ಮನುಷ್ಯತ್ವಕ್ಕೆ ಅರ್ಥ ಕಲ್ಪಿಸಿದ ಜಿಡಗಾ ಶ್ರೀಗಳು: ವಳಕೇರಿ
ಮನುಷ್ಯತ್ವಕ್ಕೆ ಅರ್ಥ ಕಲ್ಪಿಸಿದ ಜಿಡಗಾ ಶ್ರೀಗಳು: ವಳಕೇರಿ
ಕಲಬುರಗಿ: ಮಾನವೀಯ ಸಂಬಂಧಗಳು ಕಳಚಿ ಹೋಗುವ ಈ ಸಂದರ್ಭದಲ್ಲಿ ಮನುಷ್ಯತ್ವಕ್ಕೆ ಅರ್ಥ ಕಲ್ಪಿಸಿ ಮಾನವೀಯ ಬದುಕಿಗೆ ಹೊಸ ಆಯಾಮವನ್ನು ಕೊಟ್ಟಂತಹ ಶ್ರೇಯಸ್ಸು ಮುಗಳಖೋಡ -ಜಿಡಗಾ ಕೋಟನೂರು ಮಠದ ಪೂಜ್ಯ ಡಾ.ಮುರುಘರಾಜೇಂದ್ರ ಶ್ರೀಗಳಿಗೆ ಸಲ್ಲುತ್ತದೆ ಎಂದು ಪ್ರಗತಿಪರ ಚಿಂತಕ ಹಾಗೂ ನಂದಿಕುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪವನಕುಮಾರ ಬಿ ವಳಕೇರಿ ಅವರು ಹೇಳಿದರು.
ಕಲಬುರಗಿ ಹೊರ ವಲಯದ ವೃದ್ಧಾಶ್ರಮದಲ್ಲಿ ಮುಗಳಖೋಡ -ಜಿಡಗಾ, ಕೋಟನೂರ ಶ್ರೀಮಠದ ಶ್ರೀಗಳಾದ
ಡಾ. ಮುರುಘರಾಜೇಂದ್ರ ಅವರ 40ನೇ ಗುರುವಂದನ ಆಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಅವರು ಜಿಡಗಾ ಮಠದ ಪೂಜ್ಯರಾದ ಡಾ.ಮುರುಘರಾಜೇಂದ್ರ ಶಿವಯೋಗಿಗಳಿಗೆ "ಕರ್ನಾಟಕ ರತ್ನ" ಪ್ರಶಸ್ತಿಯನ್ನು ಸರಕಾರ ಕೊಟ್ಟು ಸನ್ಮಾನಿಸಬೇಕೆಂದು ಹೇಳಿದರು.
ಮಾರ್ಗಸೂಚಿ ವೃದ್ಧಾಶ್ರಮ ರುಕುಂ ತೋಲ ದರ್ಗಾ ರೋಡ್ ಕಲಬುರ್ಗಿ
ಶ್ರೀ ಶರಣು ಸುಬೆದಾರ, ಶ್ರೀಮತಿ ವಿಠ್ಠಬಾಯಿ ಪಾಟೀಲ,ಬಸವರಾಜ ಉಪ್ಪಾರ, ಶಖಿಲ ಉತ್ತನಾಳ, ಚನಪ್ಪ ಉಪಸ್ಥಿತರಿದ್ದರು