ಏಡ್ಸ್ ರೋಗದ ಬಗ್ಗೆ ಜಾಗ್ರತಿ ಮೂಡಿಸಿದ : ಡಾ. ಶರಣಗೌಡ ಪಾಟೀಲ

ಏಡ್ಸ್ ರೋಗದ ಬಗ್ಗೆ ಜಾಗ್ರತಿ ಮೂಡಿಸಿದ : ಡಾ. ಶರಣಗೌಡ ಪಾಟೀಲ

ಏಡ್ಸ್ ರೋಗದ ಬಗ್ಗೆ ಜಾಗ್ರತಿ ಮೂಡಿಸಿದ : ಡಾ. ಶರಣಗೌಡ ಪಾಟೀಲ 

ದಿನಾಂಕ 2-12-2024 

ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ

ಸಮುದಾಯ ವೈದ್ಯಶಾಸ್ತ್ರ ವಿಭಾಗದಿಂದ ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ವಿಶ್ವಕರ್ಮ ಶಿಕ್ಷಣ ಸಂಸ್ಥೆಯ ದೇವಾನಂದ ಪ್ರೌಢ ಶಾಲೆ, ರಜಾಪೂರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತರಭೇತಿ ಪಡೆಯುತ್ತಿರುವ ವೈದ್ಯ ವಿದ್ಯಾರ್ಥಿಗಳು ಸ್ಕಿಟ್ ಹಾಗೂ ಉಪನ್ಯಾಸ ಮೂಲಕ ಏಡ್ಸ್ ರೋಗದ ಬಗ್ಗೆ ಜಾಗ್ರತಿ ಮೂಡಿಸಿದರು.

ಮೆಡಿಕಲ್ ಕಾಲೇಜಿನ ಡೀನರಾದ ಡಾ. ಶರಣಗೌಡ ಪಾಟೀಲ ಮಾತನಾಡಿ 1988 ರಲ್ಲಿ WHO UN ಮೂಲಕ ವಿಶ್ವ ಏಡ್ಸ್ ದಿನಾಚರಣೆಯ ಆರಂಬಿಸಲಾಯಿತು. ಈ ವರ್ಷದ ದೇಹವಾಕ್ಯ Take the Rights Path: My Health, My Right. ಮುಖ್ಯ ಉದ್ದೇಶ ಏಡ್ಸ್ ಬಗ್ಗೆ ಜನಜಾಗ್ರತಿ ಮೂಡಿಸುವುದು, ತರತಮ ತೊಡೆದುಹಾಕಿ ಉತ್ತಮ ಮಾರ್ಗದಲ್ಲಿ ಕೊಂಡೈಯುವುದು. ನಮ್ಮ ಆರೋಗ್ಯ ನಮ್ಮ ಹಕ್ಕು ನೀಡುವುದು. ಏಡ್ಸ ರೋಗದಿಂದ ಇಲ್ಲಿಯ ವರೆಗೆ 48.7 ದಶಲಕ್ಷ ಜನರು ಸತ್ತಿದ್ದಾರೆ. ಈಗ ART ಚಿಕಿತ್ಸೆ ಮೂಲಕ ಸಾವಿನ ಪ್ರಮಾಣ ಕಡಿಮೆ ಆಗಿದೆ. ಈ ಎಲ್ಲ ಕೊಡುಗೆ ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲುತ್ತದೆ.

ಉಪಡೀನ ಡಾ ವಿಜಯಕುಮಾರ ಕಪ್ಪಿಕೇರಿ ಮಾತನಾಡಿ ಏಡ್ಸ್, HBsAg ಬಗ್ಗೆ ವೈದ್ಯರು ಜಾಗ್ರತೆಯಿಂದ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಸುನೀಲ ದೇಶಮುಖ, ಡಾ ಪಲ್ಲವಿ, ಡಾ ಶ್ರೀಶೈಲ ಘೂಳಿ, ಡಾ ಮುಬಿನ್, ಡಾ ರವಿ ಕುರ್ಲೆ, ಡಾ ಶಿವಾನಂದ, ಡಾ. ಶ್ವೇತಾ, ಶ್ರೀಮತಿ ದಿಪ್ತಿ ಬಂಡಕ, ಶ್ರೀಮತಿ ಶ್ರೀದೇವಿ ಪಾಟೀಲ, ಶ್ರೀಮತಿ ಸಮತಾ. ಸ್ನಾತಕೋತ್ತರ ವಿದ್ಯಾರ್ಥಿಗಳು, ವೈದ್ಯ ವಿದ್ಯಾರ್ಥಿಗಳು ಇದ್ದರು ಎಂದು ಡಾ ಶ್ರೀಶೈಲ ಘೂಳಿ ತಿಳಿಸಿದರು