ದೇವನಾoಪ್ರಿಯ ಪ್ರಶಸ್ತಿ ಗೆ ಪುಸ್ತಕಗಳ ಆವ್ಹಾನ

ದೇವನಾoಪ್ರಿಯ ಪ್ರಶಸ್ತಿ ಗೆ ಪುಸ್ತಕಗಳ ಆವ್ಹಾನ

ದೇವನಾoಪ್ರಿಯ ಪ್ರಶಸ್ತಿ ಗೆ ಪುಸ್ತಕಗಳ ಆವ್ಹಾನ

ಕಲಬುರಗಿ : ರಾಜಾಪುರದ ವಿಶ್ವಕರ್ಮ ಶಿಕ್ಷಣ ಹಾಗೂ ಅಭಿವೃದ್ಧಿ ಸಂಸ್ಥೆ ಕಲಬುರಗಿ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಲೇಖಕರ ಪುಸ್ತಕಗಳಿಗೆ ದೇವನಾoಪ್ರಿಯ ಪ್ರಶಸ್ತಿ ಕೊಡುವ ಯೋಜನೆಯನ್ನು ರೂಪಿಸಲಾಗಿದೆ.

ಈಗಾಗಲೇ ಕಳೆದ ಹದಿನೈದು ವರ್ಷಗಳಿಂದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅದರಂತೆ ಈಗ 2024 ಹಾಗೂ 2025 ರಲ್ಲಿ ಪ್ರಥಮ ಮುದ್ರಣವಾದ ಕವನ ಸಂಕಲನ, ಕಥಾ ಸಂಕಲನ, ಕಾದಂಬರಿ, ಮಹಿಳಾ ಸಾಹಿತ್ಯ, ಸಂಶೋಧನೆ ಹಾಗೂ ಸಂಕೀರ್ಣ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ಅಹ್ವಾನಿಸಲಾಗಿದೆ. ಲೇಖಕರು ಕಲ್ಯಾಣ ಕರ್ನಾಟಕದವರಾಗಿರಬೇಕು. ಸಂಪಾದಿತ ಮತ್ತು ಪಿ.ಎಚ್ ಡಿ ಪ್ರಭಂದದ ಪುಸ್ತಕಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ಪ್ರಶಸ್ತಿಯು ನೆನಪಿನ ಕಾಣಿಕೆ ಪ್ರಮಾಣ ಪತ್ರ ಹಾಗೂ ಸನ್ಮಾನ ಒಳಗೊಡಿರುತ್ತದೆ. ಪುಸ್ತಕಗಳನ್ನು ಸಲ್ಲಿಸಲು ಕೊನೆಯ ದಿನಾಂಕ 30-01-2026 ರೊಳಗಾಗಿ ತಮ್ಮ ಕೃತಿಯ ಮೂರು ಪ್ರತಿಗಳನ್ನು ವಿರೇಂದ್ರ ಇನಾಮದಾರ, ಅಧ್ಯಕ್ಷರು ವಿಶ್ವಕರ್ಮ ಶಿಕ್ಷಣ ಹಾಗೂ ಅಭಿವೃದ್ಧಿ ಸಂಸ್ಥೆ ರಾಜಾಪುರ, ಕಲಬುರಗಿ -585105. ವಿಳಾಸಕ್ಕೆ ಖುದ್ದಾಗಿ ಇಲ್ಲವೆ ಅಂಚೆ ಮೂಲಕ ಕಳಿಸಿಕೊಡಲು ಕೋರಲಾಗಿದೆ.

ಈ ಪ್ರಶಸ್ತಿಯ ನೀಡಿಕೆಯಲ್ಲಿ ನಿರ್ಣಾಯಕರ ನಿರ್ಣಯವೇ ಅಂತಿಮ ಈ ಕುರಿತು ಪತ್ರ ವ್ಯವಹಾರ ಇಲ್ಲವೇ ವಿಚಾರಣೆಗೆ ಅವಕಾಶವಿಲ್ಲ.

ಪ್ರಶಸ್ತಿಗೆ ಬಂದ ಪುಸ್ತಕಗಳನ್ನು ಹಿಂದುರಿಗಿಸಲಾಗುವುದಿಲ್ಲ.

ವಿವರಗಳಿಗಾಗಿ ಶ್ರೀಮತಿ ಶಶಿಕಲಾ ವೈಜಾಪುರ 7019332567

ಡಾ.ಶರಣಬಸಪ್ಪ ವಡ್ಡನಕೇರಿ 9741169055 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.