ಗಡಿಲಿಂಗದಳ್ಳಿ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ

ಗಡಿಲಿಂಗದಳ್ಳಿ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ

ಗಡಿಲಿಂಗದಳ್ಳಿ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ 

ಮೀನಾಕ್ಷಿ ಅಧ್ಯಕ್ಷೆ, ವಿಜಯಲಕ್ಷ್ಮಿ ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆ 

ಚಿಂಚೋಳಿ : ತಾಲೂಕಿನ ಗಡಿಲಿಂಗದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ಜರುಗಿತು.

ಪ. ಪಂ ಜಾತಿ ಮಹಿಳೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಮೀನಾಕ್ಷಿ ಶಿವಕುಮಾರ ಅಧ್ಯಕ್ಷ, ವಿಜಯಲಕ್ಷ್ಮಿ ಸಿದ್ದು ನಿಪಾಣಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. 

 ಗ್ರೇಡ್ 1 ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಚುನಾವಣೆ ಅಧಿಕಾರಿಗಳಾಗಿದ್ದರು. 

ಆಯ್ಕೆ ಬಳಿಕ, ಬಿಜೆಪಿ ಮುಖಂಡರು ಹಾಗೂ ಮಾಜಿ ಗ್ರಾ. ಪಂ. ಅಧ್ಯಕ್ಷ ಗೌರಿಶಂಕರ ಉಪ್ಪಿನ್, ಓಂಕಾರ ಸ್ವಾಮಿ, ಸುಭಾಷ ನಾಯಕ, ಗೋಪಾಲಸಿಂಗ್ ನಾಯಕ, ravi ರಾಠೋಡ, ಗಂಗಾಧರ ಚಿಡಗುಪ್ಪ, ರೇವಣಸಿದ್ಧ ಕಲ್ಲೂರ್, ಘೋರಕ್ ನಾಯಕ, ಗೇಮು ರಾಠೋಡ, ವಿಜಯಕುಮಾರ ಜಾಧವ ಲಕ್ಷ್ಮಿಕಾಂತ ಚೊಂಚಿ ಸೇರಿ ಬಿಜೆಪಿ ಕಾರ್ಯಕರ್ತರು ವಿಜ್ಯೋತ್ಸವ ಆಚರಿಸಿ ಸಂಭ್ರಮಿಸಿದರು.