ಹಂತೀಯ ಹೊಡಿಬೇಕ ಸಂತಸ ಪಡಬೇಕ
ಹಂತೀಯ ಹೊಡಿಬೇಕ ಸಂತಸ ಪಡಬೇಕ ಹುಲಿಗೆಂಬ ಸೆಬುದಾ ನುಡಿಬೇಕ ನಮ್ಬಸವನ ಪಾದಕ್ಕ ಸೆರಣು ಮಾಡ್ಬೇಕ
ತಾಲೂಕಿನ ಇಟಗಾ ಕೆ ಗ್ರಾಮದ ಸಾಧು ಶಿವಲಿಂಗೇಶ್ವರ 66 ನೇ ಜಾತ್ರಾ ಮಹೋತ್ಸವದ ಅಂಗವಾಗಿ ಸಾಧು ಶಿವಲಿಂಗೇಶ್ವರ ಪುರಾಣ ನಡೆಯುತ್ತಿದೆ. ಶಿವಲಿಂಗೇಶ್ವರ ಕೃಷಿ ಕಾಯಕದ ನೆನಪಿಗಾಗಿ ಪುರಾಣದ 7 ನೇ ದಿನವಾದ ಸೋಮವಾರ ಬಿತ್ತುವ ಮತ್ತು ರಾಶಿಯ ಕಣ ಮಾಡಿ, ನಡುಮೇಟಿ ನಿಲ್ಲಿಸಿ ಹಂತಿ ಮಾಡಿ, ಸಂಭ್ರಮದಿಂದ ರಾಶಿ ಮಾಡಲಾಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀನಿವಾಸ ಸರಡಗಿಯ ಡಾ||ರೇವಣಸಿದ್ಧ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ
ಅಂದು ಸಾಧು ಶಿವಲಿಂಗೇಶ್ವರರು ಕೃಷಿ ಕೆಲಸಕ್ಕೆ ಬಳಸುತ್ತಿದ್ದಂತಹ ಕುಂಟೆ, ನೇಗಿಲು, ಕುಡ, ಕೂರಿಗೆ, ನೊಗ, ಹಗ್ಗ, ಬಾರಕೋಲು, ಕುಡುಗೋಲು ಸೇರಿದಂತೆ ವಿವಿಧ ಸಲಕರಣೆಗಳನ್ನು ಪುರಾಣದ ಹಂತಿಯಲ್ಲಿ ಬಳಸುವುದನ್ನು ಮುಂದಿನ ಯುವ ಪೀಳಿಗೆಗೆ ಹಿಂದಿನ ನಮ್ಮ ಹಿರಿಯರು ಕೃಷಿ ಕಾಯಕವನ್ನು ಮರು ಕರುಳಿಸುವಂತಿತ್ತು
ಆಧುನಿಕ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆವ್ಯಾಪಕವಾಗಿದ್ದು, ಹಳೆಯ ಕೃಷಿ ಸಾಮಗ್ರಿಗಳು ಕ್ಷೀಣಿಸಿವೆ. ಹೀಗಾಗಿ, ಹಂತಿಯಲ್ಲಿ ಬಳಸಿದ್ದ ಸಾಂಪ್ರದಾಯಿಕ ಕೃಷಿ ಸಾಮಗ್ರಿಗಳು ಭಕ್ತರನ್ನು ಬಹುವಾಗಿ ಆಕರ್ಷಿಸಿದವು ಎಂದರು
ದೇವಸ್ಥಾನದ ಆವರಣದಲ್ಲಿ ಜೋಳದ ಕಣ ನಿರ್ಮಿಸಲಾಯಿತು. ಜೋಳದ ಗೂಡು ಮುರಿದು, ಜೋಳದ ತೆನೆಗಳು ಗುಡ್ಡೆಹಾಕಿದ ಮಾದರಿಯಲ್ಲಿ ಭಕ್ತರು ತಂದಿದ್ದ ಜೋಳದ ಕಾಳುಗಳನ್ನು ಸುರಿಯಲಾಯಿತು. ಈ ವೇಳೆ ರೈತರು, ಭಕ್ತರು ಹಂತಿ ಪದಗಳನ್ನು ಮನದುಂಬಿ ಹಾಡುತ್ತಾ ಕಣ್ಮರೆಯಾದ ಗ್ರಾಮೀಣ ಸೊಗಡಿನ ಹಂತಿಯ ರಾಶಿಯನ್ನು ಮರುಸೃಷ್ಟಿಸಿದರು.
ಕಣದ ಸುತ್ತಲು ನೇರದಿದ್ದ ಭಕ್ತರು ಹಂತಿಯನ್ನು ನೋಡಿ ಸಂತಸ ಪಟ್ಟರು. ಕೆಲವರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು, ಗೆಳೆಯರೊಂದಿಗೆ ದೃಶ್ಯಗಳನ್ನು ಹಂಚಿಕೊಂಡರು
ಹಂತಿ ಹೊಡೆಯುವ ಕಾರ್ಯಕ್ರಮದಲ್ಲಿ ಕಲ್ಯಾಣ ನಾಡಿನ ಖ್ಯಾತ ಪುರಾಣಿಕರಾದ ಸುಂಟನೂರ ಹಿರೇಮಠದ ಶ್ರೀ ಬಂಡಾಯ್ಯ ಶಾಸ್ತ್ರಿಗಳು ಸಂಗೀತಗಾರರಾದ ಕಲ್ಯಾಣಕುಮಾರ ಗವಾಯಿಗಳು, ತಬಲವಾದಕರಾದ ಬಸವರಾಜ ಚಲಗೇರಿ, ಗ್ರಾಮಸ್ಥರಾದ ಶಿವರುಮಾರ ಹಿರೇಮಠ,ಶಿವಪುತ್ರ ಕೆಂಭಾವಿ, ಸುಭಾಷ ಮುಕರಂಬಿ, ಶರಣಬಸಪ್ಪ ಮೀಣಜಗಿ,ರಮೇಶ ಪುಷ್ಪದ, ವಿಶ್ವರಾಧ್ಯ ಸೇವಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಸೇರಿದಂತೆ ಇನ್ನು ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು