ಕಲಬುರಗಿ ದೂರದರ್ಶನ ಕೇಂದ್ರದಿಂದ ಗೋ.ರು.ಚನ್ನಬಸಪ್ಪ ಸನ್ಮಾನ

ಕಲಬುರಗಿ ದೂರದರ್ಶನ ಕೇಂದ್ರದಿಂದ ಗೋ.ರು.ಚನ್ನಬಸಪ್ಪ ಸನ್ಮಾನ

ಕಲಬುರಗಿ ದೂರದರ್ಶನ ಕೇಂದ್ರದಿಂದ ಗೋ.ರು.ಚನ್ನಬಸಪ್ಪ ಸನ್ಮಾನ

ಕಲಬುರಗಿ : ಮಂಡ್ಯದಲ್ಲಿ ಡಿಸೆಂಬರ್ 22 ರಿಂದ ನಡೆಯಲಿರುವ 87 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ನಾಡೋಜ ಗೋ .ರು.ಚನ್ನಬಸಪ್ಪ ಅವರಿಗೆ ನವೆಂಬರ್ 29ರಂದು ಕಲ್ಬುರ್ಗಿ ದೂರದರ್ಶನ ಕೇಂದ್ರಕ್ಕೆ ಭೇಟಿ ನೀಡಿದಾಗ ಆತ್ಮೀಯ ಸನ್ಮಾನ್ಯ ಏರ್ಪಡಿಸಲಾಯಿತು.

    ಕಲ್ಬುರ್ಗಿ ದೂರದರ್ಶನ ಕೇಂದ್ರದಲ್ಲಿ ವಿಶೇಷ ಸಂದರ್ಶನ ನಡೆಸಿದ ನಂತರ ಸನ್ಮಾನ ಕಾರ್ಯಕ್ರಮ ಇಟ್ಟುಕೊಳ್ಳಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಅಪ್ಪಾ ರಾವ್ ಅಕ್ಕೋಣೆ ಅವರ ನೇತೃತ್ವದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕಲಬುರಗಿ ದೂರದರ್ಶನ ಕೇಂದ್ರದ ಅತಿಥಿ ನಿರೂಪಕರಾದ ಡಾ.ಸದಾನಂದ ಪೆರ್ಲ ,ಪ್ರಸಾರ ನಿರ್ವಾಹಕರಾದ ಸಂಗಮೇಶ್, ತಾಂತ್ರಿಕ ವಿಭಾಗದ ಅಸ್ಲಾಂ ಖಾಸ್ ದಾರ್, ದಶರಥ ಮರತೂರ್, ಮಲ್ಲಿಕಾರ್ಜುನ್,

ಸಿದ್ಧರಾಮ, ಸೌಂದರ್ಯ ತಜ್ಞೆ ಮಹಾನಂದ ಅಣಕಲ್ ಇದ್ದರು.

 ದೂರದರ್ಶನ ಕೇಂದ್ರ ನಮ್ಮ ಹೆಮ್ಮೆ: ಗೋ.ರು.ಚ

ಕಲಬುರಗಿ ದೂರದರ್ಶನ ಕೇಂದ್ರವು ಅತ್ಯಂತ ಹಳೆಯದು ಮತ್ತು ನಮ್ಮ ಹೆಮ್ಮೆ ಎಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಗೋ.ರು. ಚೆನ್ನಬಸಪ್ಪ ಅಭಿಪ್ರಾಯ ಪಟ್ಟರು. 

    ದೂರದರ್ಶನ ಕೇಂದ್ರದ ಸಂದರ್ಶನ ನಂತರ ಮಾತನಾಡಿ ಹೈದರಾಬಾದಿನಲ್ಲಿ ಕಾರ್ಯಕ್ರಮ ಸಿದ್ದಪಡಿಸಿ ಕಲ್ಬುರ್ಗಿ ದೂರದರ್ಶನಕ್ಕೆ ನೀಡುತ್ತಿದ್ದ ವೇಳೆಯಲ್ಲಿ ಮಾಧ್ಯಮ ಕುರಿತಾದ ಸಂದರ್ಶನದಲ್ಲಿ ಪಾಲ್ಗೊಂಡ ಅನುಭವ ನೆನಪಿಸಿಕೊಂಡು

ಮಾತನಾಡಿ ಅತ್ಯಂತ ಹಳೆಯ ಕಲಬುರಗಿ ದೂರದರ್ಶನ ನಮಗೆ ಹೆಮ್ಮೆ ಮತ್ತು ಅದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಸಲಹೆ ನೀಡಿದರು . ಪ್ರಸ್ತುತ ನೂತನ ಕಾರ್ಯಕ್ರಮಗಳನ್ನು ವಿಸ್ತರಿಸಿ ಇದನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಇದಕ್ಕಾಗಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಸುಸಜ್ಜಿತ ಕಾರ್ಯಕ್ರಮ ಸಿದ್ಧಪಡಿಸುವ ಕೇಂದ್ರವಾಗಿ ಪರಿವರ್ತನೆ ಮಾಡಬೇಕಾಗಿದೆ ಎಂದು ಗೋ.ರು. ಚನ್ನಬಸಪ್ಪ ಹೇಳಿದರು.