ಅನುದಾನಿತ ಶಾಲಾ ಕಾಲೇಜುಗಳ ನೌಕರರ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಶಶೀಲ್ ಜಿ ನಮೋಶಿ
ಅನುದಾನಿತ ಶಾಲಾ ಕಾಲೇಜುಗಳ ನೌಕರರ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಶಶೀಲ್ ಜಿ ನಮೋಶಿ
ಇದೆ ಡಿಸೆಂಬರ್ 12 ರಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ಬೆಳಗಾವಿಯ ಸುವರ್ಣ ಸೌಧದ ಎದುರು ನಡೆಸಲು ಉದ್ದೇಶಿಸಿರುವ ಬೃಹತ್ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹೇಳಿದ್ದಾರೆ.
ಈಗಾಗಲೇ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ತನ್ನ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಎನ್ ಪಿ ಎಸ್ ರದ್ದುಗೊಳಿಸಿ ಹಳೆಯ ನಿಶ್ಚಿತ ಪಿಂಚಣಿ ನೀಡುತ್ತದೆ ಎಂದು ಹೇಳಿದ್ದರು. ಈ ಎಲ್ಲ ನೌಕರರ ಕುಟುಂಬದ ಮಾತ ಪಡೆದು ಅಧಿಕಾರಕ್ಕೆ ಬಂದು ಒಂದು ವರೆ ವರ್ಷಗಳು ಕಳೆದರೂ ಇವರು ನೀಡಿದ ಭರವಸೆ ಭರವಸೆಯಾಗಿಯೆ ಉಳಿದಿದೆ ಕೂಡಲೆ ರಾಜ್ಯ ಸರ್ಕಾರ ಜಿಪಿಎಸ್ ಜಾರಿಗೊಳಿಸಿ ಕೊಟ್ಟ ಮಾತಿನಂತೆನಡೆದುಕೊಳ್ಳಬೇಕು
ಒಂದು ವೇಳೆ ಓಪಿಎಸ್ ಜಾರಿ ವಿಳಂಬವಾದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವ ಎನ್ ಪಿ ಎಸ್ ಪಿಂಚಣಿಯನ್ನು ಯಥಾವತ್ತಾಗಿ ಅನುದಾನಿತ ನೌಕರರಿಗೆ ಜಾರಿಗೊಳಿಸಬೇಕು ನೇಮಕಾತಿ ಪ್ರಾಧಿಕಾರದ ವಂತಿಗೆಯನ್ನು ಆಡಳಿತ ಮಂಡಳಿಗಳ ಬದಲಾಗಿ ಸರ್ಕಾರಿ ನೌಕರರಿಗೆ ನೀಡುವಂತೆ ಸರ್ಕಾರವೇ ಭರಿಸಬೇಕು.
. ದಿನಾಂಕ 01-04-2006 ರ ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರ ಅನುದಾನರಹಿತ ಅವಧಿಯನ್ನು ಪರಿಗಣಿಸಲು ಅಡ್ಡಿಯಾಗಿರುವ 2014 ರ ವಿಧೇಯಕವನ್ನು ರದ್ದು ಪಡಿಸುವಂತೆ ನೌಕರರ ಪರವಾಗಿ ನ್ಯಾಯಲಯದ ತೀರ್ಪು ಬಂದಿದ್ದರು ಸರ್ಕಾರ ಅದರ ವಿರುದ್ಧ ಮತ್ತೆ ಮೇಲ್ಮನವಿ ಸಲ್ಲಿಸಿದ್ದು ನೌಕರರ ಪರವಾಗಿ ನೀಡಿರುವ ತೀರ್ಪನ್ನು ಗೌರವಿಸಿ ತಕ್ಷಣ ಮೇಲ್ಮನವಿ ಹಿಂತೆಗೆದು ಕೊಳ್ಳಬೇಕು. ಸರ್ಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ವಿಮಾ ಯೋಜನೆ ಜ್ಯೋತಿ ಸಂಜೀವಿನಿಯನ್ನು ಅನುದಾನಿತ ನೌಕರರಿಗೂ ವಿಸ್ತರಿಸಬೇಕು.ಕಳೆದ 22 ವರ್ಷಗಳಿಂದ ಅನುದಾನಿತ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ಇಲ್ಲಿಯವರೆಗೂ ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಿಲ್ಲ ಕೂಡಲೆ ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆಗೆ ಆದೇಶ ಹೊರಡಿಸಬೇಕು.ಸರಕಾರಿ ಶಾಲಾ ಕಾಲೇಜುಗಳು ಮತ್ತು ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ನೌಕರರ ಮಧ್ಯೆ ತಾರತಮ್ಯವಿರಬಾರದು ಎಂದು ಆಗ್ರಹಿಸಿದ್ದಾರೆ.