ಹೈದರಾಬಾದ ಕರ್ನಾಟಕ ವಿಮೋಚನಾ ಹೋರಾಟಗಾರರ ಸ್ಮರಣಾರ್ಥ ಬೃಹತ್ ಅವಲೋಕನಾ ಸಮಾವೇಶ

ಹೈದರಾಬಾದ ಕರ್ನಾಟಕ ವಿಮೋಚನಾ ಹೋರಾಟಗಾರರ ಸ್ಮರಣಾರ್ಥ ಬೃಹತ್ ಅವಲೋಕನಾ ಸಮಾವೇಶ

ಹೈದರಾಬಾದ ಕರ್ನಾಟಕ ವಿಮೋಚನಾ ಹೋರಾಟಗಾರರ ಸ್ಮರಣಾರ್ಥ ಬೃಹತ್ ಅವಲೋಕನಾ ಸಮಾವೇಶ

ಕಲಬುರಗಿ : ಅ.೨೬.ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರ ಅಭಿಮಾನಿ ಬಳಗದ ವತಿಯಿಂದ ದಿನಾಂಕ ೩೧ನೇ ಗುರುವಾರದಂದು ಶ್ರೀ ಶರಣಬಸವೇಶ್ವರ ದೇವಸ್ಥಾನದ ಶಿವಾನುಭವ ಮಂಟಪದಲ್ಲಿ ಬೆಳಿಗ್ಗೆ ೧೧.೦೦ ಗಂಟೆಗೆ ಸರ್ದಾರ ವಲ್ಲಭಬಾಯಿ ಪಟೇಲರವರ ೧೪೯ನೇ ಜನ್ಮ ದಿನೋತ್ಸವದ ಅಂಗವಾಗಿ ಹೈದರಾಬಾದ ಕರ್ನಾಟಕ ವಿಮೋಚನಾ ಹೋರಾಟಗಾರರ ಸ್ಮರಣಾರ್ಥ ಬೃಹತ್ ಅವಲೋಕನಾ ಸಮಾವೇಶ ನಡೆಯಲಿದೆ ಎಂದು ಗಿರೀಶಗೌಡ ಇನಾಮದಾರ ತಿಳಿಸಿದ್ದಾರೆ. 

  ನಗರದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮದ ನೇತ್ರತ್ವವನ್ನು ಪೂಜ್ಯ ಮಾತೋಶ್ರೀ ಡಾ. ದ್ರಾಕ್ಷಾಯಿಣಿ ಎಸ್. ಅಪ್ಪಾ ರವರು ವಹಿಸಲಿದ್ದಾರೆ. ಅದೇ ರೀತಿಯಾಗಿ ಚೆನ್ನವೀರ ಶಿವಾಚಾರ್ಯರು ಹಾರಕೂಡ ಹಾಗೂ ಶ್ರೀನಿವಾಸ ಸರಡಗಿ, ರಾಜೇಶ್ವರ ಶೀವಾಚಾರ್ಯರು ತಡೋಳಾ ಹಾಗೂ ಅಭಿನವ ಸಿದ್ದಲಿಂಗ ಶೀವಾಚಾರ್ಯರು ಮುಗುಳನಾಗಾಂವ್ ಇವರು ಸಾನಿಧ್ಯ ವಹಿಸಲಿದ್ದಾರೆ. 

 ಹವಾ ಮಲ್ಲಿನಾಥ ನಿರಗುಡಿ ಇವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಮಾನ್ಯ ಶರಣಪ್ರಕಾಶ ಪಾಟೀಲ ಸಚಿವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಚಿವ ಈಶ್ವರ ಖಂಡ್ರೆಯವರು` ದಿ ಹಿಸ್ಟರಿ ಆಫ್ ಹೈದ್ರಾಬಾದ ಲಿಬ್ರೇಷನ್ ಸ್ಟçಗಲ್ (ಇಂಗ್ಲೀಷ ಪುಸ್ತಕ) ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸಚಿವ ಶರಣಬಸಪ್ಪ ದರ್ಶನಾಪೂರ ಅವರು ಹೋರಾಟಗಾರರ ಭಾವಚಿತ್ರ ಉದ್ಘಾಟಿಸಲಿದ್ದಾರೆ. ಶಶೀಲ್ ಜಿ. ನಮೋಶಿರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. 

 ಮಹಾಪೌರರಾದ ಯಲ್ಲಪ್ಪ ನಾಯಿಕೋಡಿ, ಶಾಸಕರುಗಳಾದ ಡಾ. ಅಜಯಸಿಂಗ್, ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮೂಡ, ಬಿ.ಜಿ. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

 ಮಾಜಿ ಶಾಸಕರು ದೊಡ್ಡಪ್ಪಗೌಡ ಪಾಟೀಲ ನರಿಬೋಳಿ, ಕೇದಾರಲಿಂಗಯ್ಯ ಹಿರೇಮಠ, ಸುರೇಶ ಸಜ್ಜನ್, ನಿತೀನ್ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ಶಿವರಾಜ ಪಾಟೀಲ ರದ್ದೇವಾಡಗಿ, ಬಸವರಾಜ ಪಾಟೀಲ ಕಮಲಾಪೂರ, ಚಂದ್ರಶೇಖರ್ ಪರಸರೆಡ್ಡಿ, ಎಸ್.ವಿ. ಮಠಪತಿ, ಅಶೋಕ ಗುರುಜಿ, ಬಾಳಾಸಾಹೇಬ ದೇಶಮುಖ, ಬಸವರಾಜ ನಾಯಕಲ್, ಮಲ್ಲಿನಾಥ ಪಾಟೀಲ ಕಾಳಗಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

 ಗೌರವ ಉಪಸ್ಥಿತಿ ರಾಮರಾವ ಕುಲಕರ್ಣಿ, ಭಗವಾನ್ ಹರಿಭಾಪುರಿ, ಭೀಮರಾವ ಕೊಟರಗಿ, ಸೀತಾರಾಮ ಚವ್ಹಾಣ, ಭೀಮಾಶಂಕರ ಕಾರಬಾರಿ ಗೌರವ ಉಪಸ್ಥಿತಿ ಇರಲಿದ್ದಾರೆ.  

{ ಕಲ್ಯಾಣ ಕಾಯಕ ರತ್ನ ಪ್ರಶಸ್ತಿ ಪುರಸ್ಕೃತರು :

ಬಸವರಾಜಪ್ಪ ಕಾಮರೆಡ್ಡಿ, ಶಿವಶರಣಪ್ಪ ಹಾಲೊಳ್ಳಿ, ಸಾಹೇಬಗೌಡ ಪಾಟೀಲ, ಹೆಚ್.ಎಸ್. ಬರಗಾಲಿ, ಭೂದೇವಿ ಗಂಗಾಧರ ನಮೋಶಿ, ಸುಮನ್ ಮಾನಾಜಿ, ಚೆನ್ನಪ್ಪ ಪರೂತೆ ಪ್ರಹ್ಲಾದ ಎಂ. ಮಟಮಾರಿ.}

 ಹೈದ್ರಾಬಾದ ಕರ್ನಾಟಕ ಹೋರಾಟಗಾರರ ಇತಿಹಾಸ ಕುರಿತು ಡಾ. ಎನ್.ಎಸ್. ಜಾಧವರವರು ಉಪನ್ಯಾಸ ನೀಡಲಿದ್ದಾರೆ. 

 ಅದೇ ರೀತಿಯಾಗಿ ಸ್ವಾತಂತ್ರö್ಯ ಹೋರಾಟಗಾರರಿಗೆ ಹಾಗೂ ಅವರ ಪರಿವಾರದವರಿಗೆ ಮತ್ತು ಮಾಜಿ ಯೋಧರಿಗೆ ವಿಶೇಷ ಗೌರವ ಸನ್ಮಾನಿಸಲಾಗುವುದು. ಅದೇ ರೀತಿಯಾಗಿ ೭೦೦ಕ್ಕೂ ಹೆಚ್ಚು ವಿಮೋಚನಾ ಹೋರಾಟಗಾರರ ಭಾವಚಿತ್ರಗಳ ಛಾಯಾಚಿತ್ರ ಪ್ರದರ್ಶನ ಜರುಗಲಿವೆ ಎಂದು ಹೇಳಿದರು. 

 ಸುದ್ದಿಗೋಷ್ಠಿಯಲ್ಲಿ ಆದೇಪ್ಪ ಸಿಕೇದ ವಿಶ್ವನಾಥ ಕೊಟ್ಟರಗಿ ಚಂದ್ರಕಾಂತ ಕಾಳಗಿ ಶಿವಾನಂದ ಮಠಪತಿ, ರಾಜು ಜೈನ, ಮಲ್ಲಿಕಾರ್ಜುನ ಕಲ್ಲಬೆನ್ನೂರ, ಮಲ್ಲಿನಾಥ ಪಾಟೀಲ ಕಾಳಗಿ ರವರು ಉಪಸ್ಥಿತರಿದ್ದರು.