ಡಾ. ರಮೇಶ್ ಮೂಲಗೆಯವರಿಗೆ "ಆದರ್ಶ ಸ್ವಾಭಿಮಾನಿ ಕನ್ನಡಿಗ "ಪ್ರಶಸ್ತಿ ಪ್ರಧಾನ
ಡಾ. ರಮೇಶ್ ಮೂಲಗೆಯವರಿಗೆ "ಆದರ್ಶ ಸ್ವಾಭಿಮಾನಿ ಕನ್ನಡಿಗ "ಪ್ರಶಸ್ತಿ ಪ್ರಧಾನ
ಉದಗೀರದ ಮಹಾರಾಷ್ಟ್ರ ಉದಯಗಿರಿ ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ್ ಮೂಲಗೆಯವರು
" ಗಡಿನಾಡು ಕನ್ನಡಿಗ "ಎಂದೇ ಖ್ಯಾತಿ ಪಡೆದಿದ್ದಾರೆ. ಅವರು ಮಹಾರಾಷ್ಟ್ರ ನೆಲದಲ್ಲಿ ನೆಲೆಸಿ ಕನ್ನಡ ಭಾಷೆಯ ಬೆಳವಣಿಗೆಗಾಗಿ ಹಗಲಿರು ಶ್ರಮಿಸುತ್ತಿದ್ದಾರೆ, ಜೊತೆಗೆ ಕನ್ನಡ -ಮರಾಠಿ ಭಾಷೆ ಬಾಂಧವ್ಯ ಬೆಸೆಯುವ ನಿಟ್ಟಿಗಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸ್ರಜನಶೀಲ ಬರಹಗಾರರಾಗಿ, ಸಂಶೋಧಕರಾಗಿ ,ಮಾರ್ಗದರ್ಶಕರಾಗಿ, ಸಾಹಿತಿಗಳಾಗಿ, ಕಲಾವಿದರಾಗಿ, ವಿದ್ವತ್ಪೂರ್ಣ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುವುದರ ಜೊತೆ ಜೊತೆಗೆ 20 ಪುಸ್ತಕಗಳು 40 ಸಂಶೋಧನಾ ಲೇಖನಗಳು ಪ್ರಕಟಿಸಿ ಓದುಗರ ಕೈಯಲ್ಲಿಟ್ಟಿದ್ದಾರೆ. ಅಲ್ಲದೆ ರಾಜ್ಯ , ರಾಷ್ಟ್ರ ಮಟ್ಟದ ವಿಚಾರ ಸಂಕೀರಣ,ಸಮ್ಮೇಳನ ಗಳಂತಹ ಹಲವಾರು ಕಾರ್ಯಕ್ರಮಗಳು ಆಯೋಜನೆ ಮಾಡಿದ್ದಾರೆ. ಗಡಿ ಸಮಸ್ಯೆ, ಕನ್ನಡ ಭಾಷಯ ಬಗ್ಗೆ ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಪನ್ಯಾಸ ಮಂಡಿಸಿರುತ್ತಾರೆ.
ಮೂಲಗೆಯವರು ಮಹಾರಾಷ್ಟ್ರ ಗಡಿಯಲ್ಲಿ ಕನ್ನಡ ನಾಡು-ನುಡಿ ಭಾಷೆ ,ಕಲೆ ಸಾಹಿತ್ಯ ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ,ಕರ್ನಾಟಕ ಸರ್ಕಾರ ," ಕರ್ನಾಟಕ ಗಡಿ ಅಭಿವ್ರದ್ದಿ ಪ್ರಾಧಿಕಾರ" ಬೆಂಗಳೂರು ಹಾಗೂ ಮಾರಾಠವಾಡ ಸಾಂಸ್ಕೃತಿಕ ಸಂಘ ಸಂಭಾಜಿ ನಗರ ಔರಂಗಬಾದ್ ಆಯೋಜಿಸಿದ ಕರ್ನಾಟಕ 50ರ ಸಂಭ್ರಮದ ಕಾರ್ಯಕ್ರಮದಲ್ಲಿ ದಿನಾಂಕ 1- 12 - 2024 ರಂದು
"ಆದರ್ಶ ಸ್ವಾಭಿಮಾನಿ ಕನ್ನಡಿಗ "ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸೋಮಣ್ಣ ಬೇವಿನಮರದ ಹಾಗೂ ಕಾರ್ಯದರ್ಶಿ ಶ್ರೀ ಪ್ರಕಾಶ್ ಮತ್ತಿಹಳ್ಳಿ ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಔರಂಗಾಬಾದ್ ಕಮಿಷನರ್ ಆದ ಶ್ರೀ ಶ್ರೀಕಾಂತ ಜಿ ಹಾಗೂ ಶ್ರೀನಿವಾಸ್ ತೆಲಂಗ ಧರ್ಮೇಂದ್ರ ಪೂಜಾರಿ , ಮಾಜಿ ಲೋಕಸಭಾ ಸದಸ್ಯರಾದ ಚಂದ್ರಕಾಂತ್ ಮುಂತಾದವು ಉಪಸ್ಥಿತರಿದ್ದರು.
ಕರ್ನಾಟಕ ಗಡಿ ಅಭಿವ್ರದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಬೇವಿನ ಮರದವರು ಡಾ. ರಮೇಶ್ ಮೂಲಗೆ ಅವರು ಮಹಾರಾಷ್ಟ್ರದಲ್ಲಿನ ಕನ್ನಡ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಪ್ರಾಧಿಕಾರದ ಅಧ್ಯಕ್ಷ ಶ್ರೀ ಸೋಮಣ್ಣನವರು ಮಾತನಾಡುತ್ತಾ ಕರ್ನಾಟಕ 50ರ ಸಂಭ್ರಮ ಬಹಳ ಅದ್ದೂರಿಯಾಗಿ ಆಚರಿಸುವುದು ರೊಂದಿಗೆ ಇದೇ ವರ್ಷ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರ ಶ್ರೀ ಕ್ಷೇತ್ರ ದಾನಮ್ಮ ದೇವಿ ಕ್ಷೇತ್ರದಲ್ಲಿ ಈ 50ರ ಸಂಭ್ರಮ ಹಾಗೂ ಹೊರನಾಡು ಕನ್ನಡಿಗರ ಸಮಾವೇಶ ಬಹಳ ಅದ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು. ಸದ್ಯ ಛತ್ರಪತಿ ಸಂಭಾಜಿ ನಗರದಲ್ಲಿ ಆಚರಿಸುತ್ತಿರುವುದು ಮನಸ್ಸಿಗೆ ಆನಂದ ತಂದಿದೆ .ಮಹಾರಾಷ್ಟ್ರ ಸೆರಿದಂತೆ ಆಂಧ್ರಪ್ರದೇಶ ತೆಲಂಗಾಣ ಕೇರಳ ತಮಿಳುನಾಡು ರಾಜ್ಯಗಳಲ್ಲಿ ಕರ್ನಾಟಕ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಂಡು ಅಲ್ಲಿಯ ಕನ್ನಡಿಗರಿಗೆ ಹುರಿದುಂಬಿಸುತ್ತಿದ್ದೇವೆ. ಕನ್ನಡಿಗರ ಸಮಸ್ಯೆಗಳನ್ನು ಬಗೆಹರಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ನುಡಿದರು.
ಪ್ರಾಧಿಕಾರದ ಕಾರ್ಯದರ್ಶಿ ಶ್ರೀ ಪ್ರಕಾಶ್ ಮತ್ತಿ ಹಳ್ಳಿಯವರು ಮಾತನಾಡುತ್ತ ಒಳನಾಡೇ ಇರಲಿ ಹೊರನಾಡೆ ಇರಲಿ ಗಡಿನಾಡೆ ಇರಲಿ ನಾವು ಯಾವುದೇ ರೀತಿಯ ಭೇದ ಭಾವವನ್ನು ಮಾಡದೆ ಕನ್ನಡ ಭಾಷೆ ಬಲ್ಲವರು ಎಲ್ಲರೂ ನಮ್ಮ ಕನ್ನಡಿಗರೇ ನಮ್ಮವರ ಸಮಸ್ಯೆಗಳಿಗೆ ನಾವು ಸದಾ ಸ್ಪಂದಿಸುತ್ತೇವೆ. ಪರಿಹಾರವನ್ನು ನೀಡುತ್ತಿರುತ್ತೇವೆ ಎಂದು ಹೇಳಿದರು.
ಇಂತಹ ಕಾರ್ಯಕ್ರಮಗಳನ್ನು ನಡೆಸಲು ಕರ್ನಾಟಕ ಗಡಿ ಪ್ರಾಧಿಕಾರ ಸಹಕಾರ ನೀಡುತ್ತದೆ ಈ ಕಾರ್ಯಕ್ರಮಕ್ಕೆ ಎಲ್ಲರೂ ಮುಂದಾಗಬೇಕು ಎಂದರು.
ಛತ್ರಪತಿ ಸಂಭಾಜಿ ನಗರದ ಕಮಿಷನರ್ ಆದ ಶ್ರೀ ಶ್ರೀಕಾಂತ ಜಿ ಅವರು ಕನ್ನಡ ಅದು ಒಂದು ಭಾಷೆ ಅದರಲ್ಲಿ ಯಾವುದೇ ಜಾತಿ ಮತ ಪಂಥ ಧರ್ಮ ಎಂಬ ಭೇದಸಲ್ಲದು ಎಲ್ಲರೂ ಒಗ್ಗಟ್ಟಾಗಿ ಕನ್ನಡಮ್ಮನ ಹಬ್ಬವನ್ನು ಮಹಾರಾಷ್ಟ್ರದಲ್ಲಿ ಆಚರಿಸುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ನುಡಿದರು.
ಡಾ; ರಮೇಶ್ ಮೂಲಗೆ ಅವರು ಮಾತನಾಡುತ್ತಾ ಮಾಹಾರಾಷ್ಟ. ಕನ್ನಡಿಗರ ಸಮಸ್ಯೆಗಳನ್ನು ಒಂದೊಂದಾಗಿ ಅಧ್ಯಕ್ಷರ ಮುಂದೆ ಹೇಳಿದರು ಈ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಮಾಡಬೇಕೆಂದು ಒತ್ತಾಯ ಮಾಡಿದರು.
ಅಲ್ಲಿಯ ಮಾಜಿ ಮಿನಿಸ್ಟರ್ ಆದ ಶ್ರೀ ಚಂದ್ರಕಾಂತ್ ಅವರು ಮಾತನಾಡಿ ಕನ್ನಡಿಗರ ಜೊತೆ ಸದಾ ಇದ್ದೇವೆ ಎಂದು ಹುರಿ ತುಂಬಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಾನಪದ ಕಲಾವಿದರಿಂದ ಕಲಾ ಪ್ರದರ್ಶನ ನಡೆಯಿತು.
ಧರ್ಮೇಂದ್ರ ಪೂಜಾರಿ ಸ್ವಾಗತಿಸಿದರು. ಶ್ರಿನಿವಾಸ ತೆಲಂಗ ಅವರು ವಂದಿಸಿದರು. ಸಂಗೀತಾ ಕಂತಿ ಕಲಬುರಗಿ ಇವರು ನಿರೂಪಣೆ ಮಾಡಿದರು.