‘’ಬೇಂದ್ರೆ ಕಾವ್ಯದ ಕುರಿತು ಹೊಸ ಜಿಜ್ಞಾಸೆ ಮೂಡಿಸುವ ವಿಶಿಷ್ಟ ಸಂಚಿಕೆ ’’ - ಹಿರಿಯ ಸಾಹಿತಿ ಡಾ.ಕೃಷ್ಣ ಕಟ್ಟಿ ಅಭಿಮತ
‘’ಬೇಂದ್ರೆ ಕಾವ್ಯದ ಕುರಿತು ಹೊಸ ಜಿಜ್ಞಾಸೆ ಮೂಡಿಸುವ ವಿಶಿಷ್ಟ ಸಂಚಿಕೆ ’’- ಹಿರಿಯ ಸಾಹಿತಿ ಡಾ.ಕೃಷ್ಣ ಕಟ್ಟಿ ಅಭಿಮತ
ಮಾಧುರಿ ದೇಶಪಾಂಡೆ ಅತಿಥಿ ಸಂಪಾದಕತ್ವದಲ್ಲಿ ಅಡ್ವೆöಜರ್ ‘ದ.ರಾ.ಬೇಂದ್ರೆ ವಿಶೇಷಾಂಕ’ ಜನಾರ್ಪಣೆ
ಮಾಸ ಪತ್ರಿಕೆ ಕ್ಷೇತ್ರದಲ್ಲಿ ವಿನೂತನ ಪ್ರಯತ್ನ
ಶಬ್ದ ಗಾರುಡಿಗ, ಮೋಡಿಕಾರ, ಬೆಳಕಿನ ಮಹಾಪಥಿಕ, ಅವಧೂತಕವಿ, ಋಷಿಕವಿ, , ಅಮರಕವಿವರ್ಯ ಎಂದೇ ಖ್ಯಾತರಾದ ದ. ರಾ. ಬೇಂದ್ರೆಯವರ ‘ನಾಕು ತಂತಿ' ಕವನ ಸಂಕಲನ ಕನ್ನಡ ಸಾಹಿತ್ಯ ಸರಸ್ವತಿಯ ಸಿರಿಮುಡಿಗೆ ಎರಡನೆಯ ಸುವರ್ಣ ಕಿರೀಟ ಸಂದುದು ಕನ್ನಡಿಗರಿಗರಲ್ಲಿ ಹೆಮ್ಮೆ ಮೂಡಿಸಿದ ಕ್ಷಣವನ್ನು ಸುವರ್ಣ ಸಂಭ್ರಮಾಚರಣೆ ಸ್ಮರಣಾರ್ಥ ಲೇಖಕಿ, ಅಂಕಣಕಾರ್ತಿ ಮಾಧುರಿ ದೇಶಪಾಂಡೆಯವರ ಅತಿಥಿ ಸಂಪಾದಕತ್ವದಲ್ಲಿ ವರಕವಿ ಬೇಂದ್ರೆಯವರ ವಿಶೇಷ ಸಂಚಿಕೆ ಹೊರತರುತ್ತಿರುವುದು ಬಹಳ ಸ್ತುತ್ಯವಾದ ಕೆಲಸ. ಬೇಂದ್ರೆ ಕಾವ್ಯದ ಕುರಿತು ಹೊಸ ಜಿಜ್ಞಾಸೆ ಮೂಡಿಸುವÀಲ್ಲಿ ಇದೊಂದು ಕೈಪಿಡಿಯಂತಿದೆ ಎಂದು ತಿಳಿಸಿದರು.
ನಗರದ ಗಿರಿನಗರದ ಅಳಿಲು ಸಭಾಂಗಣದಲ್ಲಿ ಅಡ್ವೆöÊಸರ್ ಮಾಸಪತ್ರಿಕೆ ಆಯೋಜಿಸಿದ್ದ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಧಾರವಾಡದ ಹಿರಿಯ ಸಾಹಿತಿ ಡಾ.ಕೃಷ್ಣ ಕಟ್ಟಿ ಅಭಿಪ್ರಾಯ ಪಟ್ಟರು .
ಜ್ಞಾನ ಬೆಳೆಯಲಿ, ಅಜ್ಞಾನ ಅಳಿಯಲಿ ಎಂಬ ಘೋಷವಾಕ್ಯವನ್ನಿಟ್ಟುಕೊಂಡು, ಸುದೀರ್ಘವಾಗಿ ೨೮ ವಸಂತಗಳನ್ನು ಪೂರೈಸಿಕೊಂಡು ಬರುತ್ತಿರುವ ಅಡ್ವೆöÊಜರ್ ಕನ್ನಡದ ಮಾಸಪತ್ರಿಕೆ ಕ್ಷೇತ್ರದಲ್ಲಿ ವಿನೂತನ ಪ್ರಯತ್ನದಿಂದ ಗಮನ ಸೆಳೆದಿದೆ.ದಿನಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅತಿಥಿ ಸಂಪಾದಕರು ಎಂಬ ಪರಿಕಲ್ಪನೆಯನ್ನು ಮಾಸಪತ್ರಿಕೆಗೂ ಅಳವಡಿಸಿಕೊಂಡು ಈಗಾಗಲೇ ನಾಲ್ಕು ಅತಿಥಿ ಸಂಪಾದಕರ ಸಂಪಾದಕತ್ವದಲ್ಲಿ ವೈವಿಧ್ಯಮಯ ಸಂಗ್ರಹ ಯೋಗ್ಯ ಸಂಚಿಕೆಗಳನ್ನು ರೂಪಿಸಿ ಓದುಗರಿಗೆ ನೀಡಿದ್ದಾರೆ. ಇತ್ತೀಚಿಗೆ ತಾನೇ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪು ಹಸಿರಾಗಿರುವ ಈ ಹೊತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಪತ್ರಿಕೆ ಒತ್ತು ನೀಡುತ್ತಿರುವುದು ವಿಶೇಷ ಎಂದು ಅಧ್ಯಕ್ಷತೆ ವಹಿಸಿದ್ದ ಖ್ಯಾತ ಕಾದಂಬರಿಕಾರ ಡಾ.ಸುರೇಶ ಪಾಟೀಲ ತಿಳಿಸಿದರು.
ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಲೇಖಕಿ ಮಾಧುರಿ ದೇಶಪಾಂಡೆ ಅವರಿಗೆ ನಿತ್ಯೋತ್ಸವ ಕನ್ನಡ ಸಿರಿ ಪ್ರಶಸ್ತಿಯನ್ನು ಅಧ್ಯಕ್ಷೆ ನಿತ್ಯಾ ನೀಡಿ ಗೌರವಿಸಿದರು. ಕವಿಯತ್ರಿ ರಾಜೇಶ್ವರಿ ಮೂರ್ತಿ ಅಭಿನಂದನಾ ನುಡಿಗಳನ್ನಾಡಿದರು.
ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಸಂಪಾದಕ ಸಿ.ಬಸವರಾಜು, ಮಾಧ್ಯಮ ಸಮನ್ವಯಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಉಪಸ್ಥಿತರಿದ್ದರು.ಪದ್ಮ ಅನಂತಭಾರದ್ವಜ ತಂಡದವರು ಬೇಂದ್ರೆ ಕವನ ಗಾಯನ ನಡೆಸಿಕೊಟ್ಟರು.