ಬಾಬುರಾವ ಯಡ್ರಾಮಿ, ರಾಜಕುಮಾರ ಉದನೂರಗೆ ಸನ್ಮಾನ
ಬಾಬುರಾವ ಯಡ್ರಾಮಿ,ರಾಜಕುಮಾರ ಉದನೂರಗೆ ಸನ್ಮಾನ
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಬಾಬುರಾವ ಯಡ್ರಾಮಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜಕುಮಾರ ಉದನೂರ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ, ಕನ್ನಡ ಜಾನಪದ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಘಟಕದ ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಸಾಯಬಣ್ಣ ಹೋಳಕರ್, ಚಂದ್ರಕಾಂತ ಸೂರನ್, ಮಂಜುನಾಥ ಉಪ್ಪಾರ, ಶಿವಶಂಕರ್ ಬಿ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಸನ್ಮಾನದ ಸಂದರ್ಭದಲ್ಲಿ ಮಾತನಾಡಿದವರು, ಪತ್ರಕರ್ತರು ಸಮಾಜದ ಕಣ್ಣಾಗಿ, ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿ, ಬಾಬುರಾವ ಯಡ್ರಾಮಿ ಮತ್ತು ರಾಜಕುಮಾರ ಉದನೂರ ಅವರ ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭಹಾರೈಸಿದರು.
