೫ನೇ ಬಸವ ಜ್ಯೋತಿ ಮನೆಗೊಂದು ಅನುಭವ ಮಂಟಪ ಮಾಸಿಕ ಕಾರ್ಯಕ್ರಮ

೫ನೇ ಬಸವ ಜ್ಯೋತಿ ಮನೆಗೊಂದು ಅನುಭವ ಮಂಟಪ   ಮಾಸಿಕ  ಕಾರ್ಯಕ್ರಮ

೫ನೇ ಬಸವ ಜ್ಯೋತಿ ಮನೆಗೊಂದು ಅನುಭವ ಮಂಟಪ ಮಾಸಿಕ ಕಾರ್ಯಕ್ರಮ

ಡಾ! ಚನ್ನಬಸವ ಪಟ್ಟದ್ದೇವರ ಬದುಕು ಮತ್ತು ಜೀವನದ ಮೌಲ್ಯ ಅರಿಯುವುದು ಅತಿ ಮುಖ್ಯವಾದದ್ದು ಎಂದು ಡಾ! ಮಹಾದೇವಮ್ಮಾ ತಾಯಿ ನುಡಿದರು.

ಕಮಲನಗರ ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಪ್ರತಿ ತಿಂಗಳಲ್ಲಿ ನಡೆಯಲಿರುವ ಬಸವಜ್ಯೋತಿ ಕಾರ್ಯಕ್ರಮದಲ್ಲಿ ಬಸವಣ್ಣವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ನಮ್ಮ ಶರಣರು ಪ್ರತಿಪಾದಿಸಿದ ಬಹುದೊಡ್ಡ ಮೌಲ್ಯವೇ ಕಾಯಕ ಆ ಕಾಯಕವನ್ನೇ ತತ್ವವಾಗಿಸಿಕೊಂಡು ದಾಸೋಹ ಸಿದ್ದಾಂತ ಪರಿಪಾಲಿಸಿಕೊಂಡು ಡಾಂಭಿಕ ಆಚರಣೆಗಳಿಗೆ ದೂರವಿಟ್ಟು ಸರ್ವರನ್ನು ಸಮಾನತೆಯಿಂದ ಕಾಣುವ ನಮ್ಮಯ ಗುರುಗಳಾಗಿದರು.ಅವರು ತಮ್ಮ ಬದುಕನು ಬಸವ ಜೀವನದ ದಾರಿಯಲಿ ನಡೆದು ನುಡಿದಂತೆ ನಡೆದು ಪಾವನಾದರು ಕಾಯಕ ತತ್ವ ದಾಸೋಹ ಸಿದ್ಧಾಂತ ದಯೆಯ ಸಂದೇಶ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರ ಬದುಕು ನಮಗೆಲ್ಲರಿಗೂ ಪ್ರೇರಣೆಯಾಗಿಯೇ ಉಳಿಯಬೇಕು ಇದಕ್ಕಾಗಿ ನಾವು ಡಾಕ್ಟರ್ ಚನ್ನಬಸವ ಪಟ್ಟದ್ದೇವರು ಬದುಕಿನ ಚರಿತ್ರೆ ಬಗ್ಗೆ ಕುರಿತು ತಿಳಿದುಕೊಳ್ಳುವುದು ಜರೋರಿಯಾಗಿದೆ ಎಂದು ಖೇಡ ಸಂಗಮ ನೀಲಾಂಬಿಕ ಆಶ್ರಮದ ಪೂಜ್ಯ ಡಾ! ಮಹಾದೇವಮ್ಮ ತಾಯಿಯವರು ಮಾತನಾಡಿದರು.

 ಬಸವ ಜ್ಯೋತಿ ಮನೆಗೊಂದು ಅನುಭವ ಮಂಟಪ ಮಾಸಿಕ ಕಾರ್ಯಕ್ರಮವು ವಿಜಯಲಕ್ಷ್ಮೀ ಶಿವಕುಮಾರ ಎಕಲಾರೆ ಇವರ ಮನೆಯಲ್ಲಿ ನೆರವೆರಿತು.

ಷಟಸ್ಥಲ ಧ್ವಜಾರೋಹಣ ನೇರವೇರಿಸುವ ಮೂಲಕ ಸಣ್ಣ ಪುಟ್ಟ ಮಕ್ಕಳಿಂದ ವಚನ ಗಾಯನ ಮಾಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಅಕ್ಕನ ಬಳಗದವರು ಬಸವ ಭಕ್ತರು ಬಹಳ ಉಲ್ಲಾಸದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿತ್ತು.

ಈ ಸಂದರ್ಭದಲ್ಲಿ ಸಂಗೀತಾ ಸಿದೇಶ್ವರೆ, ವರ್ಷಾ ಬಿರಾದಾರ ಸಂಗಮ, ವೈಶಾಲಿ ಧನೆಗಾವ, ನಿರ್ಮಲಾ ಧನ್ನಾ, ಸವಿತಾ ಎಕಲಾರೆ, ಜಗದೇವಿ ಹಳಕಾಯೆ, ಗೀತಾ ಪಾಂಚಾಳ, ಶಾಂತಾ ನುದನೂರೆ, ಲತಾಬಾಯಿ ಬಿರ್ಗೆ, ಅಂಬಿಕಾ ಹಂಗರಗೆ, ಭಕ್ತಿ ಎಕಲಾರೆ, ತನುಶ್ರೀ ಕಾಳಗಾಪುರೆ, ಚಂದ್ರಕಾಂತ ಎಕಲಾರೆ, ಪ್ರಭು ಹಂಗರಗೆ, ಪ್ರಶಾಂತ ಶೆಟಕಾರ, ನಾಗರಾಜ ಜಾಂತೆ, ರವಿ ಬೆಣ್ಣೆ, ಶ್ರೀಪಾದ ಕುಲಕರ್ಣಿ, ನವನಾಥ ಮುರ್ಕೆ, ಭೀಮ ಹುನಜೆ, ರಮೇಶ ಪಾಂಚಾಳ, ಶ್ರೀಯಶ ಎಕಲಾರೆ, ಅನೇಕರು ಉಪಸ್ಥಿತರಿದ್ದರು.

 ಶರಣೆ ಶಿವಗಂಗಾ ಹಳಕಾಯೆ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.