ಅ.23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅದ್ದೂರಿ ಆಚರಣೆ : ಮರಗೋಳ, ಮೋದಿ ಕರೆ
ಅ.23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅದ್ದೂರಿ ಆಚರಣೆ : ಮರಗೋಳ, ಮೋದಿ ಕರೆ
ಕಲಬುರಗಿ : ಬ್ರಿಟೀಷರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮಾ ಅವರ ೨೦೦ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾದ ಶರಣಕುಮಾರ ಮೋದಿ ಮತ್ತು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ಜ್ಯೋತಿ ಮರಗೋಳ ಜಂಟಿಯಾಗಿ ತಿಳಿಸಿದರು.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಅಕ್ಟೋಬರ್ 23 ರಂದು ಬೆಳಿಗ್ಗೆ 8-30 ಗಂಟೆಗೆ ನಗರದ ಸರದಾರ ವಲ್ಲಭಾಯಿ ಪಟೇಲ್ ವೃತ್ತದಿಂದ ಭವ್ಯ ಮೆರವಣಿಗೆ ಜರುಗಲಿದೆ ಎಂದರು.
ಮೇರವಣಿಗೆಯನ್ನು ಶರಣಬಸವೇಶ್ವರ ವಿದ್ಯ ವರ್ಧಕ ಸಂಘದ , ಚೇರ್ ಪರ್ಸನ್ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಣಿ ಎಸ್. ಅಪ್ಪ ಅವರು ಉದ್ಘಾಟಿಸುವರು, ಡಾ. ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ ಅವರ ಅಧ್ಯಕ್ಷತೆ ವಹಿಸಲಿದ್ದಾರೆ . ಡಾ. ನೀಲಾಂಬಿಕಾ ಶೇರಿಕಾರ ಅವರು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಜಾನವಿ ಶರಣಕುಮಾರ ಮೋದಿ, ಪ್ರೇಮಲತಾ ಅಲ್ಲಮಪ್ರಭು ಪಾಟೀಲ, ಶಾಂತಾಬಾಯಿ ಎಂ.ವೈ. ಪಾಟೀಲ, ವಿಲಾಸವತಿ ಖೂಬಾ, ಲಕ್ಷ್ಮೀ ದತ್ತಾತ್ರೇಯ ಪಾಟೀಲ, ಪ್ರಿಯಂಕಾ ಚಂದ್ರಕಾಂತ ಪಾಟೀಲ ಡಾ. ಪ್ರತಿಮಾ ಕಾಮರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಿಯಾ ನೃತ್ಯಲಯಾ ಕಲಾ ಸಂಸ್ಥೆವತಿಯಿಂದ ಪ್ರಾರ್ಥನೆ ನಡೆಯಲಿದ್ದು ನಂತರ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕವನ್ನು ಡಾ. ಪುಟ್ಟರಾಜ ಪಾಟೀಲ ನಿರ್ದೇಶನದಲ್ಲಿ ವಿಶ್ವರಂಗ ಕಲಬುರಗಿಯವರು ಪಸ್ತುತಪಡಿಸಲಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜಶೇಖರ ಸಿರಿ, ಸಂತೋಷ ಪಾಟೀಲ, ಭೀಮಾಶಂಕರ,ಶಶಿಕಾಂತ ಪಾಟೀಲ ಉಪಸ್ಥಿತರಿದ್ದರು
[ಅ.೨೬ರಂದು ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಪದಾಧಿಕಾರಿಗಳ ಕಾರ್ಯಕ್ರಮವು ರಾಜ್ಯಾಧ್ಯಕ್ಷರಾದ ಶಂಕರ ಬಿದರಿಯವರ ನೇತ್ರತ್ವದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯು ಡಾ. ಶರಣಪ್ರಕಾಶ ಪಾಟೀಲ ವಹಿಸುವರು]