ವಾಡಿ ಬಿಜೆಪಿ ಕಛೇರಿಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ವಾಡಿ ಬಿಜೆಪಿ ಕಛೇರಿಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ವಾಡಿ ಬಿಜೆಪಿ ಕಛೇರಿಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿ ಜೈ ಘೋಷ ಮೊಳಗಿಸಿದರು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ಚಿಕ್ಕ ವಯಸ್ಸಿನಲ್ಲಿಯೇ ರಾಜ್ಯಬಾರ ವಹಿಸಿಕೊಂಡು ವೀರ, ಶೂರ, ತ್ಯಾಗಿಯಾಗಿ ವೈರಿಯ ಎದುರು ಶರಣಾಗದ ಸ್ವಾಭಿಮಾನಿಯಾಗಿ ಮೆರೆದವರು ಛತ್ರಪತಿ ಶಿವಾಜಿ ಮಹಾರಾಜರು ಎಂದರು.

ಛತ್ರಪತಿ ಶಿವಾಜಿ ಮಹಾರಾಜರು ಉತ್ತಮ ಆಡಳಿತ ಸುಧಾರಣಾ ನೀತಿಗಳನ್ನು ಜಾರಿಗೊಳಿಸುವ ಮೂಲಕ ಶ್ರೇಷ್ಠ ಆಡಳಿತಗಾರರಾಗಿದ್ದರು. ರಾಷ್ಟ್ರನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಹಿಂದೂ ಧರ್ಮದ ಪರವಾಗಿ, ಸಮುದಾಯದ ರಕ್ಷಣೆಗೆಗಾಗಿ ಹೋರಾಡಿದ ಮಹನೀಯರು.

ಶಿವಾಜಿ ತಾಯಿಗೆ ತಕ್ಕ ಮಗ, ಗುರುವಿಗೆ ತಕ್ಕ ಶಿಷ್ಯರಾಗಿ ತಮ್ಮ ಇಡೀ ಜೀವನವನ್ನು ಬಹಳ ಅರ್ಥಪೂರ್ಣವಾಗಿ ಬದುಕಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಉತ್ತಮ ಹೋರಾಟಗಾರರಾಗಿದ್ದ ಶಿವಾಜಿ ಮಹಾರಾಜರು ಸಮಾಜಮುಖಿಯಾಗಿ, ರಾಷ್ಟ್ರ ನಿರ್ಮಾಣ ಹಾಗೂ ಸಮಾಜದ ಪರವಾಗಿ ಹೋರಾಡಿದ ರಾಜರಿಗೆ ರಾಜರಾಗಿದ್ದರು.

ಅವರ ತತ್ವಾದರ್ಶ, ಸಿದ್ಧಾಂತ, ಹೋರಾಟದ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅವರ ಕೊಡುಗೆಗಳನ್ನು ಸ್ಮರಿಸುತ್ತಾ, ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ ಮಾಡೋಣ,

 ತಾಯಿ ಜೀಜಾಬಾಯಿ ಅವರು ಸದ್ಗುಣ ಸಂಪನ್ನ ಮಹಿಳೆ. ದೈವಭಕ್ತೆ, ವಿದ್ಯಾವಂತೆ ಹಾಗೂ ಆಳವಾದ ಧಾರ್ಮಿಕ ಮತ್ತು ಮಹತ್ವಾಕಾಂಕ್ಷೆಯ ಮಹಿಳೆಯಾಗಿದ್ದು, ಶಿವಾಜಿಯ ಮೇಲೆ ಗಾಢವಾದ ಪ್ರಭಾವ ಬೀರಿದಳು. ಶಿವಾಜಿಗೆ ಚಿಕ್ಕ ವಯಸ್ಸಿನಲ್ಲಿ ರಾಮಾಯಣ, ಮಹಾಭಾರತದ ಕಥೆಗಳನ್ನು, ಪುರಾಣಗಳನ್ನು ಹೇಳುತ್ತಾ ಅವನಲ್ಲಿ ಉದಾತ್ತ ಆದರ್ಶಗಳನ್ನು ಬಿತ್ತಿದಳು. ಹಿಂದೂ ಧರ್ಮ ಹಾಗೂ ಸಂಸ್ಕøತಿಯ ಬಗ್ಗೆ ಅಭಿಮಾನ ಮೂಡಿಸಿದಳು. ಶಿವಾಜಿಯ ಜೀವನ ರೂಪಿಸುವಲ್ಲಿ ಜೀಜಾಬಾಯಿಯವರ ಪಾತ್ರ ಹಿರಿದಾದುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ,ಮರಾಠ ಸಮಾಜದ ಅಧ್ಯಕ್ಷ ಅಶೋಕ ಪವಾರ,ಬಿಜೆಪಿ ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ,ಮುಖಂಡರಾದ ಹರಿ ಗಲಾಂಡೆ,ಅರ್ಜುನ ಕಾಳೆಕರ,ಗಿರಿಮಲ್ಲಪ್ಪ ಕಟ್ಟಿಮನಿ,ರಿಚರ್ಡ್ ಮಾರೆಡ್ಡಿ,

ಪ್ರಮೋದ ಚೊಪಡೆ,ಅಶೋಕ ಡೌವಳೆ,ಆನಂದ ಡೌವಳೆ,ಸಂಜಯ ಗಾಯಕವಾಡ,ಗಣಪತರಾವ ಸುತ್ರಾವೆ,ಸಚಿನ್ ಡೌವಳೆ,ಮಹೇಂದ್ರ ಕುಮಾರ ಪುಜಾರಿ,ಅರವಿಂದ ಚೊಪಡೆ,ಅನಿಲ ಚವ್ಹಾಣ,ಪರಮೇಶ್ವರ ಚೊಪಡೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.