ನವಜೀವನ ನಗರದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ನವಜೀವನ ನಗರದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ನವಜೀವನ ನಗರದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕಲಬುರಗಿ : ದಕ್ಷಿಣ ಮತಕ್ಷೇತ್ರದ ವಾರ್ಡ ನಂ. 54.ರಲ್ಲಿ ಬರುವ ನವಜೀವನ ನಗರದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ 53.ಲಕ್ಷ ರೂ. ವೆಚ್ಚದ್ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಮಂಗಳವಾರ ಚಾಲನೆ ನೀಡಿದರು. ನಂತರ ಶಾಸಕರು ಮಾತನಾಡಿ ಬಹಳ ದಿನಗಳಿಂದ ನಿರ್ಲಕ್ಷ್ಯ ಒಳಗಾದ ಈ ರಸ್ತೆಗಳನ್ನು ಪ್ರಾರಂಭಿಸುತ್ತಿರುವುದು ಸಂತೋಷ ತಂದಿದೆ ಎಂದರು. ಈ ಕಾಲೋನಿಯ ರಸ್ತೆಗಳ ಕುರಿತು ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಯ ನಂತರ ಈ ರಸ್ತೆಗಳನ್ನು ನಾನು ಖುದ್ದಾಗಿ ವೀಕ್ಷಿಸಿದ್ದೆ ಎಂದು ಕೂಡ ಉಲ್ಲೇಖಿಸಿದರು. ನವಜೀವನ ನಗರದ ಹಸಿರು ಉದ್ಯಾನ ಸಾರ್ವಜನಿಕ ಉದ್ಯಾನವನ್ನು ಅಭಿವೃದ್ಧಿ ಪಡಿಸುವ ಬಗ್ಗೆ ನಿವಾಸಿಗಳಿಗೆ ಭರವಸೆಯನ್ನು ನೀಡಿದರು. ರಸ್ತೆಯ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ನಿಂಗಮ್ಮ ಕಟ್ಟಿಮನಿ, ನವ ಜೀವನ ನಗರದ ನಿವಾಸಿಗಳಾದ ಶಾಂತಪ್ಪ ಜಾದವ್, ವಿಶ್ವರೂಪ, ನಿಂಗನಗೌಡ ಪಾಟೀಲ್, ಅಶೋಕ್ ಪಾಟೀಲ್, ಅಂಬಯ್ಯ ಗುತ್ತೇದಾರ್, ಬಸವರಾಜ್ ಪಾಟೀಲ್, ಅಭಿಲಾಶ್ ಹೇಮನೂರ್, ಸಂಜೀವ್ ಬೋದ್ದಾರ್, ರೋಷನ್ ರಾಯ್ಕರ್ ಭೀಮ್ ಸೇನ್ ಸಿಂಗ್, ಸಿದ್ದಣ್ಣ ನಾಲವಾರ,ಸುಭಾಷ್ ಗುತ್ತೇದಾರ್ ಮೋಹನ್ ರಾವ್ ಕುಲಕರ್ಣಿ ದಿಗಂಬರ ಠಾಕೂರ್, ಜೋಸೆಫ್, ಮೇಘನಾ ದೇಶಮುಖ, ದಮಯಂತಿ ಹೇಮನೂರ್, ಚಂದ್ರಕಲಾ ಗುಡ್ಡ, ಕಾಂಗ್ರೆಸ್ ಮುಖಂಡರಾದ ಲಾಲ ಅಹಮ್ಮದ್ ಬಾಂಬೆಸೇಠ್, ಕೆಂಚಪ್ಪ, ಲ್ಯಾಂಡ್ ಆರ್ಮಿಯ ಜೂನಿಯರ್ ಇಂಜಿನಿಯರ್ ಸಭಾ ನಜೀರ್, ಮೊಹಮ್ಮದ್ ಅಫೋರ್, ಗುತ್ತಿಗೆದಾರ ಶರಣ ಮಹಾಶೇಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.