ಬಾಬುರಾವ ಚಿಂಚನಸೂರ್ ಅಂಬಿಗರ ನಿಗಮ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ ಕಾಂಗ್ರೆಸ್ ಪಕ್ಷದ ನಿರ್ಧಾರಕ್ಕೆ ಕೋಲಿ ಸಮಾಜ ಖಂಡನೆ

ಚಿಂಚೋಳಿ ತಾಲೂಕ ಕೋಲಿ ಸಮಾಜದ ವತಿಯಿಂದ ಸುದ್ದಿಗೋಷ್ಠಿ 

ಬಾಬುರಾವ ಚಿಂಚನಸೂರ್ ಅಂಬಿಗರ ನಿಗಮ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ ಕಾಂಗ್ರೆಸ್ ಪಕ್ಷದ ನಿರ್ಧಾರಕ್ಕೆ ಕೋಲಿ ಸಮಾಜ ಖಂಡನೆ 

ಚಿಂಚೋಳಿ :ಕೋಲಿ ಸಮಾಜದ ಹಿರಿಯ ಮುಖಂಡ ಹಾಗೂ ರಾಜ್ಯ ಸರಕಾರದ ಮಾಜಿ ಸಚಿವ ದೇವೀಂದ್ರಪ್ಪ ಘಾಳಪ್ಪ ಅವರ ಪುತ್ರ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅನೀಲ ಜಮದಾರ ಅವರಿಗೆ ಅಂಬಿಗರ ಚೌಡಯ್ಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೈ ತಪ್ಪಿಸಿ, ಬಿಜೆಪಿ ಪಕ್ಷದಲ್ಲಿದ್ದು, ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ ಮತ್ತು ಅವರ ಪುತ್ರ ಪ್ರೀಕಾಯಂಕ್ ಖರ್ಗೆ ಅವರಿಗೆ ಸೋಲಿಸಿ ತಿರುತ್ತೇನೆಂದು ತೋಡೆ ತಟ್ಟಿ ಲೋಕಸಭೆ ಚುನಾವಣೆಯಲ್ಲಿ ಡಾ. ಮಲ್ಲಿಕಾರ್ಜುನ್ ಖರ್ಗೆ ಯವರಿಗೆ ಸೋಲಿಸಿದ ವ್ಯಕ್ತಿ ಬಾಬುರಾವ ಚಿಂಚನಸೂರ್ ಅವರಿಗೆ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಳಿಸಿ, ಕೆಳಮಟ್ಟದಿಂದ ಪಕ್ಷಕ್ಕೆ ನಿಷ್ಠಾವಂತನಾಗಿ ಕೆಲಸ ನಿರ್ವಹಿಸಿದ ಕೋಲಿ ಸಮಾಜದ ಸಾಮಾನ್ಯ ಕಾರ್ಯಕರ್ತ ಅನೀಲ ದೇವೀಂದ್ರಪ್ಪ ಜಮಾದಾರ ಅವರಿಗೆ ಕಾಂಗ್ರೇಸ್ ಪಕ್ಷ ತುಳಿಯುತ್ತಿದೆ ಎಂದು ಆರೋಪಿಸಿ, ತಾಲೂಕ ಕೋಲಿ ಸಮಾಜದ ಅಧ್ಯಕ್ಷ ಅನೀಲಕುಮಾರ ಜೆ. ಹುಡದಳ್ಳಿ ಅವರು ಕಾಂಗ್ರೇಸ್ ಪಕ್ಷ ಬಾಬುರಾವ ಚಿಂಚನಸೂರ ಅವರಿಗೆ ನೇಮಿಸಿದ ಅಧ್ಯಕ್ಷ ಸ್ಥಾನಕ್ಕೆ ಆಕ್ರೋಶ ವ್ಯಕ್ತಪಡಿಸಿ, ವಿರೋಧಿಸಿದ್ದಾರೆ. 

ಪಟ್ಟಣದ ತಾಲೂಕ ಕೋಲಿ ಸಮಾಜದ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದವರು, ಅನೀಲ ದೇವೀಂದ್ರಪ್ಪ ಜಮಾದಾರ ಅವರು ಕಾಂಗ್ರೇಸ ಪಕ್ಷದ ಕೆಳ ಮಟ್ಟದ ಕಾರ್ಯಕರ್ತನಾಗಿ ಜಮಖಾನಿ ಹಾಸುವದರ ಹಿಡಿದು ನಿಷ್ಠಾವಂತ ಕಾರ್ಯಕರ್ತನಾಗಿ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸದೆ, ತೋಡೆ ತಟ್ಟಿ ತಮ್ಮದೇ ಪಕ್ಷದ ನಾಯಕ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸೋಲಿಸಿ, ಬೀಗಿದ್ದವನಿಗೆ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುತ್ತೀರಾ ಅಂದರೆ, ಪಕ್ಷದಲ್ಲಿ ನಿಷ್ಠಾವಂತರಿಗೆ ಯಾವುದೇ ಬೆಲೆ ಇಲ್ಲ ಎಂದು ತೋರಸಿಕೊಟ್ಟಿದೇ ಕಾಂಗ್ರೇಸ್ ಪಕ್ಷ ಎಂದರು. 

ಸ್ಥಳೀಯ ನಾಯಕರ ಮತ್ತು ಜಿಲ್ಲೆಯ ಕಾಂಗ್ರೇಸ್ ನಾಯಕರು ಅನೀಲ ಜಮಾದಾರ ಅವರ ನಿಷ್ಠೆಗೆ ದಕ್ಕಬೇಕಿದ್ದ ನಿಗಮ ಅಧ್ಯಕ್ಷ ಸ್ಥಾನ ದಕ್ಕಿಸಿ, ಸೂಕ್ತ ಸ್ಥಾನಮಾನ ಒದಗಿಸಿ ಕೊಡುವ ಕೆಲಸ ರಾಜ್ಯ ಮತ್ತು ರಾಷ್ಠೀಯ ನಾಯಕರಿಂದ ಮಾಡಿಸಬೇಕು. ಆಗದೇ ಇದ್ದ ಸಂದರ್ಭದಲ್ಲಿ ತಾಲೂಕ ಕೋಲಿ ಸಮಾಜ ಮತ್ತೋಮೆ ಸಮಾಜ ಸಭೆ ಆಯೋಜಿಸಿ ಅನೀಲ ಜಮಾದಾರ ಅವರನ್ನು ಪಕ್ಷದಿಂದ ಹೊರಗೆ ಬರುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ. ಬರುವ ಜಿಲ್ಲಾ ಮತ್ತು ತಾಲೂಕ ಪಂಚಾಯತ್ ಚುನಾವಣೆಗಳಲ್ಲಿ ಕೋಲಿ ಸಮಾಜದ ಕಡೆಗಣೆನೆಗೆ ತಕ್ಕ ಉತ್ತರವನ್ನು ಕಾಂಗ್ರೇಸ್ ಪಕ್ಷಕ್ಕೆ ನೀಡುತ್ತೇವೆ ಎಂದರು. 

ಈ ಸಂದರ್ಭದಲ್ಲಿ ಕೋಲಿ ಸಮಾಜದ ನಗರ ಘಟಕದ ಅಧ್ಯಕ್ಷ ಚಂದ್ರಕಾಂತ ಘಾಲಿ, ಮಾಜಿ ಅಧ್ಯಕ್ಷ ಶ್ರೀನಿವಾಸ ಘಾಲಿ, ವೆಂಕಟೇಶ ಮೂಲಿಮನಿ, ಮಹೇಶ ಘಾಲಿ, ರಮೇಶ ವಾರಕರ್ ಅಣವಾರ, ಹಣಮಂತ ಗೌರಿ, ರಘು ಹಲಚೇರಿ, ಶರಣು ಹಲಚೇರಿ, ಗೈಬಣ್ಣ ನಾಟಿಕಾರ, ಮಹೇಶ ಮೈಲೂರ, ಮಾಹಾಂತೇಶ ಶೇರಿ, ಸಿದ್ಧಪ್ಪಾ ಮಣಗಿರಿ, ನಾಗೇಶ ಮುದ್ಯಾಳ, ಬಸವಣಪ್ಪ, ಸಾಗರ ಹುಡಗಿ,ಅಂಬರೀಶ ಮಾನಕರ, ಶರಣಪ್ಪ ಕಮನೂರ, ಚಂದ್ರಕಾಂತ, ಮಲ್ಲಿಕಾರ್ಜುನ, ಉದಯಕುಮಾರ ಅವರು ಸೇರಿದಂತ ಸಮಾಜದ ಮುಖಂಡರು ಇದ್ದರು.