ಮಹಾಗಾಂವ ಪಿಡಿಓ ಜಗದೇವಿ ಅಮಾನತ್ತಿಗೆ ಒತ್ತಾಯಿಸಿ ಮನವಿ

ಮಹಾಗಾಂವ ಪಿಡಿಓ ಜಗದೇವಿ ಅಮಾನತ್ತಿಗೆ ಒತ್ತಾಯಿಸಿ ಮನವಿ

ಮಹಾಗಾಂವ ಪಿಡಿಓ ಜಗದೇವಿ ಅಮಾನತ್ತಿಗೆ ಒತ್ತಾಯಿಸಿ ಮನವಿ

ಕಲಬುರಗಿ : ಕಮಲಾಪೂರ ತಾಲೂಕಿನ ಮಹಾಗಾಂವ ಪಿ.ಡಿ.ಒ ಜಗದೇವಿ ಪವಾರ ಇವರು ಪಿ.ಎಮ್.ಆವಾಸ ಯೋಜನೆ ಅಡಿಯಲ್ಲಿ ಫಲಾನುಭವಿಗಳ ಹತ್ತಿರ 10,000-ರೂ ಗಳನ್ನು ತೆಗೆದುಕೊಂಡಿರುತ್ತಾರೆ. ಮತ್ತು ಸರ್ವೇ ನಂ-126 ಮತ್ತು 140 ರ ಕೇವಲ ಎನ್.ಎ. ಇದ್ದ ಜಮೀನಿನನ್ನು ಅನಧೀಕೃತವಾಗಿ ಇ-ಸ್ವತ್ತು ತೆಗೆದಿದ್ದು, ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಇವರನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಬೇಕು ಎಂದು ಸಾರ್ವಜನಿಕರು ಹಾಗೂ ಮಹಾಗಾಂವ ಗ್ರಾಮಸ್ಥರು ಸೇರಿ ಮಹಾಗಾಂವ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿ ಮೇಲೆ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದರು.

                       ಕಲಬುರಗಿ ಜಿಲ್ಲೆ ಕಮಲಾಪೂರ ತಾಲೂಕಿನ ಮಹಾಗಾಂವ ಗ್ರಾಮ ಪಂಚಾಯತ ಪಿ.ಡಿ.ಒ ಜಗದೇವಿ ಪವಾರ ಅವರು ಸುಮಾರು 2 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಸದರಿ ಪಿ.ಡಿ.ಒ ಅವರು ಗ್ರಾಮ ಪಂಚಾಯತಗೆ ಕರ್ತವ್ಯಕ್ಕೆ ಸರಿಯಾಗಿ ಬರದೆ, ಸಭೆ ಮಾಡದಿರುವುದು, ಸಾರ್ವಜನಿಕರ ಕೆಲಸ ಮಾಡಿಕೊಡದಿರುವುದು ಮತ್ತು ಸಾರ್ವಜನಿಕರನ್ನು ಕೆಲಸಕ್ಕೆ ಸತಾಯಿಸುವುದು ಹಾಗೂ 11 ಬಿ ತೆಗೆಯಲು 3000/- ಸಾವಿರ ರೂ ಗಳನ್ನು ಕೇಳುವುದು, ಹಾಗೂ ಪಿ.ಎಮ್. ಆವಾಸ ಯೊಜನೆ ಅಡಿಯಲ್ಲಿ ಫಲಾನುಭವಿಗಳ ಹತ್ತಿರ 10,000-/ರೂ ಗಳನ್ನು ತೆಗೆದುಕೊಂಡಿರುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

            ಸುಮಾರು 3-4 ತಿಂಗಳಿಂದ ಕರ ವಸೂಲಿ ಮಾಡಿದ ಹಣವನ್ನು ಬ್ಯಾಂಕಿಗೆ ಜಮಾ ಮಾಡದೆ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಮುಟ್ರೇಷನ್‌ಗಳು ಬಂದರೆ ಪಂಚಾಯತನಲ್ಲಿ ಯಾವುದೇ ರೆಜಿಸ್ಟರ್ ನಲ್ಲಿ ನಮೂದಿಸದೆ ನಕಲಿ ರಸೀದಿ ಕೊಟ್ಟು ಸಾವಿರಾರು ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮತ್ತು ಸರ್ವೇ ನಂ-126, ಮತ್ತು 1460ರಲ್ಲಿನ ಜಮೀನು ಅನಧೀಕೃತ ಇ-ಸ್ವತ್ತು ಮಾಡಿರುತ್ತಾರೆ. ಪಂಚಾಯತನ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಗ್ರಾಮ ಪಂಚಾಯತ ವ್ಯಾಪ್ತಿಯ ಮೂಲ ಸೌಕರ್ಯಗಳಾದ ಬೀದಿ ದೀಪ,ಚರಂಡಿ ತೆಗಿಸುವುದು,ಸಾರ್ವಜನಿಕರು ಕೇಳಿದರೆ ಅವರಿಗೆ ಬೆದರಿಕೆ ಹಾಕುವುದು ಹಾಗೂ ಉದ್ಯೋಗ ಖಾತ್ರಿ ಅಡಿಯಲ್ಲಿ ಹೆಣ್ಣು ಮಕ್ಕಳು ಕೆಲಸ ಕೇಳಲು ಬಂದರೆ ಅವರ ಸಮಸ್ಯೆಯನ್ನು ಕೇಳದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಆದಕಾರಣ ತಾವುಗಳು ಆಡಳಿತ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಇವರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.