ಪ್ರಗತಿ ಪರಿಶೀಲನಾ ಸಭೆ

ಪ್ರಗತಿ ಪರಿಶೀಲನಾ ಸಭೆ

ಪ್ರಗತಿ ಪರಿಶೀಲನಾ ಸಭೆ

ತಾಲೂಕು ಪಂಚಾಯತ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಸರ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

 ವಸತಿ ಯೋಜನೆಗೆ ಬಂದಂತಹ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಪಲಾನುಭವಿಗಳ ಆಧಾರ ಕಾರ್ಡ್& ಬ್ಯಾಂಕ್ ಫಾಸ್ ಬುಕ್ ನ ಝುರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು ಆನಲೈನ್ ನಲ್ಲಿ ನಮೂದಿಸಬೇಕೆಂದು ಎಲ್ಲ ಡಿಇಓ ಅವರಿಗೆ ಮಾಣಿಕರಾವ ಪಾಟೀಲ ತಿಳಿಸಿದರು. ಸ್ವಚ್ಛ ಭಾರತ ಅಭಿಯಾನದಡಿ ಸೆಲ್ಪ ಪಂಡೆಡ್ ಟಾಯಲೇಟ್ ಅಪಡೇಟ್ ಮಾಡಬೇಕಾದ ಕಾರ್ಯಾದೇಶ ನೀಡಬೇಕಾದ ಫಲಾನುಭವಿಗಳ‌ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಸುವುದು. ನಮ್ಮ ಶೌಚಾಲಯ ನಮ್ಮ ಗೌರವ ಅಭಿಯಾನದಲ್ಲಿ ಮಾಡಲಾದ ವರ್ಕ ಕಂಪ್ಲೇಷನ್ ಹಾಕಬೇಕಾದ ಕಾಮಗಾರಿಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಪಡೆದುಕೊಂಡು ನಮೂದಿಸಬೇಕು. ಶಾಲಾ ಶೌಚಾಲಯ ಮತ್ತು ಅಂಗನವಾಡಿ ಕಾಮಗಾರಿಗಳ ಪ್ರಗತಿಯ ಬಗ್ಗೆ ಚರ್ಚಿಸಿದರು. ಹಾಗೂ ಗ್ರಾಮ ಪಂಚಾಯತಗಳಿಗೆ ಈಗಾಗಲೇ ಕಾರಣ ಕೇಳುವ ನೋಟೀಸ್ ಕೊಡಲಾಗಿದೆ ಆದರೂ ಕೂಡ ಪ್ರಗತಿಯಾಗಿರುವುದಿಲ್ಲ. ಆದ್ದರಿಂದ ನಾಳೆ ಒಂದು ದಿನದಲ್ಲಿ ಹೆಚ್ಚಿನ ಕರ ವಸೂಲಿ ಮಾಡಲು ತಿಳಿಸಿದರು. 

ಜೆಜೆಎಂ ಕಾಮಗಾರಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಗ್ರಂಥಾಯಲಯ ಸೇರಿದಂತೆ ಇತರೆ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಿದರು.

ಈ ಸಂದರ್ಭದಲ್ಲಿ ತಾ.ಪಂ. ಸಹಾಯಕ ನಿರ್ದೇಶಕರಾದ ಹಣಮಂತರಾವ ಕೌಟಗೆ ಸರ್, ವಸತಿ ಯೋಜನೆಯ ನೋಡಲ್ ಅಧಿಕಾರಿಗಳಾದ ಶ್ರೀನಿವಾಸ, ಎಸ್ ಬಿ ಎಂ ಯೋಜನೆ ಸಮಾಲೋಚಕರಾದ ಪಂಡಿತ ವಾಡೇಕರ, ವಿರುಪಾಕ್ಷ, ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ದತ್ತಾತ್ರಿ ಪೂಜಾರಿ, ನಿರ್ಮಲಾ, ಮಲ್ಲೇಶ, ಮನೋಹರ, ಪ್ರಶಾಂತ, ವೆಂಕಟೇಶ, ಬಾಷಾ, ಶ್ರೀನಿವಾಸ, ಡಿಇಓ ಮಹೇಶ, ಸಾಗರ, ವಿಠ್ಠಲ, ವಿವೇಕ ಸ್ವಾಮಿ, ಆದಿತ್ಯ ಹಾಗೂ ತಾ.ಪಂ. ಸಿಬ್ಬಂದಿಗಳಾದ ಸವಿತಾ ನಾಗೇಶ, ಕವಿತಾ, ಗಣೇಶ, ವಿದ್ಯಾಸಾಗರ, ನೈಯೀಮ್, ಸ್ವಪ್ನಾ, ಸಂಪತ್ತ, ಹಾಜರಿದ್ದರು.