ಕಾಯಕ ದಾಸೋಹ ಶರಣ ಹೂಗಾರ ಮಾದಯ್ಯ : ದತ್ತಾತ್ರೇಯ ಪಾಟೀಲ ರೇವೂರ

ಕಾಯಕ ದಾಸೋಹ ಶರಣ ಹೂಗಾರ ಮಾದಯ್ಯ : ದತ್ತಾತ್ರೇಯ ಪಾಟೀಲ ರೇವೂರ

ಕಾಯಕ ದಾಸೋಹ ಶರಣ ಹೂಗಾರ ಮಾದಯ್ಯ : ದತ್ತಾತ್ರೇಯ ಪಾಟೀಲ ರೇವೂರ 

ಕಲಬುರಗಿ: ಬಸವಣ್ಣನವರ ಅನುಭವ ಮಂಟಪದಲ್ಲಿ ಹೂಗಾರ ಮಾದಯ್ಯನವರು ಕಾಯಕ ದಾಸೋಹ ಕೈಗೊಂಡು ಮಹಾ ಶರಣರಾಗಿದ್ದರು ಎಂದು ಮಾಜಿ ಶಾಸಕ ದತ್ತಾತ್ರೇಯ ಸಿ.ಪಾಟೀಲ ಹೇಳಿದರು.

ಇಂದು ರಾಜಾಪುರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹೂಗಾರ ಮಾದಯ್ಯ ಯುವಕ ಸಂಘವು ಆಯೋಜಿಸಿದ ಶರಣ ಹೂಗಾರ ಮಾದಯ್ಯ ಜಯಂತಿಯ ಕಾರ್ಯಕ್ರಮದಲ್ಲಿ ಮಾದಯ್ಯನವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಮಾದಯ್ಯನವರು ದಿನನಿತ್ಯ   ಬೆಳಗಿನ ಜಾವ ಕಲ್ಯಾಣದಲ್ಲಿ ಶರಣರ ಮನೆ ಮನೆಗಳಿಗೆ ಸುತ್ತಾಡಿ ಹೂ-ಪತ್ರೆಗಳನ್ನು ತಲುಪಿಸಿ ಮಹಾಶರಣ ಎನಿಸಿಕೊಂಡರು ಎಂದರು .

ಆಳಂದ ಹಿರೇಮಠದ ಪೂಜ್ಯ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದರು.

ಹೂಗಾರ ಸಮಾಜ ಹುಟ್ಟಿನಿಂದ ಮರಣದವರೆಗೆ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ಎಲ್ಲರನ್ನು ಬೇಕಾಗುವ ಸಮ ಸಮಾಜ ಅದು ಹೂಗಾರ ಸಮಾಜದ ಎಂದು ನದಿಸಿನ್ನೂರು ಮಹಾಶಕ್ತಿ ಪೀಠದ ಗುರು ರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬಸವಾದಿ ಶರಣ ಹೂಗಾರ ಮಾದಯ್ಯ ಅವರ ಜೀವನ ಮೌಲ್ಯಗಳ ಕುರಿತು ಶರಣ ಸಾಹಿತಿ ಶಿಕ್ಷಕ ಸಂತೋಷ ಹೂಗಾರ ವಿಶೇಷ ಉಪನ್ಯಾಸ ನೀಡಿದರು.

ಹೂಗಾರ ಮಾದಯ್ಯ ಶರಣರ ಭವನಕ್ಕೆ ಉಚಿತ ನಿವೇಶನ ನೀಡುವುದಾಗಿ ಸಮಾಜ ಸೇವೆಕಿ ದಿವ್ಯ ಹಾಗರಗಿ ಘೋಷಿಸಿದರು.

ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ ಹೂಗಾರ, ಅಧ್ಯಕ್ಷತೆ ವಹಿಸಿದರು, ಮಾ.ಪಾ.ಸ.ಹೊನ್ನಮ್ಮ ಬಾಬು , ಈರಣ್ಣ ಹೊನ್ನಳ್ಳಿ, ಮಹೇಶ್ ಹೂಗಾರ,

ಅಶೋಕ್ ಹೂಗಾರ , ಸಮಾಜ ಹಿರಿಯ ಮುಖಂಡರಾದ ಶ್ರೀ ಹಣಮಂತರಾಯ ಕುರಕೋಟಾ , ಅನೀಲ ಹೂಗಾರ, ಅಂಬರೀಶ , ಮಹೇಶ, ನಾಗರಾಜ, ರಾಜು, ಮಲ್ಕಣ್ಣ, ರವಿ, ಗುರುರಾಜ ಹೂಗಾರ ಮತ್ತು ವಿಶ್ವನಾಥ ತೊಟ್ನಳ್ಳಿ ಉಪಸ್ಥಿತಿಇದ್ದರು .

ಮಲ್ಲಿಕಾರ್ಜುನ್ ಹೂಗಾರ ಸ್ವಾಗತಿಸಿದರು, ರಮೇಶ್ ಯಾಳಗಿ ನಿರೂಪಿಸಿದರು.