಮನವಿಯಾಗಿದೆ ಇತ್ತೀಚಿಗೆ ಒಬ್ಬ ಮಹಿಳೆ ತನ್ನದೇ ಆದ ಒಂದು ಪ್ರತಿಷ್ಠಾದವನ್ನು ಮಾಡಿ ಕೊಂಡು ಅನೇಕರಿಗೆ ಪ್ರಶಸ್ತಿಗಳನ್ನು ನೀಡುತ್ತಿದ್ದಳು ಆ ಕಾರ್ಯಕ್ರಮಕ್ಕೆ ನಾನು ದ್ವಿತೀಯಾಗಿ ಹೋಗಿದ್ದೆ ಅಲ್ಲಿ ತನ್ನ ಮಗನಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದಳು. ನಿಮ್ಮ ಪ್ರತಿಷ್ಠಾನದಿಂದ ನಿಮ್ಮ ಮಗನಿಗೆ ಪ್ರಶಸ್ತಿ ನೀಡುವುದು ಸರಿ ಎಂದು ನಾನು ಪ್ರಶ್ನಿಸಿದೆ ಯಾರು ಯಾರಿಗೂ ನೀಡುವುದಕ್ಕೆ ಅಂತ ನಮ್ಮ ಮಗನಿಗೆ ನೀಡಿ ಪ್ರೋತ್ಸಾಹಿಸಿದರೆ ಒಳ್ಳೆಯದಲ್ಲವೇ ಎಂದು ಹೇಳಿದಳು ಇದನ್ನು ಕೇಳಿ ನಾನು ದಂಗಾಗಿ ಹೋದೆ ಇಂಥ ಸಮಾರಂಭಗಳಿಗೆ ನಾವು ಅತಿಥಿಗಳಾಗಿ ಹೋಗಬಾರದು ಎನ್ನಿಸಿತು ವಿಧಿ ಇಲ್ಲದೆ ಭಾಗವಹಿಸಿ ಬಂದೆ ಇದೊಂದು ಅಸಹ್ಯಕರ ಬೆಳವಣಿಗೆಯಾಗಿದೆ ಯು ಸಮಾಜದಲ್ಲಿ ನಡೆಯಬಾರದು ಎಂಬುದು ನನ್ನ ಸದಾಶಯವಾಗಿದೆ
-ಪ್ರೊ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ