ಇಂದಿನ ಯುವಕರು ಸಂವಿಧಾನ ಒದಗಿಸಿದ ಹಕ್ಕು ಕರ್ತವ್ಯಗಳ ಮಹತ್ವ ಅರಿಯಬೇಕು

ಇಂದಿನ ಯುವಕರು ಸಂವಿಧಾನ ಒದಗಿಸಿದ ಹಕ್ಕು ಕರ್ತವ್ಯಗಳ ಮಹತ್ವ ಅರಿಯಬೇಕು

ಚಿಂಚೋಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ಸಮರ್ಪಣೆ ದಿನ ಆಚರಣೆ 

ಇಂದಿನ ಯುವಕರು ಸಂವಿಧಾನ ಒದಗಿಸಿದ ಹಕ್ಕು ಕರ್ತವ್ಯಗಳ ಮಹತ್ವ ಅರಿಯಬೇಕು 

ಚಿಂಚೋಳಿ : ದೇಶದ ಯುವ ಪೀಳಿಗೆ ಸಂವಿಧಾನವು ನೀಡಿರುವ ಹಕ್ಕು ಮತ್ತು ಕರ್ತವ್ಯಗಳ ಮಹತ್ವವನ್ನು ಅರಿತುಕೊಂಡು ಜವಬ್ದಾರಿಯುತ ನಾಗರೀಕರಾಗಬೇಕೆಂದು ಕ್ಷೇತ್ರ ಶಿಕ್ಷಣ ಇಲಾಖೆಯ ಗಡಿಕೇಶ್ವರ ವಲಯದ ಸಮನ್ವಯ ಸಂಪನ್ಮೂಲ ವ್ಯಕ್ತಿ ಶಿವಯೋಗಿ ಚಿತ್ತಾಪೂರ ಹೇಳಿದರು. 

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಸಂವಿಧಾನ ಸಮರ್ಪಣೆ ದಿನ ಆಚರಣೆ ಕಾರ್ಯಕ್ರಮದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ ತಿಳಿಸಿದ ಅವರು, 

ನಮ್ಮ ದೇಶದ ಸಂವಿಧಾನವು ಇಲ್ಲಿಯವರೆಗೆ 106 ಬಾರಿ ತಿದ್ದುಪಡಿಮಾಡಲಾಗಿದೆ. ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದ ಸಂವಿಧಾನ ನಮ್ಮದಾಗಿದೆ. ಇಂತಹ ಸಂವಿಧಾನವನ್ನು ಉಳಿಸಿಕೊಳ್ಳುವ ಜವಬ್ದಾರಿಯು ಇಂದಿನ ಯುವಜನತೆಯ ಮೇಲಿದೆ. ಭಾರತ ದೇಶಕ್ಕೆ ತನ್ನದೆಯಾದ ಸಂವಿಧಾನ ರಚನೆ ಮಾಡಿಕೊಳ್ಳಲು ಕ್ಯಾಬಿನೆಟ್ ಮಿಷನ್ ಅನುಮತಿಯನ್ನು ನೀಡಿತು. ಅದರಂತೆ ಸಂವಿಧಾನ ರಚನೆ ಮಾಡಲು ಸಂವಿಧಾನ ರಚನಾ ಸಮಿತಿಯನ್ನು ಪರೋಕ್ಷ ಚುನಾವಣೆಯ ಮೂಲಕ ಆಯ್ಕೆಮಾಡಲಾಯಿತು. ಅಚ್ಚುಕಟ್ಟಾಗಿ ಸಂವಿಧಾನ ರಚನೆಯ ಜವಬ್ದಾರಿಯನ್ನು ನಿರ್ವಹಿಸಲು ಸುಮಾರು 22 ಸಮಿತಿಗಳಿದ್ದವು. ಅದರಲ್ಲಿ ಪ್ರಮುಖವಾಗಿ ಸಂವಿಧಾನ ರಚನಾ ಕರಡು ಸಮಿತಿ ಪ್ರಮುಖವಾದದ್ದು. ಇದರ ಅಧ್ಯಕ್ಷರಾಗಿ ಡಾ.ಬಿ.ಆರ್.ಅಂಬೇಡ್ಕರರವರಾಗಿ ನೇಮಕ ಗೊಂಡು, ಸಂವಿಧಾನ ರಚನೆಯಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಿದ್ದರು. ಭಾರತ ದೇಶವು ಬಹು ಸಂಸ್ಕೃತಿವುಳ್ಳ ದೇಶವಾಗಿದ್ದರು ಕೂಡ ಇಂತಹ ದೇಶಕ್ಕೆ ಹೊಂದಾಣಿಕೆಯಾಗುವಂತಹ ಸಂವಿಧಾನವನ್ನು ರಚನೆ ಮಾಡುಕೊಟ್ಟಿದ್ದಾರೆ ಡಾ.ಅಂಬೇಡ್ಕರ್ ಅವರು. ನಮ್ಮ ದೇಶದ ಸಂವಿಧಾನವು ಎಲ್ಲಾ ಜನರಿಗೂ ಸಮಾನವಾದ ಅವಕಾಶಗಳನ್ನು ನೀಡಿದೆ. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ತತ್ವಗಳನ್ನು ಒಳಗೊಂಡಿದೆ. one man one vote one value ಎಂಬುವಂತೆ ಪ್ರತಿಯಬ್ಬರಿಗೂ ಮತದಾನದ ಹಕ್ಕನ್ನು ನೀಡಿದೆ. ಈ ಒಂದು ಮತವನ್ನು ನಾವು ಜವಬ್ದಾರಿಯಿಂದ ಚಲಾಯಿಸುವ ಮೂಲಕ ಒಳ್ಳೆಯ ಜನಪ್ರತಿನಿದಿಗಳನ್ನು ಆಯ್ಕೆಮಾಡುವ ಜವಬ್ದಾರಿತನ ತಿಳುವಳಿಕೆ ಮೂಡಿಸುಕೊಳ್ಳುವ ಆಯ್ಕೆ ಇಂದಿನ ಯುವಕರ ಮೇಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಬಸವರಾಜೇಶ್ವರಿ ಹಾಲು ಅವರು ವಹಿಸಿದರು. 

ರಾಜ್ಯ ಶಾಸ್ತ್ರ ಉಪನ್ಯಾಸಕ ನಾಗಪ್ಪ ಪೂಜಾರಿ ಸ್ವಾಗಸಿದರು. ಡಾ. ವಿಶ್ವನಾಥ ರೆಡ್ಡಿ ನಿರೂಪಿಸಿದರು. 

ಈ ಸಂದರ್ಭದಲ್ಲಿ ಉಪನ್ಯಾಸಕರಾದ ವಾಹಿದ್, ನಾಗಪ್ಪ ಪೂಜಾರಿ, ಕಲ್ಯಾಣಮ್ಮ, ಅನ್ನಪೂರ್ಣೇಶ್ವರಿ ಸೇಡಂಕರ್, ಸತೀಶಕುಮಾರ, ಡಾ. ರೇಷ್ಮಾ ಬೇಗಂ, ಲಕ್ಷ್ಮಪ್ಪ, ಕ್ಷೇಮಲಿಂಗ, ರೂಪೇಶ, ಎಂ. ಡಿ. ಆರೀಫ್, ಅಂಬರೀಶ, ಡಾ. ವೈಶಾಲಿ, ಡಾ. ಸಂಜೀವಿನಿ, ಮಧುರಾ ಸೇರಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.