ಧರ್ಮಸ್ಥಳದ ಯೋಜನೆಗಳೆಲ ಜನರ ಕಲ್ಯಾಣಕ್ಕಾಗಿಯೇ: ಪ್ರವೀಣಕುಮಾರ

ಧರ್ಮಸ್ಥಳದ ಯೋಜನೆಗಳೆಲ ಜನರ ಕಲ್ಯಾಣಕ್ಕಾಗಿಯೇ: ಪ್ರವೀಣಕುಮಾರ

 

ಕಮಲನಗರ : ಕಮಲನಗರ ತಾಲೂಕಿನ ಖತಗಾಂವ ಗ್ರಾಮದ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 09 ಹೊಸ ಸ್ವಸಹಾಯ ಸಂಘಗಳ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು 

ಧರ್ಮಸ್ಥಳದ ಯೋಜನೆಗಳೆಲ ಜನರ ಕಲ್ಯಾಣಕ್ಕಾಗಿಯೇ: ಪ್ರವೀಣಕುಮಾರ

 ಈ ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಸರ್ ದೀಪ ಬೆಳಗುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರದಲ್ಲಿ ಜಿಲ್ಲಾ ನಿರ್ದೇಶಕರ ಮಾತನಾಡಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು ಧರ್ಮಸ್ಥಳ ಯೋಜನೆ ವತಿಯಿಂದ ಅನೇಕ ಸಾಮಾಜಿಕ ಚಟುವಟಿಕೆಗಳು ನಿರಂತವಾಗಿ ಜನರ ಕಲ್ಯಾಣಕಾಗಿ ಶ್ರಮಿಸುತಿದೆ, ಗ್ರಾಮೀಣ ಭಾಗದ ಮಹಿಳೆಯರ ಮನೆಗೆ ತಲುಪಿದೆ ಇದರ ಜೊತೆಗೆ ಅವರ ಸರ್ವಾಂಗಿಣ ಅಭಿವೃದಿಗಾಗಿ ಶ್ರಮಿಸುತಿದೆ ಹಾಗೂ ದೇವಸ್ಥಾನ ಜೀರ್ಣದ್ದಾರಕಾಗಿ ಅನುದಾನ, ಕೆರೆ ಅಭಿವೃದ್ಧಿ, ಸುಜ್ಞಾನಿಧಿ ಶಿಷ್ಯವೇತನ ಇನ್ನು ಅನೇಕ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ತಾಲೂಕಿನ ಯೋಜನಾಧಿಕಾರಿಗಳ ರಾಘವೇಂದ್ರ ಗೌಡ, ಊರಿನ ಗಣ್ಯರಾದ ಸೂರ್ಯಕಾಂತ ಧರಣೆ , ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಶೋಭಾ ಹಾಗೂ ವಲಯದ ಮೇಲ್ವಿಚಾರಕರು ಮಲ್ಲಿಕಾರ್ಜುನ್ ಚಾಕುಂಡಿ ಹಾಗೂ ಸೇವಾ ಪ್ರತಿನಿಧಿ ಮೀನಾಕ್ಷಿ ಆಶಾ, ಕಾಂಚನ್ ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿದ್ದರು.

 ವಲಯದ ಮೇಲ್ವಿಚಾರಕರು ಸ್ವಾಗತಿಸಿದರು, ಸೇವಾಪ್ರತಿನಿಧಿ ಮೀನಾಕ್ಷಿ ವಂದಿಸಿದರು.