ಹೇಮಲತಾ ಎಂ ಪತ್ತಾರ ಅವರನ್ನು ಶಾಸಕ ಅಲ್ಲಮಪ್ರಭು ಪಾಟೀಲ ಸನ್ಮಾನಿಸಿದರು
ಹೇಮಲತಾ ಎಂ ಪತ್ತಾರ ಅವರನ್ನು ಶಾಸಕ ಅಲ್ಲಮಪ್ರಭು ಪಾಟೀಲ ಸನ್ಮಾನಿಸಿದರು
ಕಲಬುರಗಿ: ವೃತ್ತಿಯಲ್ಲಿ ಶಿಕ್ಷಕರಾಗಿ ಮಕ್ಕಳಿಗೆ ಜ್ಞಾನ ಬೋಧನೆ ಮಾಡಿ ಇಂದು ವಯೋನಿವೃತ್ತಿ ಹೊಂದಿದ ಮುಖ್ಯಗುರು ಹೇಮಲತಾ ಎಂ ಪತ್ತಾರ ಅವರನ್ನು ನಗರದ ಕರುಣೇಶ್ವರ ನಗರದ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಶಾಸಕ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಮುಖಂಡರಾದ ಮನೋಹರ ಪೋದ್ದಾರ, ನೀಲಕಂಠರಾವ ಮೂಲಗೆ, ನಂದಕುಮಾರ ಮಾಲಿಪಾಟೀಲ, ದೇವೀಂದ್ರದೇಸಾಯಿ ಕಲ್ಲೂರ, ಎಂಬಿ ಅಂಗಡಿ, ಶ್ರೀಶೈಲ ಪಂಚಾಳ, ಬಸವರಾಜ ಬೂದಿಹಾಳ, ವಿಜಯಕುಮಾರ ಮಳ್ಳಿ, ಮಹೇಶಕುಮಾರ ಹೊಸೂರಕರ, ಕೇಶವರಾವ ಕಾಬಾ, ಭಗವಂತಪ್ಪಾ ಸೂತಾರ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.