ಡಿ.ವೈ.ಎಸ್‌.ಪಿ. ಹುದ್ದೆಗೆ ಮುಂಬಡ್ತಿ ಪಡೆದ ಸೋಮಲಿಂಗ ಕಿರದಳಿ ಅವರಿಗೆ ಜಿಲ್ಲಾ ಮಾದಿಗ ಸಮಾಜದಿಂದ ಸನ್ಮಾನ

ಡಿ.ವೈ.ಎಸ್‌.ಪಿ. ಹುದ್ದೆಗೆ ಮುಂಬಡ್ತಿ ಪಡೆದ ಸೋಮಲಿಂಗ ಕಿರದಳಿ ಅವರಿಗೆ ಜಿಲ್ಲಾ ಮಾದಿಗ ಸಮಾಜದಿಂದ ಸನ್ಮಾನ

ಡಿ.ವೈ.ಎಸ್‌.ಪಿ. ಹುದ್ದೆಗೆ ಮುಂಬಡ್ತಿ ಪಡೆದ ಸೋಮಲಿಂಗ ಕಿರದಳಿ ಅವರಿಗೆ ಜಿಲ್ಲಾ ಮಾದಿಗ ಸಮಾಜದಿಂದ ಸನ್ಮಾನ

ಕಲಬುರಗಿ: ಪಿ.ಐ. ಹುದ್ದೆಯಿಂದ ಡಿವೈಎಸ್ಪಿ ಹುದ್ದೆಗೆ ಮುಂಬಡ್ತಿ ಪಡೆದ ದಕ್ಷ ಪೊಲೀಸ್ ಅಧಿಕಾರಿ ಸೋಮಲಿಂಗ ಕಿರದಳಿ ಅವರನ್ನು ಜಿಲ್ಲಾ ಮಾದಿಗ ಸಮಾಜದ ಮುಖಂಡರು ನಗರದಲ್ಲಿ ಭಾನುವಾರ ಸನ್ಮಾನಿಸಿದರು.

ಸಮಾರಂಭದಲ್ಲಿ ಸಮಾಜದ ನಾಯಕರಾದ ಮಲ್ಲಿಕಾರ್ಜುನ ಜಿನಕೇರಿ, ಲಿಂಗರಾಜ ತಾರಫೈಲ್, ಶಿವಪುತ್ರ ನಾಗನಹಳ್ಳಿ, ಶ್ರೀಮಂತ ಭಂಡಾರಿ, ಪ್ರದೀಪ ಬಾಚನಾಳ, ರಾಜು ತರಫೈಲ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಸಮಾಜದವರು ಮಾತನಾಡಿ, “ಸೋಮಲಿಂಗ ಕಿರದಳಿ ಅವರ ಸೇವಾ ನಿಷ್ಠೆ, ಶಿಸ್ತು ಹಾಗೂ ಜನಸೇವೆಯ ಬಗ್ಗೆ ಹೊಂದಿರುವ ಬದ್ಧತೆ ಅವರಿಗೆ ಈ ಮುಂಬಡ್ತಿಗೆ ಕಾರಣವಾಗಿದೆ. ಜಿಲ್ಲೆಗೆ ಇವರು ಹೆಮ್ಮೆ” ಎಂದು ಪ್ರಶಂಸಿಸಿದರು.

ಸನ್ಮಾನ ಸ್ವೀಕರಿಸಿದ ಸೋಮಲಿಂಗ ಕಿರದಳಿ, ಸಮಾಜದ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿ, “ಮುಂದಿನ ದಿನಗಳಲ್ಲೂ ಸದಾಚಾರ, ನೈತಿಕತೆ ಮತ್ತು ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜದ ಅನೇಕ ಸದಸ್ಯರು ಭಾಗವಹಿಸಿದ್ದರು.