ಸನ್ಮಾರ್ಗದತ್ತ ನಡೆದಾಗ ಜೀವನದಲ್ಲಿ ನೆಮ್ಮದಿ” : ಪೂಜ್ಯ ಡಾ. ರಾಜಶೇಖರ ಶಿವಾಚಾರ್ಯರು

ಸನ್ಮಾರ್ಗದತ್ತ ನಡೆದಾಗ ಜೀವನದಲ್ಲಿ ನೆಮ್ಮದಿ” : ಪೂಜ್ಯ ಡಾ. ರಾಜಶೇಖರ ಶಿವಾಚಾರ್ಯರು

ಕಲಬುರ್ಗಿ, ಅ.25: “ಸನ್ಮಾರ್ಗದತ್ತ ನಡೆದಾಗ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ. ಮನುಷ್ಯನ ಜೀವನದಲ್ಲಿ ಒಳ್ಳೆಯ ರೀತಿಯಲ್ಲಿ ನಡೆದುಕೊಂಡಾಗ ಸ್ವಾರ್ಥಕತೆ ಮಾಯವಾಗಿ ಶಾಂತಿ ನೆಮ್ಮದಿ ಸ್ಥಾಪನೆ ಆಗುತ್ತದೆ” ಎಂದು ಚವದಾಪೂರಿ ಹಿರೇಮಠದ ಪೂಜ್ಯ ಶ್ರೀ ಡಾ. ರಾಜಶೇಖರ ಶಿವಾಚಾರ್ಯರು ಹೇಳಿದರು.

ಅವರು ಕಲಬುರ್ಗಿಯ ಗೋಕುಲ್ ನಗರದ ಜೆಡಿಎ ಲೇಔಟ್, ಫಿಲ್ಟರ್ ಬೇಡ್ ರಸ್ತೆಯಲ್ಲಿರುವ ಶ್ರೀ ಶಿವ ಮಂದಿರ ಟ್ರಸ್ಟ್ ಹಾಗೂ ಅಕ್ಕ-ತಂಗಿಯರ ದೇವಾಲಯ ವತಿಯಿಂದ ನಿರ್ಮಿಸಲಾದ ನೂತನ ಶ್ರೀ ಶಿವ ಮಂದಿರ , ಅಕ್ಕಾ-ತಂಗಿ ದೇವಾಲಯದ ಆವರಣದಲ್ಲಿ ಸಂಸ್ಕೃತಿಕ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಈ ದೇವಾಲಯದ ಸಾಂಸ್ಕೃತಿಕ ಭವನವನ್ನು ಶ್ರೀಮದ್ ನಿ.ಪ್ರ.ಸ್ವ. ಗುರುಪಾದಲಿಂಗ ಮಹಾಶಿವಯೋಗಿಗಳು (ಮುತ್ಯಾನ ಬಬಲಾದ) ಅವರ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು.

ಶ್ರೀ ನಿವಾಸ ಸರಡಗಿಯ ಷ.ಬ್ರ.ಡಾ ರೇವಣಸಿದ್ದ ಶಿವಾಚಾರ್ಯರು ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡುತ್ತಾ, “ಇಂದಿನ ದಿನಮಾನಗಳಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಕಷ್ಟವಾಗಿದೆ. ಇಂತಹ ಅಕ್ಕ-ತಂಗಿ ಸಂಸ್ಕೃತಿಕ ಭವನಗಳು ಸಮಾಜದ ಧಾರ್ಮಿಕ ಮತ್ತು ಸಾಂಸ್ಕೃತಿಕ ಏಕತೆಯನ್ನು ಬಲಪಡಿಸುತ್ತವೆ,”ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶರಣಬಸಪ್ಪ ಪಾಟೀಲ ಅಷ್ಟಗಿ (ಅಧ್ಯಕ್ಷರು, ಶ್ರೀ ಶಿವಮಂದಿರ ಟ್ರಸ್ಟ್ ಹಾಗೂ ಅಕ್ಕತಂಗಿಯರ ದೇವಾಲಯ) ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಮಾಜ ಸೇವಕಿ ಜಯಶ್ರೀ ಮತ್ತಿಮಡು,ಶ್ರೀ ಪ್ರವೀಣ ಪಾಟೀಲ ಹರವಾಳ (ಅಧ್ಯಕ್ಷರು, ಜೆಸ್ಕಾಂ ಕಲಬುರ್ಗಿ),ಶ್ರೀ ದಿಗಂಬರ ನಾಡಗೌಡ (ಸದಸ್ಯರು, ಮಹಾನಗರ ಪಾಲಿಕೆ ಕಲಬುರ್ಗಿ),ಶ್ರೀ ಮಂಜುನಾಥ್ ಹವಾಲ್ದಾರ (ಎಇಇ, ಲೋಕೋಪಯೋಗಿ ಇಲಾಖೆ),ಶ್ರೀ ರಾಮಚಂದ್ರ ಅವರಳ್ಳಿ (ಬಿಜೆಪಿ ಮುಖಂಡರು), ಶಿವಾನಂದ ಮಾಳಿಗಿ, ಶರಣು ಆಲಗೂಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಿವಾನಂದ ರಾಠೋಡ (ಉಪಾಧ್ಯಕ್ಷರು, ಶ್ರೀ ಶಿವಮಂದಿರ ಟ್ರಸ್ಟ್),ಸಹದೇವ ಬಿರಾದಾರ (ಕಾರ್ಯದರ್ಶಿ),ರೇವಪ್ಪ ಸೊರಡೆ (ಉದ್ಯಮಿ) ಸೇರಿದಂತೆ ಟ್ರಸ್ಟ್‌ನ ಸದಸ್ಯರು, ಬಡಾವಣೆಯ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಶಿವಶಂಕರ ಬಿರಾದಾರ ಹಾಗೂ ಕಲಾ ತಂಡದವರಿಂದ ಮನೋಹರ ಸಂಗೀತ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಪರಮೇಶ್ವರ ಚೀಲಿ ವರನಾಳ ಅವರು ನಿರ್ವಹಿಸಿದರು.

ಅಂತ್ಯದಲ್ಲಿ ಧನ್ಯವಾದ ಪ್ರದರ್ಶನ ಮತ್ತು ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಯಿತು.