ಸರ್ ಸಿ. ವಿ. ರಾಮನ್ ಪ್ರತಿಯೊಬ್ಬ ಭಾರತೀಯರ ಹೆಮ್ಮೆಯ ಪ್ರತೀಕ : ಸುಗುಣಾ ಕೊಳಕೂರ.

ಸರ್ ಸಿ. ವಿ. ರಾಮನ್ ಪ್ರತಿಯೊಬ್ಬ ಭಾರತೀಯರ ಹೆಮ್ಮೆಯ ಪ್ರತೀಕ : ಸುಗುಣಾ ಕೊಳಕೂರ.

ಸರ್ ಸಿ. ವಿ. ರಾಮನ್ ಪ್ರತಿಯೊಬ್ಬ ಭಾರತೀಯರ ಹೆಮ್ಮೆಯ ಪ್ರತೀಕ : ಸುಗುಣಾ ಕೊಳಕೂರ.

ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಸರ್. ಸಿ. ವಿ. ರಾಮನ್. ಇವರು ಪ್ರತಿಯೊಬ್ಬ ಭಾರತೀಯರ ಹೆಮ್ಮೆ ಎಂದು ವಿಜ್ಞಾನ ಶಿಕ್ಷಕಿ ಸುಗುಣಾ ಕೊಳಕೂರ ಹೇಳಿದರು. ಅವರು ರಾವೂರ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಬಹುಮಾನ ವಿತರಣೆ ಕಾರ್ಯಕ್ರಮ ಕುರಿತು ಮಾತನಾಡಿದರು.

1928 ಫೆಬ್ರುವರಿ 28 ರಂದು ಭೌತಶಾಸ್ತ್ರದ ಅತಿದೊಡ್ಡ ಆವಿಷ್ಕಾರವಾದ ರಾಮನ್ ಪರಿಣಾಮವನ್ನು ಜಗತ್ತಿಗೆ ಪರಿಚಯಿಸಿದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. 1930 ರಲ್ಲಿ ರಾಮನ್ ಪರಿಣಾಮಕ್ಕೆ ನೊಬೆಲ್ ಪ್ರಶಸ್ತಿ ದೊರೆಯಿತು. ಪ್ರತಿಯೊಬ್ಬರೂ ವಿಜ್ಞಾನದಲ್ಲಿ ಆಸಕ್ತಿಯನ್ನು ಹೊಂದಬೇಕು. ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ಸಂಶೋಧನೆ ಕಡೆಗೆ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ ಎನ್ನುವ ಕೊರಗೂ ಇದೆ. ದೇಶದಲ್ಲಿ ಆವಿಷ್ಕಾರ. ಸಂಶೋಧನೆಗಳಿಗೆ ಪೂರಕ ವಾತಾವರಣವಿದೆ ಎಂದು ಹೇಳಿದರು.

1987 ಫೆಬ್ರುವರಿ 28 ರಿಂದ ದೇಶದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಈ ದಿನವನ್ನು ಒಂದು ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ವರ್ಷದ ಧ್ಯೇಯ ವಾಕ್ಯ : ವಿಕಸಿತ ಭಾರತಗಾಗಿ ವಿಜ್ಞಾನ ಮತ್ತು ಆವಿಷ್ಕಾರದಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು ಆಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ ವಿತರಣೆ ಮಾಡಲಾಯಿತು.

ಮುಖ್ಯಗುರು ವಿದ್ಯಾಧರ ಖಂಡಾಳ, ಶಿಕ್ಷಕರಾದ ಈಶ್ವರಗೌಡ ಪಾಟೀಲ್, ಗೀತಾ ಜಮಾದಾರ, ಸುವರ್ಣ ಮಠಪತಿ,ಗಂಗಪ್ಪ ಕಟ್ಟಿಮನಿ, ವಿಜಯಲಕ್ಷ್ಮಿ ಬಮ್ಮನಳ್ಳಿ, ಸಿದ್ದಲಿಂಗ ಬಾಳಿ, ಶರಣಬಸಪ್ಪ ಸಜ್ಜನ್, ರವಿ ಕಾಣೆಕರ್, ಶಿವಲೀಲಾ ಕಂಠಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.